ಅಧಿಕಾರಿಗಳ ದಾಳಿ: ಪ್ಲಾಸ್ಟಿಕ್ ವಸ್ತುಗಳ ವಶ

ಮುದಗಲ್,ಜು.೨೧-
ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮುದಗಲ್ಲ ಪುರಸಭೆ ಮುಖ್ಯಾಧಿಕಾರಿ ಎಂ ನಭಿ ಕಂದಗಳ ಹಾಗೂ ನೈಮಲ್ಯ ಅಧಿಕಾರಿ ರೈಮತ್ ಹುನ್ನಿಸಾ ಬೇಗಂ ಪಟ್ಟಣದಲ್ಲಿ ಅಂಗಡಿಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಠಿಣ ಕ್ರಮದ ಎಚ್ಚರಿಕೆ:
ಮುದಗಲ್ಲ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಎಂ ನಭಿ ಕಂದಗಳ ಹಾಗೂ ನೈಮಲ್ಯ ಅಧಿಕಾರಿ ಯಾದ ರೈಮತ್ ಹುನ್ನಿಸಾ ಬೇಗಂ ಹಾಗೂ ಪೌರ ಕಾರ್ಮಿಕರು ಸೇರಿ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಕೆಲವು ವರ್ತಕರು ಮೇಲೆ ದಂಡ ವಿಧಿಸಿದರು ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ಮುಂದುವರಿದರೆ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.