ಅಧಿಕಾರಿಗಳು- ಜನಪ್ರತಿನಿದಿಗಳಿಗೆ ವರದಿಗಳು ದಾರಿ ದೀಪವಾಗಬೇಕು- ವೆಂಕಟಪ್ಪ ನಾಯಕ

ಪತ್ರಿಕಾ ದಿನಾಚರಣೆ- ನೂತನ ಪದಾಧಿಕಾರಿಗಳ ಪದಗ್ರಹಣ
ಸಿರವಾರ.ಸೆ.೧೨-ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ಕರ್ತವ್ಯ ಮರೆತಾಗ ಸತ್ಯಂಶವಾದ ವರದಿಗಳನ್ನು ಪ್ರಕಟ ಮಾಡುವ ಮೂಲಕ ವರದಿಗಳು ದಾರಿ ದೀಪವಾಗಬೇಕೆ ಹೊರತು, ಒಬ್ಬರ ಓಲೈಕೆಗಾಗಿ ಮತ್ತೊಬ್ಬರ ತೇಜೋವದೆ ಮಾಡುವಂತಹ ವರದಿಗಳನ್ನು ಮಾಡಬಾರದು. ಪತ್ರಿಕಾ ಭವನ ನಿರ್ಮಾಣಕ್ಕೆ ೧೦ ಲಕ್ಷ ಅನುಧಾನು ನೀಡಲಾಗುವುದು ಎಂದು ಮಾನ್ವಿ ಕ್ಷೇತ್ರದ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ಪಟ್ಟಣದ ವಿದ್ಯಾವಾಹಿನಿ ಶಾಲೆಯಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಪದಗ್ರಹಣ, ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರಾಜಕಾರಣದಲ್ಲಿ ಆರೋಪ ಪ್ರತ್ಯಾರೋಪ ಮಾಡುವುದು ಸಹಜ ಆದರೆ ವರದಿಗಾರರು ಅದು ಎಷ್ಟು ಸತ್ಯ- ಸುಳ್ಳು ಎಂದು ಪರಿಶೀಲಿಸಿ ನೈಜವಾದ ವರದಿಯನ್ನು ಮಾಡಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಬೇಕು.
ಸುದ್ದಿ ನೀಡುವ ಭರಾಟೆಯಲ್ಲಿ ಕೆಲವೋಂದು ಬಾರಿ ತಪ್ಪುಗಳು ಆಗಬಹುದು, ಅದನ್ನೇ ಪುಃನ ಮರುಕಳಿಸಬಾರದು. ನಿಮ್ಮ ಆರೋಗ್ಯ- ಕುಟುಂಬ ದವರ ಆರೋಗ್ಯದ ಕಡೆ ಗಮನ ಹರಿಸಬೇಕು. ಮುಂದಿನ ದಿನಗಳಲ್ಲಿ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಪ್ರೊತ್ಸಾಹಿಸಿ. ಪತ್ರಕರ್ತರು ನನ್ನ ಕುಟುಂಬದಂತೆ, ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ನಾನು ಯಾವಾಗಲೂ ಸಿದ್ದ, ಪತ್ರಿಕಾ ಭವನಕ್ಕೆ ನಿವೇಶನದ ಕೊರತೆ ಕಾಡುತ್ತಿದೆ. ಆದರೂ ಹತ್ತು ಲಕ್ಷ ರೂಪಾಯಿ ಮೀಸಲು ಇಡುವೆ ಎಂದರು.
ಮಾಜಿ ಶಾಸಕರಾದ ಹಂಪಯ್ಯ ನಾಯಕ ಮಾತನಾಡಿ ವರದಿಗಾರರು ಯಾವುದೇ ಅಂಜಿಕೆ, ಅಳುಕು ಇಲ್ಲದೆ ಸತ್ಯವನ್ನು, ಭ್ರಷ್ಟಾಚಾರ ವರದಿಗಳು ಮಾಡಿದಾಗ ಪತ್ರಿಕೆಗೆ, ಅವರಿಗೆ ಗೌರವ ದೊರೆಯುತ್ತದೆ. ಇಂದು ಅನೇಕರು ಈ ಕ್ಷೇತ್ರಕ್ಕೆ ಬಂದಿದ್ದಾರೆ. ನೀವು ನಿಮ್ಮ ಪತ್ರಿಕೆ ಉಳಿಯಬೇಕಾದರೆ ಪಕ್ಷಾತೀತವಾಗಿ ವರದಿಗಳನ್ನು ಮಾಡಿ. ಜನಪ್ರತಿನಿಧಿಗಳಿಗೆ ಅಧಿಕಾರಿಗಳು, ಪತ್ರಕರ್ತರು ೨ ಕಣ್ಣು ಇದಂತೆ. ಪರ- ವಿರೋಧ ವರದಿಗಳು ಬಂದರೆ ನಾನು ಸ್ವಿಕರಿಸಿರುವೆ ಎಂದರು.
ಹಿರಿಯ ಪತ್ರಕರ್ತರ ಸುರೇಂದ್ರಾಚಾರ್ಯ ಕೂರ್ತಕುಂದ ತಮ್ಮ ಉಪನ್ಯಾಸದಲ್ಲಿ ಪತ್ರಕರ್ತರಿಗೆ ಬಧ್ಯತೆ, ನೈಜವಾದ, ಪ್ರಾಮಾಣಿಕವಾಗಿ ಕೆಲಸ ಮಾಡುವ ಪತ್ರಕರ್ತರ ಸಂಖ್ಯೆ ಕ್ಷೀಣಿಸಿದೆ, ಹಿಂದಿನ ಕಾಲದಲ್ಲಿ ಕೆಲಸಮಾಡಿ ಉತ್ತಮ ವರದಿಗಾರ ದಿ.ಚಂದ್ರಶೇಖರ ಹೀರಾ ಅವರನ್ನು ನೆನೆದು, ಅವರ ಕಾರ್ಯವನ್ನು ಕೂಂಡಾಡಿ ಎಲ್ಲಾರೂ ಉತ್ತಮ ವರದಿಗಳನ್ನು ಮಾಡಬೇಕು ಎಂದು ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ಆರ್.ಗುರುನಾಥ ತಮ್ಮ ಆಶಯ ನುಡಿಗಳಲ್ಲಿ ನಾವು ಐಡೆಂಟಿ ಕಾರ್ಡ ಪತ್ರಕರ್ತರಾಗಬಾರದು ನಮ್ಮ ಸುದ್ದಿಗಳು ಐಡೆಂಟಿಟಿ ಯಾಗಿ, ಬಡವರಿಗೆ, ಸಮಾಜದಲ್ಲಿ ನೊಂದವರಿಗೆ ದಾರಿ ದೀಪವಾಗಬೇಕು ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ ವಿಜಯೆಂದ್ರ ಹುಲಿನಾಯಕ, ಚುಕ್ಕಿ ಸೂಗಪ್ಪ ಸಾಹುಕಾರ್, ಎನ್.ಉದಯಕುಮಾರ್,ರಾಜಾ ರಾಮಚಂದ್ರ ನಾಯಕ, ಜಿ.ಲೋಕರೆಡ್ಡಿ, ಜೆ.ದೇವರಾಜಗೌಡ, ಶಿವಶರಣರಗೌಡ ಲಕ್ಕಂದಿನ್ನಿ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಅಯ್ಯನಗೌಡ, ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲೇಶ್ಪ, ಪ್ರೌಢ ಶಾಲೆ ಶಿಕ್ಷಕರ ಅಧ್ಯಕ್ಷ ಮೌನೇಶ ಹಣಗಿ, ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಪಿ.ಪರಮೇಶ, ಪ್ರಧಾನ ಕಾರ್ಯದರ್ಶಿ ಎಂ.ಪಾಷ್ ಹಟ್ಟಿ, ಕಾರ್ಯದರ್ಶಿ ಸೂಗೂರೇಶ ಗುಡಿ, ತಾಲೂಕು ಅಧ್ಯಕ್ಷ ಎಂ.ಗುಂಡಪ್ಪ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ಸುರೇಶ ಹೀರಾ ಪ್ರಸ್ತಾವಿಕ ನುಡಿದರು. ಪ್ರ.ಕಾ ವೀರೇಶ ಹರಕಂಚಿ ಸ್ವಾಗತಿಸಿದರು. ಮಹೇಶ, ಅಪ್ಪಾಜಿ ನಾಯಕ, ಹುಸೇನ್ ಬಾಷ್, ಲಕ್ಷ್ಮಣ, ಕಾರ್ಯಕ್ರಮ ನಿರೂಪಿಸಿದರು. ೨೦೨೨ ನೇ ಸಾಲಿನ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಪ್ರಜಾವಾಣಿ ವರದಿಗಾರ ಪಿ.ಕೃಷ್ಣ, ನೂತನ ಪದಾದಿಕಾರಿಗಳಿಗೆ ಸನ್ಮಾನಿಸಲಾಯಿತು. ಸಿರವಾರ, ಮಾನ್ವಿ, ಕವಿತಾಳ ಪತ್ರಕರ್ತರು ಸೇರಿದಂತೆ ಅನೇಕರು ಭಾಗವಹಿಸಿದ್ದರು.