ಅಧಿಕಾರಿಗಳು ಸೌಜನ್ಯಯುತವಾಗಿ ವರ್ತಿಸಬೇಕು

ಚನ್ನಗಿರಿ. ಏ.೨೭; ಕೋವಿಡ್-19 ಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಭೆ ನಡೆಸಲಿದ್ದಾರೆ. ಈ ವೇಳೆ ಮಾತನಾಡಿದ ಶಾಸಕರು ಅಧಿಕಾರಿಗಳು ಜನರಿಗೆ ಪ್ರೀತಿಯಿಂದ ವರ್ತನೆಯನ್ನು ಮಾಡಬೇಕು ಎಂದರು.ಪ್ರಥಮ ಬಾರಿಗೆ ಚನ್ನಗಿರಿಯಲ್ಲಿಒಂದು ಸಾವು ಸಂಭವಿಸಿದೆ.ಚನ್ನಗಿರಿ ತಾಲೂಕಿನ ಕೋವಿಡ್ 192 ಇದೆ.ಚನ್ನಗಿರಿ ತಾಲ್ಲೂಕು ಪ್ರತಿ ಹಳ್ಳಿಯ ಜನರಿಗೆ ಲಸಿಕೆ ಹಾಕಿಸಬೇಕು ಎಂದು ಹೇಳಿದರುಪುರಸಭೆ ಮುಖ್ಯಾಧಿಕಾರಿಗೆ ನಗರವನ್ನು ಸ್ವಚ್ಚತೆಗೆ ಹೆಚ್ಚು ಗಮನವನ್ನು ಹರಿಸಬೇಕು ಎಂದರು.ಪ್ರತಿ ಹಳ್ಳಿಯ ಜನರಿಗೆ ಬೇರೆ ಕಡೆಯಿಂದ ಬರುವಂತ ಜನರು ತಪಾಸಣೆ ಮಾಡಿಸಿಕೊಳ್ಳಬೇಕು.ಚನ್ನಗಿರಿಯಲ್ಲಿ 50 ಜನರಿಗೆ ಚಿಕಿತ್ಸೆ ಬೆಡ್  ಸಿದ್ಧವಾಗಿದೆ ಎಂದು ಹೇಳಿದರು.ಸಿಪಿಐಮಧು, ಇಓ ಪ್ರಕಾಶ್ ಇದ್ದರು.