ಅಧಿಕಾರಿಗಳಿಂದ ಮತಗಟ್ಟೆಗಳ ಕೊಠಡಿ ಪರಿಶೀಲನೆ”


ಸಂಜೆವಾಣಿ ವಾರ್ತೆ
ಸಿರಿಗೇರಿ ಮಾ.8. ಮುಂಬರುವ ಮೇ.10ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಪ್ರಯುಕ್ತ ಸಿರುಗುಪ್ಪ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿನ ಚುನಾವಣೆ ನಡೆಯುವ ಕೇಂದ್ರಗಳು (ಬೂತ್) ಈಗ ಇರುವ ಸ್ಥಿತಿಗತಿಗಳನ್ನು ಪರಿಶೀಲನೆ ಮಾಡುವ ಕಾರ್ಯ ನಡೆದಿದೆ. ಇಂದು ಬೆಳಗ್ಗೆ 9ಗಂಟೆಗೇ ಸಿರುಗುಪ್ಪ ತಹಶೀಲ್ದಾರ್ ಮಂಜುನಾಥಸ್ವಾಮಿ, ಇಓ ಎಂ.ಬಸಪ್ಪ, ಇವರು ಗ್ರಾಮದಲ್ಲಿನ ಎಲ್ಲಾ ಶಾಲೆಗಳಿಗೆ ಭೇಟಿನೀಡಿ ಚುನಾವಣೆ ನಡೆಸಬಹುದಾದ ಕೊಠಡಿಗಳ ಸ್ತಿತಿಗತಿಗಳನ್ನು ಪರಿಶೀಲಿಸಿ ಶಾಲೆಯ ಶಿಕ್ಷಕರಿಂದ ಕೊಠಡಿಗಳ ಸಮಸ್ಯೆ ಮತ್ತು ಗುಣಮಟ್ಟದ ಕುರಿತು ಮಾಹಿತಿ ಪಡೆದರು. ಸಿರಿಗೇರಿ ಗ್ರಾಮದಲ್ಲಿಯೇ 11 ಭೂತ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ, ಒಂದೊಂದು ಮತಗಟ್ಟೆ ಕೇಂದ್ರದಲ್ಲಿ 800ರಿಂದ 1200 ಜನ ಮತದಾರರು ಪಟ್ಟಿಯಲ್ಲಿದ್ದಾರೆಂದು ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿ ನಾಗರಾಜ್ ಮಾಹಿತಿ ನೀಡಿದರು. ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಓ ಶಿವಕುಮಾರ ಕೋರಿ, ಶಾಲಾ ಶಿಕ್ಷಕರು, ಮತ್ತು ಸಿಬ್ಬಂದಿಯವರು ಪಾಲ್ಗೊಂಡಿದ್ದರು.