ಅಧಿಕಾರಿಗಳಿಂದಲೇ ನಿಯಮ ಉಲ್ಲಂಘನೆ: ಮೋಹನ್

ಸಂಜೆವಾಣಿ ನ್ಯೂಸ್
ಮೈಸೂರು: ಏ.23:- ಸ್ವೀಪ್ ಕಾರ್ಯಕ್ರಮ ಹೆಚ್ಚು ನಡೆಸುವ ಅಧಿಕಾರಿಗಳ ತಂಡ ಬ್ಯಾಲೆಟ್ ಮತದಾನಕ್ಕೆ ಪೇಪರ್ ಕೊಡದೇ ವಂಚಿಸಿರುವುದರ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ದಾಖಲಿಸುವುದಾಗಿ ಬಿಜೆಪಿ ನಗರ ವಕ್ತಾರ ಮೋಹನ್ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು 12 ಸಾವಿರ ಸರ್ಕಾರಿ ನೌಕರು ಚುನಾವಣಾ ಪ್ರಕ್ರಿಯೆಯಲ್ಲಿದ್ದಾರೆ. ಇವರ ಬಳಿ ಮತಯಾಚನೆಗೆ ತೆರಳಿದ ವೇಳೆ ಇಂದು ಕಡೆ ದಿನವಾಗಿದ್ದರೂ ಅನೇಕರಿಗೆ ಬ್ಯಾಲೆಟ್ ಪೇಪರ್ ಕೊಡದೇ ಮತದಾನದಿಂದಲೇ ದೂರ ಉಳಿದಿರುವುದು ಕಂಡು ಬಂದಿದೆ. ಬರೋಬ್ಬರಿ 7 ಸಾವಿರ ಮತದಾನದಿಂದ ವಂಚಿತರಾಗಿರುವುದು ಮೈಸೂರು, ಚಾಮರಾಜನಗರ ಭಾಗದಲ್ಲೇ ಪತ್ತೆಯಾಗಿದೆ. ಹೀಗಾಗಿ ಸ್ವೀಪ್ ಕಾರ್ಯಕ್ರಮ ಮಾಡುವ ಜಿಲ್ಲಾ ಚುನಾವಣಾ ಅಧಿಕಾರಿಗಳಿಂದ ಅಧಿಕಾರ ನಿರ್ಲಕ್ಷ್ಯದ ಧೋರಣೆ ಕಂಡು ಬಂದಿದೆ ಎಂದು ಹೇಳಿದರು.
ಮೈಸೂರು ಕೊಡಗು ಕ್ಷೇತ್ರದಲ್ಲಿ 2202 ಮತಗಟ್ಟೆಗಳಿವೆ. ಒಂದು ಪೆÇೀಲಿಂಗ್ ಸ್ಟೇಷನಲ್ಲಿ 5 ಕ್ಕೂ ಹೆಚ್ಚು ಜನ ಕರ್ತವ್ಯಕ್ಕೆ ನಿಯೋಜನೆ ಆಗಿರುತ್ತಾರೆ. ಸುಮಾರು 10 ರಿಂದ 12 ಸಾವಿರ ಸರ್ಕಾರಿ ನೌಕರರು ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗುತ್ತಾರೆ. ಅವರಿಗೆಲ್ಲಾ ಪೆÇೀಸ್ಟಲ್ ಬ್ಯಾಲೆಟ್ ಮೂಲಕ ಮತದಾನದ ಅವಕಾಶ ಇರುತ್ತದೆ. ಚುನಾವಣೆ ಕರ್ತವ್ಯದಲ್ಲಿ ಭಾಗಿಯಾಗುವವರಿಗೆ ನಮೂನೆ ನಂ. 