ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡ ಅಕ್ರಂಪಾಷ

ಕೋಲಾರ,,೧೭-ಜಿಲ್ಲಾಧಿಕಾರಿ ಅಕ್ರಂಪಾ ರಜೆ ದಿನವಾದ ಭಾನುವಾರ ಬೆಳ್ಳಂ ಬೆಳ್ಳಗೆ ನಗರ ಸಂಚಾರಕ್ಕೆ ಇಳಿದು ರಸ್ತೆ ಬದಿಯಲ್ಲಿ ಕಸದ ರಾಶಿಗಳನ್ನು ಕಂಡು ನಗರಸಭೆಯ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಿ ಕೊಂಡು ಅವರ ಕಾರ್ಯವೈಖರಿ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿ ತರಾಟೆಗೆ ತೆಗೆದು ಕೊಂಡು ಕೆಂಡ ಮಂಡಲರಾದ ಪ್ರಕರಣ ನಡೆಯಿತು,
ನಗರದ ಅಮ್ಮವಾರಿ ಪೇಟೆ ರಸ್ತೆ, ಎಂ.ಜಿ. ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅಮ್ಮವಾರಿಪೇಟೆ ವೃತ್ತದಲ್ಲಿ ಚರಂಡಿಗಳಲ್ಲಿ ಕಸ ತೆಗೆದು ಎಷ್ಟು ವರ್ಷವಾಗಿದೆ ? ಎಲ್ಲೆಂದರಲ್ಲಿ ಕಸ ರಾಶಿಗಳು ರಾರಾಜಿಸುತ್ತಿದೆ, ಈ ವಾರ್ಡಿನ ಸೂಪರ್ ವೈಜರ್ ಹಾಗೂ ಮೇಸ್ತ್ರೀ ಏನು ಮಾಡುತ್ತಿದ್ದಾರೆ ಕೆಂಡ ಮಂಡಲಾದರು.ಈ ವಾರ್ಡಿನ ನಗರ ಸಭಾ ಸದಸ್ಯರು ಯಾರು ಅವರು ನಿಮ್ಮನ್ನು ಏನು ಪ್ರಶ್ನಿಸುವುದಿಲ್ಲವೇ ಎಂದು ಕೇಳಿದರು,
ನಗರದಲ್ಲಿ ಯುಜಿಡಿ ಸಮಸ್ಯೆ ಸಾಕಷ್ಟು ಇದ್ದರು ಅಧಿಕಾರಿಗಳು ಏನು ಮಾಡುತ್ತಿದ್ದೀರಿ ? ಇದರ ನಿರ್ವಾಹಣೆಯ ಜವಾಬ್ದಾರಿ ಯಾರದು ? ಟೆಂಡರ್ ಪಡೆದಿರುವರು ಯಾರು ? ಅವೈಜ್ಷಾನಿಕವಾಗಿ ಕಾಮಗಾರಿಗಳು ಮಾಡಿದರೆ ಹೀಗೇನೆ ಅಗುವುದು ಕೊಡಲೇ ಅವರಿಗೆ ನೋಟಿಸ್ ಜಾರಿ ಮಾಡಿ ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು,
ಮುಂದಿನ ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗಲಿದೆ ಮಳೆ ನೀರು ಸರಾವಾಗಿ ಹರಿಯುವ ಚರಂಡಿಗಳಲ್ಲಿ ಹರಿಯಲು ಅವಕಾಶ ಸಿಗದಿದ್ದರೆ ತಗ್ಗಿನ ಪ್ರದೇಶಗಳಿಗೆ ಹರಿಯಲಿದೆ, ರಸ್ತೆ ಬದಿಯ ಮನೆಗಳಿಗೆ ಹರಿಯುತ್ತದೆ. ರಾಜ ಕಾಲುವೆಗಳಲ್ಲಿ ತ್ಯಾಜ್ಯದ ರಾಶಿಗಳು ತುಂಬಿ ತೂಳಕಾಡುತ್ತಿದ್ದರು ಅಧಿಕಾರಿಗಳು ಏನು ಮಾಡುತ್ತಿದ್ದೀರಿ ? ಅವರಿಗೆ ಕಣ್ಣು ಕಾಣುತ್ತದೆಯೋ ಇಲ್ಲವೋ ? ಎಂದು ಕೆಂಡ ಮಂಡಲರಾದರು,ಕೂಡಲೇ ಚರಂಡಿಗಳಲ್ಲಿರುವ ಹಾಗೂ ರಾಜಕಾಲುವೆಗಳಲ್ಲಿರುವ ಕಸ ತೆರವುಗೊಳಿಸಬೇಕು ಮಳೆನೀರು ರಸ್ತೆಯಲ್ಲಿ ಹರಿಯದ್ದಂತೆ ಚರಂಡಿಗಳಲ್ಲಿ ಹಾಗೂ ರಾಜಕಾಲುವೆ ಹರಿಯಬೇಕು ಎಂದು ಸೂಚಿಸಿದ ಡಿಸಿ ಮತ್ತೊಂದು ಬಾರಿ ನಗರ ಪ್ರದಕ್ಷಿಣೆ ಮಾಡಿದಾಗ ಇವೆಲ್ಲ ಸಮಸ್ಯೆಗಳು ಕಣ್ಣಿಗೆ ಕಾಣಿಸಬಾರದು ಎಂದು ಅಧಿಕಾರಿಗಳಿಗೆ ಖಡಕ್ ಅದೇಶ ಮಾಡಿದರು,