ಅಧಿಕಾರಿಗಳಿಗೆ ನ್ಯಾಯಾಧೀಶರಿಂದ ವಾರ್ನಿಂಗ್

ಕೆಜಿಎಫ್,ಜೂ.೫- ತಾಲ್ಲೂಕು ಕಾನೂನು ಸೇವಾ ಸಮಿತಿಯು ಆಹ್ವಾನಿಸುವ ಸಭೆಗಳಲ್ಲಿ ಹಿರಿಯ ಅಧಿಕಾರಿ ವರ್ಗ ಭಾಗವಹಿಸದೆ ಕಿರಿಯ ಅಧಿಕಾರಿಗಳನ್ನು ಕಳುಹಿಸಿಕೊಡುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಇನ್ನು ಮುಂದೆ ನಡೆಯುವ ಸಭೆಗಳಲ್ಲಿ ನಾವು ಸೂಚಿಸಿದ ಅಧಿಕಾರಿಗಳೇ ಭಾಗವಹಿಸಬೇಕು ಇಲ್ಲದಿದ್ದಾರೆ ಕಠಿಣ ಕ್ರಮಕ್ಕೆ ಶೀಫಾರಸು ಮಾಡಲಾಗುವುದು ಎಂದು ನಗರಸಭೆ ಕಂದಾಯ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ೩ ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಗುರುಸಿದ್ದಬಾದಮಿ ನೀಡಿ ರಾಷ್ಟ್ರೀಯ ಲೋಕಾ ಅದಾಲತ್ ಮುಂದಿನ ತಿಂಗಳ ೮ ರಂದು ಹಮ್ಮಿಕೊಳ್ಳಲಾಗಿದ್ದು ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ನಡೆಯುತ್ತಿರುವ ದೀರ್ಘ ಕಾಲದ ಪ್ರಕರಣಗಳನ್ನು ಕ್ಷಕ್ಷಿದಾರರು ವ್ಯಾಜ್ಯಗಳನ್ನು ಲೋಕಾ ಅದಾಲತ್‌ನಲ್ಲಿ ಇತ್ಯಾರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು ಎಲ್ಲರು ಸದ್ಬಳಕೆ ಮಾಡಿಕೊಳ್ಳಬೇಕು ಮತ್ತು ಈ ಕಾರ್ಯಕ್ರಮದ ಯಶಸ್ವಿಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕೈಜೊಡಿಸಬೇಕು ಎಂದು ೩ ನೆ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಗುರುಸಿದ್ದಪ್ಪ ಬಾದಮಿ ಹೇಳಿದರು.
ನ್ಯಾಯಾಲಯದ ಅವರಣದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ೩ ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಗುರುಸಿದ್ದ ಬಾದಮಿ ಹಲವು ವರ್ಷಗಳಿಂದ ಬ್ಯಾಂಕ್‌ಗೆ ಸಂಭಂದಪಟ್ಟಿದ್ದು ಕುಟುಂ ವ್ಯಾಜ್ಯ ಸೇರಿದಂತೆ ವಿವಿದ ವ್ಯಾಜ್ಯಗಳು ನ್ಯಾಯಾಯದಲ್ಲಿ ಮುಂದುವರೆಯುತ್ತಿರುವ ಹಿನ್ನಲೆಯಲ್ಲಿ ವ್ಯಾಜ್ಯಗಳನ್ನು ಎರಡು ಕಡೆಯ ಕಕ್ಷಿದಾರರನ್ನು ಒಂದೆಡೆ ಸೇರಿಸಿ ವ್ಯಾಜ್ಯಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಉತ್ತಮವಾದ ಕಾರ್ಯಕ್ರಮವಾಗಿದ್ದು ಕಕ್ಷಿದಾರರು ಇದರ ಪ್ರಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.