ಅಧಿಕಾರಿಗಳಿಂದ ಜವಳಿ ಪಾರ್ಕ್‍ಗೆ ಸ್ಥಳ ಪರಿಶೀಲನೆ


ಗುಳೇದಗುಡ್ಡ,ಎ.10: ವಿಧಾನಸಭೆ ವಿರೋಧ ಪಕ್ಷದ ನಾಯಕರೂ ಆದ ಬಾದಾಮಿ ಶಾಸಕ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಗುಳೇದಗುಡ್ಡಕ್ಕೆ ಜವಳಿ ಪಾರ್ಕ ಮಂಜೂರು ಮಾಡಿಸಿದ ಹಿನ್ನೆಲೆಯಲ್ಲಿ ಜವಳಿ ಇಲಾಖೆ ಉಪನಿರ್ದೇಶಕ ಎಂ.ಜಿ. ಕೊಣ್ಣೂರ ಅವರು ಗುಳೇದಗುಡ್ಡಕ್ಕೆ ಭೇಟಿ ನೀಡಿದ ಅವರು ಕಮತಗಿ ರಸ್ತೆಯಲ್ಲಿ ಹಾಗೂ ತೋಗುಣಸಿ ಕ್ರಾಸ್ ಹತ್ತಿರ ಎರಡು ಸ್ಥಳ ಪರಿಶೀಲನೆ ಬುಧವಾರ ನಡೆಸಿದರು. ಮಂಜೂರಾದ ಜವಳಿ ಪಾರ್ಕ ನಿರ್ಮಾಣಕ್ಕಾಗಿ ಎರಡು ಜಾಗೆಗಳನ್ನು ಪರಿಶೀಲನೆ ಮಾಡಲಾಗಿದೆ. ಪರಿಶೀಲಿಸಿದ ಜಾಗೆಯ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ. ಅವುಗಳಲ್ಲಿ ಜವಳಿ ಪಾರ್ಕ ನಿರ್ಮಿಸಲು ಯಾವುದು ಜಾಗಾ ಸೂಕ್ತ ಎಂದು ಗುರುತಿಸುತ್ತಾರೆ. ಅಲ್ಲಿ ಜವಳಿ ಪಾರ್ಕ ನಿರ್ಮಿಸಲು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜವಳಿ ಇಲಾಖೆ ಅಧಿಕಾರಿಗಳು ಹೇಳಿದರು. ಮುಖಂಡರಾದ ಹೊಳಬಸು ಶೆಟ್ಟರ, ಸಂಜಯ ಬರಗುಂಡಿ, ಸೋಮಶೇಖರ ಮಿಣಜಗಿ, ನಾಗಪ್ಪ ಗೌಡರ, ಪುರಸಭೆ ಸದಸ್ಯರು ವಿಠ್ಠಲಸಾ ಕಾವಡೆ, ಶ್ಯಾಮ ಮೇಡಿ, ವಿನೋಧ ಮದ್ದಾನಿ ಹಾಗೂ ರಮೇಶ ಅಗಸಿಮನಿ, ಪ್ರವೀಣ ಪವಾರ, ಬಾಬು ಬೊಂಬಲೇಕರ ಇದ್ದರು.