ಅಧಿಕಾರಿಗಳು ನಿರ್ಭಯದಿಂದ ನಿಸ್ವಾರ್ಥಸೇವೆ ಮಾಡಬೇಕು

ಜಗಳೂರು.ಜೂ.14; ಅಧಿಕಾರಿಗಳು ಮುಕ್ತವಾಗಿ ಜನರ ಮನಮುಟ್ಟುವಂತೆ ಕೆಲಸಮಾಡಿ.ನಿಷ್ಠೆ,ಪ್ರಾಮಾಣಿಕ,ಸೇವೆಗೆ ನನ್ನ ಬೆಂಬಲ ರಕ್ಷಣೆಯಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಮತ ವ್ಯಕ್ತ ಪಡಿಸಿದರು.ನಂತರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿರಿಗೆರೆ ಶ್ರೀಗಳ ಪಾಲಿಸುವ ನಾನು ಸಮಯಕ್ಕೆ ಮಹತ್ವ ನೀಡುವೆ ಅಧಿಕಾರಿಗಳು ಯಾವುದೇ ಇಲಾಖೆಗಳಲ್ಲಾಗಲಿ ಕರ್ತವ್ಯದ ಅವಧಿಯಲ್ಲಿ ಕೆಲಸ ಮತ್ತು ಸಮಯಕ್ಕೆ ಒತ್ತು ಕೊಡಬೇಕು  ಜಗಳೂರು ಗೊಲ್ಲರಹಟ್ಟಿ ಸರಕಾರಿ ಶಾಲೆ ಮಧ್ಯಾಹ್ನ 3.45 ಕ್ಕೆ ಬೀಗ ಹಾಕಲಾಗಿತ್ತು ಇದು ಮರುಕಳಿಸಬಾರದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರುತಾಲೂಕಿನಲ್ಲಿ ನೀರಾವರಿ ಮೂಲಗಳಿಲ್ಲ.ಕಡಿಮೆ ಮಳೆ‌ಯಾಗುವು ದರಿಂದ ಮುಂಗಾರು ಬಿತ್ತನೆಗೆ ಮುಂಜಾಗ್ರತವಾಗಿ ಬಿತ್ತನೆ ಬೀಜ ರಸಗೊಬ್ಬರ,ಕೃಷಿ ಪರಿಕರಗಳನ್ನು ನಿಗದಿತ ಸಮಯದಲ್ಲಿ ಪೂರೈಕೆ ಮಾಡಬೇಕು.ರೈತರು ದಂಗೆ ಎದ್ದರೆ ನಾವು ನೀವು ಇಬ್ಬರೂ ಉಳಿಯುವುದಿಲ್ಲ ಎಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.ತೋಟಗಾರಿಕೆ ಇಲಾಖೆ ಸಂಬಂಧಿಸಿದ ಏಜೆನ್ಸಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.ರೈತರಿಂದ ದೂರುಗಳು ಬಂದಿವೆ.ಮುಂದಿ ನ ದಿನಗಳಲ್ಲಿ ಏಜೆನ್ಸಿಗಳ ಬಗ್ಗೆ ನನ್ನ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು. ತಾಲೂಕು ವೈದ್ಯಾಧಿಕಾರಿ ಡಾ.ನಾಗರಾಜ್ ತಾಲೂಕಿನಲ್ಲಿ 115 ಕ್ಷಯರೋಗಿಗಳಿದ್ದು ಅವರಿಗೆ ಪೌಷ್ಠಿಕ ಆಹಾ ರ ಪೂರೈಕೆಗೆ ಮಾಸಿಕವಾಗಿ ತಲಾ ₹500 11 ಕುಷ್ಠ ರೋಗಿಗಳಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.