
ಅಫಜಲಪುರ:ಡಿ.20: ತಾಲೂಕಿನಾದ್ಯಾಮತ ಗ್ರಾ.ಪಂ ಚುನಾವಣೆಗಳು
ಸುವ್ಯವಸ್ಥಿತವಾಗಿ ನಡೆಯಬೇಕು ಆ ನಿಟ್ಟಿನಲ್ಲಿ ಮತಗಟ್ಟೆ
ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು
ಪಟ್ಟಣದ ಪಾಲ್ ಟೇಕ್ನಿಕಲ್ ಕಾಲೇಜಿನಲ್ಲಿ ಗ್ರಾಮ ಪಂಚಾಯಿತಿ
ಚುನಾವಣೆ ಹಿನ್ನಲೆ ನಡೆದ ತರಬೇತಿಯಲ್ಲಿ ನೋಡೇಲ್ ಅಧಿಕಾರಿ
ರಮೇಶ ಸಂಗಾ ಹಾಗೂ ತಹಸಿಲ್ದಾರ ನಾಗಮ್ಮ ಅವರು
ಸೂಚಿಸಿದರು.
ಈ ಕುರಿತು ನೊಡೇಲ್ ಅಧಿಕಾರಿ ರಮೇಶ ಸಂಗಾ ಹಾಗೂ ತಹಸಿಲ್ದಾರ್
ನಾಗಮ್ಮ ಮಾತನಾಡಿ ಗ್ರಾ.ಪಂ ಚುನಾವಣೆಯೂ
ಪಾರದರ್ಶಕವಾಗಿ ನಡೆಯಬೇಕು ಅದಕ್ಕಾಗಿ ಈಗಾಗಲೇ ತಾಲೂಕಾ
ಆಡಳಿತವು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕ್ಕೋಳ್ಳಲಾಗಿದೆ
ಅದಕ್ಕಾಗಿ ಇಂದು ನೀಡುತ್ತಿರುವ ತರಬೇತಿಯಲ್ಲಿ ಮತ ಗಟ್ಟೆ
ಅಧಿಕಾರಿಗಳು ಸಂಪನ್ಮೂಲ ವ್ಯಕ್ತಿಗಳು ನೀಡುತ್ತಿರುವ
ಮಾಹಿತಿಯನ್ನು ಸರಿಯಾಗಿ ತಿಳಿದುಕ್ಕೊಳ್ಳಬೇಕು, ಸರಕಾರ
ಸೂಚಿಸಿರುವ ನಿರ್ದೇಶನಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು,
ಸಧ್ಯ ತರಬೇತಿಯಲ್ಲಿ 700ಕ್ಕಿಂತ ಹೆಚ್ಚಿನ ಅಧಿಕಾರಿಗಳು
ಭಾಗಿಯಾಗಿದ್ದು. ಅವಶ್ಯಕ ವಿದ್ದಲ್ಲಿ ಹೆಚ್ಚಿನ ಅಧಿಕಾರಿಗಳನ್ನು
ನೇಮಕಮಾಡಿಕ್ಕೊಳ್ಳಲಾಗುವುದು, ಇನ್ನೂ ತಾಲೂಕಿನಲ್ಲಿರುವ
ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಕೇಂದ್ರಗಳಿಗೆ ಭೇಟಿ
ನೀಡಲಾಗಿದೆ, ಚುನಾವಣೆ ಸುವವ್ಯಸ್ಥಿತವಾಗಿ ನಡೆಯಲು ಎಲ್ಲಾ
ರೀತಿಯ ಸಿದ್ದತೆ ಮಾಡಿಕ್ಕೊಳ್ಳಲಾಗಿದೆ. ಸಧ್ಯ ನೇಮಕವಾಗಿದ್ದ
ಆರ್ಓ ಹಾಗೂ ಪಿಆರ್ಓ ಗಳಿಗೆ ಚುನಾವಣೆಯ ಪ್ರಕ್ರೀಯೇ
ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗಿದೆ
ತರಬೇತಿ ಪಡೆದ ಎಲ್ಲಾ ಮತಗಟ್ಟೆ ಅಧಿಕಾರಿಗಳು
ಚುನಾವಣೆಯ ಸಮಸಯದಲ್ಲಿ ಜಾಗೃತೆಯಿಂದ ತಮ್ಮ ಜವಾಬ್ದಾರಿ
ನಿರ್ವಹಿಸಬೇಕು ಎಂದು ಸೂಚಿಸಿದರು.ನಂತರ ಎಲ್ಲಾ ಮತಗಟ್ಟೆ
ಅಧಿಕಾರಿಗಳಿಗೆ ಚುನಾವಣೆಯ ಲೈಪಿಡಿ ನೀಡಿದರು.
ತರಬೇತಿ ನಂತರ ತಾಲೂಕಿನ ಗಡಿಗ್ರಾಮ ಬಳೂರ್ಗಿ ಗ್ರಾ.ಪಂ ಗೆ
ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶಿಲಿಸಿದರು. ಈ ಸಂದರ್ಭದಲ್ಲಿ
ತಾಲೂಕಾ ಬಿಸಿಎಂ ಅಧಿಕಾರಿ ಕರಬಸಮ್ಮ ಹಾಗೂ ಅಧಿಕಾರಿಗಳು
ಇದ್ದರು.