12 ಕೊಡಲು ಜಿಲ್ಲಾ ಚುನಾವಣಾಧಿಕಾರಿಗಳು ವಿಳಂಬ ಮಾಡಿದ್ದಾರೆ. ಅದನ್ನ ಒದಗಿಸುವ ಕರ್ತವ್ಯ ಜಿಲ್ಲಾಡಳಿತ ಹೊಂದಿರುತ್ತದೆ. ಆದರೆ, ಚುನಾವಣೆಗೆ ಪೆÇೀಸ್ಟಲ್ ಬ್ಯಾಲೆಟ್ ಇನ್ನೂ ಕೊಟ್ಟಿಲ್ಲ ಎಂಬ ದೂರು ಕೇಳಿ ಬಂದಿದೆ. ಚುನಾವಣಾ ಕರ್ತವ್ಯದಲ್ಲಿ ತೊಡಗಿರುವ ಸರ್ಕಾರಿ ನೌಕರರಿಗೆ ಸಮರ್ಪಕವಾದ ಪೆÇೀಸ್ಟಲ್ ಬ್ಯಾಲೆಟ್ ಒದಗಿಸದೆ ಉದ್ದೇಶ ಪೂರ್ವಕವಾಗಿ ಪೆÇೀಸ್ಟಲ್ ಬ್ಯಾಲೆಟ್ ತಡೆ ಹಿಡಿಯುವ ಹುನ್ನಾರ ನಡೆದಿದೆ. ಮತದಾನ ಕಡಿಮೆಗೊಳಿಸುವ ಷಡ್ಯಂತ್ರ ನಡೆದಿದೆ. ಆಡಳಿತ ರೂಢ ಕಾಂಗ್ರೆಸ್ ಸರ್ಕಾರದ ಪ್ರಭಾವಕ್ಕೆ ಒಳಗಾಗಿ ಜಿಲ್ಲಾ ಚುನಾವಣಾಧಿಕಾರಿಗಳು ಸರ್ಕಾರದ ಏಜೆಂಟ್ಗಳಂತೆ ಕೆಲಸ ಮಾಡುತ್ತಿದ್ದಾರೆ.
ಚುನಾವಣಾ ಕರ್ತವ್ಯದಲ್ಲಿ ತೊಡಗಿರುವ ನೌಕರರಿಗೆ ಈ ಕೂಡಲೇ ಪೆÇೀಸ್ಟಲ್ ಬ್ಯಾಲೆಟ್ ವಿತರಿಸಬೇಕು, ಅಧಿಕಾರಿಗಳ ಮಟ್ಟದಲ್ಲಿ ನಡೆದಿರುವ ಲೋಪವನ್ನ ಕೇಂದ್ರ ಚುನಾವಣಾ ಆಯೋಗ ತನಿಖೆ ಮಾಡಬೇಕು. ಪೆÇೀಸ್ಟಲ್ ಬ್ಯಾಲೆಟ್ ನಲ್ಲಿ ಶೇ 70 ರಿಂದ 80 ರಷ್ಟು ಬಿಜೆಪಿಗೆ ಬರುತ್ತದೆ ಎಂದು ಅದನ್ನು ತಡೆಯುವ ದೃಷ್ಟಿಯಿಂದ ಜಿಲ್ಲಾ ಚುನಾವಣಾ ಅಧಿಕಾರಿಗಳ ಮೂಲಕ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಂದರು. ಜಿಲ್ಲಾ ಕೇಂದ್ರಕ್ಕೆ ತರಬೇತಿಗೆ ಬಂದಾಗ ಬ್ಯಾಲೆಟ್ ಪೇಪರ್ ಕೊಟ್ಟಿಲ್ಲ. ಬದಲಿಗೆ ತಾಲ್ಲೂಕು ಅಧಿಕಾರಿಗಳ ಬಳಿ ಪಡೆದುಕೊಳ್ಳಿ ಎಂದಿದ್ದಾರೆ. ಇಂದು ಬ್ಯಾಲೆಟ್ ಮತದಾನಕ್ಕೆ ಕೊನೆ ದಿನವಾಗಿದ್ದರೂ ಅನೇಕರು ಮತದಾನ ವಂಚಿತರಾಗಿದ್ದಾರೆಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ವಸಂತ್, ಮಾದ್ಯಮ ವಕ್ತಾರ ಮಹೇಶ್ ರಾಜೇ ಅರಸ್ ಮತ್ತಿತರರು ಉಪಸ್ಥಿತರಿದ್ದರು.