ಇದೇ ವೇಳೆ ಸಾರ್ವಜನಿಕ ಆಸ್ಪತ್ರೆಯ ಹಳೇ ಕಟ್ಟಡದ ಶವಗಾರದ ಆವರಣ ದಲ್ಲಿ ಸ್ವಚ್ಛತೆ ಕಾಪಾಡಿ ಇಲ್ಲವಾದರೆ ನಾನೇ ಪರಕೆ ಹಿಡಿದು ಸ್ವಚ್ಛ ಗೊಳಿಸುವೆ ಎಂದ ಅವರು ನಿಮ್ಮ ಮೇಲೆ ರಾಜಕಾರಣದ ಆರೋಪಗಳು ಕೇಳಿಬಂದಿವೆ ರಾಜಕೀಯ ಮಾಡುವುದಾದರೆ ರಾಜಿನಾಮೆ ಕೊಟ್ಟು ಬನ್ನಿ ಆರೋಪಗಳು ಮರುಕಳಿಸಿದರೆ ಶಿಸ್ತಿನ ಕ್ರಮ ಕೈಗೊಳ್ಳುವೆ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.ಪಟ್ಟಣದ ವಿದ್ಯಾನಗರ ಪತ್ರಿಕ ಭವನದ ಪಾರ್ಕ್ ಹತ್ತಿರ ಲಕ್ಷ್ಮಮ್ಮ ಪಾರ್ಕ್ ,ಸೇರಿದಂತೆ ವಿವಿದೆಡೆ,ಬಯಲು ರಂಗ ಮಂದಿರ ಗುರು ಭವನದ ಆವರಣದಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಎಂದು ಪೊಲೀಸ್ ಇಲಾಖೆ ಅಧಿಕಾರಿಗೆ ಸೂಚಿಸಿದರು.ನಾನು ವಿನಾಕಾರಣ ಯಾರನ್ನೂ ದಂಡಿಸುವುದಿಲ್ಲ ಅಧಿಕಾರಿಗಳು ನಿರ್ಭಯದಿಂದ ನಿಸ್ವಾರ್ಥಸೇವೆ ಮಾಡಿ 5 ವರ್ಷದಲ್ಲಿ ಕ್ಷೇತ್ರದ ಅಭಿವೃದ್ದಿಗೆ ಸಂಕಲ್ಪಮಾಡೋಣ ಎಂದರು.ಅರಣ್ಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ:- ತಾಲೂಕಿನಲ್ಲಿನ ಕೊಂಡಕುರಿ ಅಭಯಾರಣ್ಯವನ್ನು ಉಳಿಸಬೇಕು.ಅರಣ್ಯ ಇಲಾಖೆ ಗಳ ಅಧಿಕಾರಿಗಳು ನಿರ್ಲಕ್ಷ್ಯದಿಂದ ಟ್ರ್ಯಾಕ್ಟರ್,ಗಳು ಕುರಿಗಾಹಿಗಳು ಅರಣ್ಯದೊಳಗೆ ಕಾಲಿಡುತ್ತಾರೆ ತಾವುಗಳು ಅವರನ್ನು ಹಿಡಿಯುವ ನೆಪದಲ್ಲಿ ಗೊಂದ ಸೃಷ್ಠಿಸುತ್ತೀರಾ ಅವರು ರಾಜಕಾರಣಿಗಳಿಗೆ ದೂರವಾಣಿ ಕರೆ ಮಾಡುತ್ತಾರೆ.ತಾವು ಎಚ್ಚರದಿಂದ ಕರ್ತವ್ಯ ಪಾಲಿಸಿ ಅಲ್ಲದೆ ಕಾಡುಪ್ರಾಣಿಗಳ ದಾಳಿಯಿಂದ ಬೆಳೆಹಾನಿಗೊಳ ಗಾದ ರೈತರಿಗೆ ಕಡ್ಡಾಯವಾಗಿ ಪರಿಹಾರ ಒದಗಿಸಬೇಕು ಅರಣ್ಯ ದಂಚಿನಲ್ಲಿರುವ ಜಮೀನಿನ ರೈತರಿಗೆ ಜಾಗೃತಿ ಮೂಡಿಸಿ ಎಂದು ತಿಳಿಸಿದರು.