ಅಧಿಕಾರಿಗಳು ಸಾರ್ವಜನಿಕರೊಡನೆ ಸರಿಯಾಗಿ ವರ್ತಿಸಿ


ಚನ್ನಮ್ಮನ ಕಿತ್ತೂರ,ಆ.26: ಅಧಿಕಾರಿಗಳು ಸಾರ್ವಜನಿರೊಡನೆ ಸರಿಯಾಗಿ ವರ್ತಿಸಿ ಅವರ ಕುಂದು-ಕೊರತೆ ಆಲಿಸಬೇಕು, ಇಲ್ಲದಿದ್ದರೆ ಕ್ರಮಕೈಕೊಳ್ಳಬೇಕಾಗುತ್ತೆಯೆಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಸ್ಥಳೀಯ ತಾ.ಪಂ. ಸಭಾಂಗಣದಲ್ಲಿ ಪ್ರಗತಿ ಪರಿಶೀ¯ನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಜನರಿಗೆ ಸರ್ಕಾರದ ಯೋಜನೆಗಳನ್ನು ಸಕಾಲಕ್ಕೆ ತಲುಪಿಸುವುದರ ಮೂಲಕ ಅತ್ಯಂತ ವೇಗವಾಗಿ ಅಭಿವೃದ್ಧಿ ಸಾಧಿಸಲು ಅಧಿಕಾರಿ ವೃಂದ ಪ್ರಾಮಾಣಿಕ ಸಹಕಾರ ನೀಡಬೇಕು. ಜನವಿರೋಧಿ ಅಧಿಕಾರಿಗಳಿಗೆ ಅವಕಾಶವಿಲ್ಲ ಎಂದರು.
ತಾ.ಪಂ.ಮುಖ್ಯಾಧಿಕಾರಿ ಸುಬಾಸ್ ಸಂಪಗಾಂವ ಮಾತನಾಡಿ ಎಲ್ಲ ಗ್ರಾ.ಪಂ.ಗಳಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಕಾರ್ಯಕ್ರಮ ವಿಕ್ಷೀಸಲು ಎಲ್ಲರಿಗೂ ಅನೂಕೂಲವಾಗುವಂತೆ ನೂಡಲ್ ಅಧಿಕಾರಿಗಳು ವ್ಯವಸ್ಥೆ ಮಾಡಿಕೊಳ್ಳಬೇಕು. ಪ್ರತಿಯೊಂದು ಇಲಾಖೆಯಲ್ಲಿ ಅಧಿಕಾರಿಗಳು ದಕ್ಷ ಪ್ರಾಮಾಣಿಕತೆ ಕಾಪಾಡಿಕೊಂಡು ಕೆಲಸ ಮಾಡಬೇಕೆಂದು ಎಂದರು.
ಇದಕ್ಕೂ ಪೂರ್ವದಲ್ಲಿ ಶಾಸಕರು 10 ಜನ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಿದರು.
ಈ ವೇಳೆ ತಹಶೀಲ್ದಾರ ರವಿಂದ್ರ ಹಾದಿಮನಿ, ತಾ.ಪಂ. ಆಡಳಿತಾಧಿಕಾರಿ ಹಾಗೂ ಜಿಲ್ಲಾ ಪಶುಪಾಲನಾ ಉಪರ್ದೇಶಕ ರಾಜೇಂದ್ರ ಕೊಲೇರ್, ಪಿಡಬ್ಲೂಡಿ ಅಭಿಯಂತರರು ಆರ್.ಪಿ.ಖಾನಾಪುರೆ, ಮೀರಜಕರ, ಶಿಕ್ಷಣಾಧಿಕಾರಿ ಗ್ರಾಯತ್ರಿ ಅಜ್ಜನವರ, ಸಿ.ಬಿ. ಯಮನೂರ, ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.