ಗದಗ,ಜೂ7: ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಸುಶೀಲಾ ಬಿ. ಅವರು ಗದಗ ತಾಲೂಕು ಪಂಚಾಯಿತಿ ವ್ಯಾಪ್ತಿಯ ಕುರ್ತಕೋಟಿ ಹಾಗೂ ಅಂತೂರ ಗ್ರಾಪಂಗಳಿಗೆ ಭೇಟಿ ನೀಡಿ ಮನರೇಗಾ ಯೋಜನೆಯಡಿ ಅನುಸ್ಠಾನ ಮಾಡಲಾದ ಬಾಸ್ಕೆಟ್ ಬಾಲ್ ಆಟದ ಮೈದಾನ, ಪಿಂಕ ಶೌಚಾಲಯ, ಉದ್ಯಾನವನ ಕಾಮಗಾರಿಗಳನ್ನು ಹಾಗೂ ಕಾಮಗಾರಿ ಸಂಭದಿತ ಕಡತಗಳನ್ನು ಪರಿಶೀಲನೆ ನಡೆಸಿ ಅಗತ್ಯದ ಸಲಹೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗದಗ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ನಮನ್ ನಾಯ್ಕ, ಕುರ್ತಕೋಟಿ ಪಿ.ಡಿ.ಓ ರವಿ ಅಳವಂಡಿ, ಅಂತೂರ ಪಿ.ಡಿ.ಓ ಎಚ್.ಎಸ್. ಚಟ್ರಿ, ನರೇಗಾ ತಾಂತ್ರಿಕ ಸಂಯೋಜಕ, ತಾಂತ್ರಿಕ ಸಹಾಯಕ, ಬಿ.ಎಫ್. ಟಿ, ಗ್ರಾಮ ಕಾಯಕ ಮಿತ್ರರು, ಹಾಗೂ ಪಂಚಾಯತ ಸಿಬ್ಬಂದಿ ವರ್ಗದವರು ಹಾಜರಿದ್ದರು.