ಅಧಿಕಾರಿಗಳಿಗೆ ಬೆದರಿಕೆ ಖಂಡನಾರ್ಹ

ಕಲಬುರಗಿ,ಸ 3: ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಪರವಾನಗಿ ನವೀಕರಣವಾಗದ ಶುದ್ಧ ನೀರಿನ ಘಟಕಗಳ ವಿರುದ್ಧ ಕ್ರಮ ವಹಿಸಿದ ಜಿಲ್ಲಾ ಅಂಕಿತ ಅಧಿಕಾರಿ ವಿರುದ್ಧ ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರು ನಡೆದುಕೊಂಡ ರೀತಿ ಖಂಡನಾರ್ಹ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ಟೀಕಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು ಅಧಿಕಾರಿಗಳ ಉತ್ತಮ ಕಾರ್ಯಕ್ಕೆ ಸಹಕರಿಸಿ ನಗರದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಕೈ ಜೋಡಿಸಬೇಕು ಎಂದರು.
ಕಲಬುರಗಿಯಲ್ಲಿ ಪರವಾನಗಿ ಪಡೆದ 41 ನೀರಿನ ಘಟಕಗಳಿವೆ.103 ಅನಧಿಕೃತ ಘಟಕಗಳಿವೆ.13 ನೀರಿನ ಘಟಕಗಳು ಪರವಾನಗಿ ಹೊಂದಿದ್ದರೂ ಅದನ್ನು ನವೀಕರಿಸಿಕೊಂಡಿಲ್ಲ.ಅವರೂ ಕೂಡ 103 ನೀರಿನ ಘಟಕದೊಂದಿಗೆ ಕೈ ಜೋಡಿಸಿದ್ದಾರೆ ಎಂದು ಆರೋಪಿಸಿದರು.