ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲಿದ್ದು ಚುರುಕಾಗಿ ಕೆಲಸಮಾಡಬೇಕು: ಸಚಿವ ಈಶ್ವರ ಬಿ. ಖಂಡ್ರೆ

ಬೀದರ: ಡಿ.10: ಜಿಲ್ಲೆಯಲ್ಲಿರುವ ಪಿಡಿಓಗಳು, ಗ್ರಾಮ ಲೆಕ್ಕಿಗರು, ವೈದ್ಯರು, ನಗರಸಭೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲಿ ಇರುತ್ತಿಲ್ಲ ಎಂಬುವುದು ನನ್ನ ಗಮನಕ್ಕೆ ಬಂದಿದೆ. ಇದರಿಂದಾಗಿ ಜಿಲ್ಲೆಯ ಆಡಳಿತ ಚುರುಕಾಗಿ ಕೆಲಸ ಮಾಡಲು ಆಗುತ್ತಿಲ್ಲಾ ಆದ್ದರಿಂದ ಅಧಿಕಾರಿಗಳು ತಮ್ಮ ತಮ್ಮ ಕೇಂದ್ರ ಸ್ಥಾನದಲ್ಲಿಯೇ ಇರಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಕೇಂದ್ರ ಸ್ಥಾನದಲ್ಲಿ ಇರುವಂತೆ ನಿರ್ದೇಶನ ನೀಡಬೇಕು ಎಂದು ಅರಣ್ಯ, ಜೈವಿಕ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಹೇಳಿದರು.
ಅವರು ಶನಿವಾರ ಬೀದರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಿಳಿಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಅಭಾವವಾಗದಂತೆ ನಿಗಾವಹಿಸಬೇಕು. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಯಾವುದೇ ಕಾಮಗಾರಿಗಳಿದ್ದರು ಅವುಗಳನ್ನು ಕೂಡಲೇ ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕು. ಭಾಲ್ಕಿ ತಾಲ್ಲೂಕಿನ ಒಳಸಂಗಿ ಗ್ರಾಮದಲ್ಲಿ ವಿದ್ಯುತ ಕಂಬ ಬಿದ್ದಿರುವದರಿಂದ ಕಳೆದ ಹನ್ನೇರಡು ದಿನಗಳಿಂದ ಕುಡಿಯು ನೀರಿಗೆ ಸಮಸ್ಯೆಯಾಗುತ್ತಿದೆ ಎಂಬ ದೂರುಗಳು ಬರುತ್ತಿವೆ ಅದನ್ನು ಕೂಡಲೇ ಸರಿಪಡಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರಂಜಾ ಜಲಾಶಯದಿಂದ 131 ಕಿಮಿ ಒರೆಗೆ ನೀರು ಸರಿಯಾಗಿ ಹರಿಸುವಂತೆ ಕ್ರಮವಹಿಸಬೇಕು ಯಾವ ಕಡೆಗಳಲ್ಲಿ ಗೇಟ್‍ನಿಂದ ನೀರು ಸೋರಿಕೆಯಾಗುತ್ತಿವೇ ಅವುಗಳನ್ನು ಕೂಡಲೇ ಸರಿಪಡಿಸಿ ರೈತರಿಗೆ ಅನೂಕುಲವಾಗುವಂತೆ ನೋಡಿಕೊಳ್ಳಬೇಕು. ಸಾಯಿಗಾವ ಬ್ಯಾರೇಜ್ ಕಮ್ ಬ್ರೀಡ್ಜ್ ಬಳಿ ಬಂಡು ಸಂಗ್ರಹವಾಗಿದ್ದರಿಂದ ಮುಂದೆ ನೀರು ಸಾಗುತ್ತಿಲ್ಲಾ ಎನ್ನುವ ದೂರುಗಳು ಬರುತ್ತಿವೇ ಅಧಿಕಾರಿಗಳು ಕೂಡಲೇ ಇದರತ್ತ ಗಮನಹರಿಸಿ ಸಮಸ್ಯೆ ಬಗಹರಿಸಬೇಕು. ಜಿಲ್ಲೆಯಲ್ಲಿರುವ ನಾಲ್ಕು ಬ್ಯಾರೇಜ್‍ಗಳಲ್ಲಿ ಬಂಡು ಜಮಾವಣೆಯಾಗಿದೆ ಆ ಬಂಡು ಜಮಾವಣೆ ತೆರವುಗೊಳಿಸುವ ಕಾಮಗಾರಿ ಒಂದು ವಾರದೊಳಗೆ ಪೂರ್ಣಗೊಳ್ಳಬೇಕು. ಚುಳಕಿನಾಳದ ಕೆನೇಲ್ ಸರಿಯಾಗಿ ಇರದೇ ಇರುವುದರಿಂದ ಇಲ್ಲಿ ನೀರು ಸಂಗ್ರಹಣೆಯಾಗಿ ಯಾರಿಗು ಉಪಯೋಗವಾಗುತ್ತಿಲ್ಲಾ ಆದ್ದರಿಂದ ಕೆನೇಲ್ ರಿಪೇರಿಗೆ ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ವಿವಿಧ ಇಲಾಖೆಯ ಅಡಿಯಲ್ಲಿರುವ ವಸತಿ ಶಾಲೆಯ ಮಕ್ಕಳಿಗೆ ಊಟಕ್ಕೆ ಬೇಕಾಗುವು ಗೋಧಿ ಮತ್ತು ಅಕ್ಕಿ ಧಾನ್ಯಗಳ ಕೋರತೆ ಇದೆ ಎಂಬುವುದು ನನ್ನ ಗಮನಕ್ಕೆ ಬಂದಿದೆ ಈ ಕುರಿತು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಸಮಸ್ಯೆ ಬಗೆಹರಿಸಲಾಗುವುದು. ವಿವಿಧ ಇಲಾಖೆಯಲ್ಲಿ ಈಗಾಗಲೇ ಕಾಮಗಾರಿಗೆ ಆದೇಶ ಇರುವ ಕಾಮಗಾರಿಗಳಿಗೆ ಕೂಡಲೇ ಟೆಂಡರ್ ಕರೇದು ಕಾಮಗಾರಿ ಆರಂಭಿಸಬೇಕು ಎಂದರು.
ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ 11,26,264, ಗೃಹಲಕ್ಷಿ??ೀ ಯೋಜನೆಯಡಿ 2,82,992 ಹಾಗೂ ಗೃಹಜ್ಯೋತಿ ಯೋಜನೆಯಡಿ 3,48,000 ಫಲಾನುಭವಿಗಳು ಲಾಭ ಪಡೆಯುತ್ತಿದ್ದಾರೆ ಎಂದು ಸಂಬಂಧಿಸಿದ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು ಇದಕ್ಕೆ ಉತ್ತರಿಸಿದ ಸಚಿವರು ಇವುಗಳು ನಮ್ಮ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾಗಿವೆ ಯಾವುದೇ ಫಲಾನುಭವಿಗಳು ಈ ಯೋಜನೆಗಳಿಂದ ವಂಚಿತರಾಗಬಾರದು ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಿಬೇಕೆಂದರು.
ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ಕುಡಿಯುವ ನೀರಿಗೆ ಹಾಗೂ ಜಾನುವಾರುಗಳ ಮೇವಿಗೆ ಯಾವುದೇ ಕೊರತೆ ಇಲ್ಲಾ ಮುಂದಿನ ದಿನಗಳಲ್ಲಿಯೂ ಸಹ ಯಾವುದೇ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಸಚಿವರಿಗೆ ಮಾಹಿತಿ ನೀಡಿದರು. ಜಿಲ್ಲೆಯ ರೈತರು ಬರ ಪರಿಹಾರ ಪಡೆಯಲು ಫ್ರೂಟ್ ಐಡಿ ಮಾಡಸಬೇಕಿದೆ. ಈಗಾಗಲೇ ಜಿಲ್ಲೆಯ ಸಾಕಷ್ಟು ರೈತರು ಫೆÇ್ರೀಟ್ ಐಡಿ ಮಾಡಿಸಿದ್ದಾರೆ. ಇನ್ನು ಯಾರು ಮಾಡಿಸಿಲ್ಲವೋ ಅವರು ಕೂಡಲೇ ಫ್ರೂಟ್ ಐಡಿ ಮಾಡಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪೆÇಲೀಸ ವರೀಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್., ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಬೀದರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮೋತಿಲಾಲ ಲಂಬಾಣಿ, ಬ್ರೀಮ್ಸ್ ನಿರ್ದೇಶಕ ಶಿವಕುಮಾರ ಶೇಟಕಾರ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜೀನಿಯರರ ಶಿವಶಂಕರ ಕಾಮಶೇಟ್ಟಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ಸುರೇಖಾ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಸುವರ್ಣಾ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.