ಅಧಿಕಾರಿಗಳು ಸಾರ್ವಜನಿಕ ಸಮಸ್ಯೆಗೆ ಸ್ಪಂಧಿಸಬೇಕು: ಶಾಸಕ ಡಾ.ಅವಿನಾಶ ಜಾಧವ

ಚಿಂಚೋಳಿ,ಜೂ.7- ತಾಲೂಕ ಪಂಚಾಯತ ಸÀಭಾಂಗಣದಲ್ಲಿ ಶಾಸಕರಾದ ಡಾ. ಅವಿನಾಶ ಜಾಧವ, ಅವರ ಅಧ್ಯಕ್ಷತೆಯಲ್ಲಿ ಚಿಂಚೋಳಿ ತಾಲೂಕ ಮತ್ತು ಕಾಳಗಿ ತಾಲೂಕು ಪ್ರಗತಿ ಪರಿಶೀಲನಾ ಸಭೆ ಜರುಗಿತು.
ಈ ಸಭೆಯಲ್ಲಿ ಶಾಸಕರು ಮಾತನಾಡಿ ಎರಡು ತಾಲೂಕ ವಿವಿಧ ಅಧಿಕಾರಿಗಳು ಜನ ಜನಸಾಮಾನ್ಯರ ಕೆಲಸವನ್ನು ವಿಳಂಭ ಮಾಡದೆ ಜನರಿಗೆ ಅನುಕೂಲವಾಗುವಂತೆ ಕೆಲಸವನ್ನು ತೊರಿತವಾಗಿ ಮಾಡಬೇಕು ಮುಂಬರುವ ದಿನದಲ್ಲಿ ಚಿಂಚೋಳಿ ತಾಲೂಕ ಮತ್ತು ಕಾಳಗಿ ತಾಲೂಕಿನ ಜನರ ಸಮಸ್ಯೆಗಳು ನನ್ನತ್ರ ಬರದಂತೆ ಅಧಿಕಾರಿಗಳು ಸ್ಪಂಧಿಸಬೇಕು ಎಂದರು.
ಯಾವುದೇ ಸಮಸ್ಯೆ ತಮ್ಮ ಗನಕ್ಕೆ ಬಂದರಲ್ಲಿ ಪರಿಹರ ಕಂಡುಕೊಳ್ಳಬೇಕು ನಾನೇ ಹೇಳಬೇಕೆಂದು ಕಾಯಬಾರದು, ಜನರಿಗೆ ಅನುಕೂಲ ಮಾಡಿಕೊಡಬೇಕು ಸಣ್ಣ ಸಣ್ಣ ಕೆಲಸಕ್ಕೆ ಶಾಸಕರ ಹೇಳಿದರೆ ಮಾತ್ರ ತಾವು ಅಧಿಕಾರಿಗಳು ಮಾಡ್ತೀನಿಂದರೆ ತಪ್ಪಾಗುತ್ತದೆ ಎಲ್ಲಾ ಅಧಿಕಾರಿಗಳು ಪ್ರತಿಯೊಂದು ಗ್ರಾಮದಲ್ಲಿ ಏನೇ ಸಮಸ್ಯೆ ಇದ್ದರೂ ಕೂಡ ತಾವು ಸಮಸ್ಯೆಗಳನ್ನು ಬಗೆಹರಿಸುವ ಕೆಲಸಗಳನ್ನು ಸಹ ಮಾಡಬೇಕು.
ಯಾರೇ ಅಧಿಕಾರಿಗಳಿಗೆ ಕಿರುಕುಳ ಮತ್ತು ಬ್ಲಾಕ್ ಮೇಲ್ ಮಾಡಿದರೆ ತಕ್ಷಣವೇ ಪೆÇಲೀಸ್ ಇಲಾಖೆ ಮತ್ತು ನನ್ನತ್ರ ಬಂದರೆ ಅಂತವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ನಾನು ಸೂಚಿಸುತ್ತೇನೆ ಎಲ್ಲಾ ಅಧಿಕಾರಿಗಳು ಧೈರ್ಯದಿಂದ ನಿಷ್ಠೆಯಿಂದ ತಾಲೂಕಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು ಸಭೆಯಲ್ಲಿ ಚಿಂಚೋಳಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕಾಧಿಕಾರಿ ವೈ.ಎಲ್.ಹಂಪಣ್ಣಾ, ಕಾಳಗಿ ಕಾರ್ಯನಿರ್ವಾಹಕಾಧಿಕಾರಿ ವೆಂಕಟ ಶಿಂಧೆ ಚಿಂಚೋಳಿ ತಹಸಿಲ್ದಾರ ವೀರೇಶ್ ಮುಳುಗುನಮಠ ಕಾಳಗಿ ತಹಸಿಲ್ದಾರ ಸಂಗಯ್ಯಾ ಸ್ವಾಮಿ, ವಿವಿಧ ಅಧಿಕಾರಿಗಳಾದ. ಡಾ.ಮಹುದ್ ಗಫಾರ, ವಿಶ್ವನಾಥ ಸಜ್ಜನ, ಪ್ರಕಾಶ ಕುಲಕರ್ಣಿ, ವೆಂಕಟೇಶ ದುಗ್ಗನ್, ಕಾಶಿನಾಥ ಧನ್ನಿ, ಅಶೋಕ ಪಾಟೀಲ, ಪ್ರಭುಲಿಂಗ ಬುಳ್ಳಾ, ಅನುಸೋಯ ಚವ್ಹಾಣ, ಡಾ.ಸಂತೋಷ ಪಾಟೀಲ, ಧನರಾಜ ಭೋಮ್ಯಾ, ರಾಜೇಶ ಪಾಟೀಲ, ಶಾಂತರೆಡ್ಡಿ, ಶ್ರೀಕಾಂತ ರಾಠೋಡ, ನಟರಾಜ್, ಸಿದ್ದರೂಡ ಹುಕ್ಕುಂಡಿ, ಶಾಂತಲಿಂಗಯ್ಯ ಸ್ವಾಮಿ, ಮೋಹನ್ ರಾಠೋಡ, ಚೇತನ್ ಕಳಸ್ಕರ, ರಾಜಕುಮಾರ,ಮತ್ತು ಅನೇಕ ಚಿಂಚೋಳಿ ತಾಲೂಕ ಮತ್ತು ಕಾಳಗಿ ತಾಲೂಕಿನ ವಿವಿಧ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು