ಅಧಿಕಾರಿಗಳಿಗೆ ಕಾನೂನು ಕಾರ್ಯಗಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.04: ಜಿಲ್ಲಾ ಪೊಲೀಸ್ ಕಛೇರಿ ಸಭಾಂಗಣದಲ್ಲಿ ನಿನ್ನೆ   ಚುನಾವಣಾ ನೀತಿಸಂಹಿತೆ, ಎನ್.ಡಿ.ಪಿ.ಎಸ್. ಗುಂಡಾ ಕಾಯ್ದೆ ಕುರಿತು ಕಾರ್ಯಾಗಾರ ನಡೆಯಿತು.
ಬೆಂಗಳೂರಿನ‌ ಸಿಐಡಿ ಘಟಕದ ಕಾನೂನು ಸಲಹೆಗಾರ ಮಹೇಶ್ ವೈದ್ಯ ಅವರು  ಚುನಾವಣಾ ಸಮಯದಲ್ಲಿ ಪೊಲೀಸ್ ಅಧಿಕಾರಿಗಳು ಹಾಗು ಇತರೆ ಅಧಿಕಾರಿಗಳು ನಿರ್ವಹಿಸುವ ಕರ್ತವ್ಯದ ಬಗ್ಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಅವರು  ಗುಂಡಾ ಕಾಯ್ದೆಯಡಿಯಲ್ಲಿ ಪೊಲೀಸ್ ಅಧಿಕಾರಿಗಳು ನಿರ್ವಹಿಸುವ ಕರ್ತವ್ಯದ ಬಗ್ಗೆ ಕಾನೂನು ಅರಿವು ಮೂಡಿಸಿದರು.
ಈ  ಕಾರ್ಯಗಾರದಲ್ಲಿ  ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಾಪಾಟಿ, ಎಡಿಸಿ ಮಂಜುನಾಥ, ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲಾ ಎಸ್ಪಿಗಳು, ಸಿ.ಇ.ಒ, ಜಿಲ್ಲಾ ಪಂಚಾಯತ್‌, ಸಹಾಯಕ ಆಯುಕ್ತರು ಮತ್ತು  ತಹಸಿಲ್ದಾರರು, ಪಾಲಿಕೆ ಆಯುಕ್ತರು, ಬಳ್ಳಾರಿ ವಲಯದ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.