ಅಧಿಕಾರ,ಹಣದಾಸೆಗೆ ಮತ ಚಲಾಯಿಸಿಲ್ಲ-ಚಂದ್ರಣ್ಣ

ವಿಜಯಪುರ.ನ೧೨: ರಾಜ್ಯದಲ್ಲಿ ನಡೆದ ಪ್ರತಿ ಚುನಾವಣೆಯಲ್ಲಿಯೂ ವಿರೋಧ ಪಕ್ಷಗಳು ಹಣ ಹಾಗೂ ಅಧಿಕಾರ ಬಲದಿಂದ ಬಿ.ಜೆ.ಪಿ ಗೆಲುವು ಸಾಧಿಸುತ್ತಾ ಬಂದಿದೆ ಎಂದು ಆರೋಪ ಮಾಡುವುದು ಸಂಪೂರ್ಣ ಸುಳ್ಳೆಂದು ನಿರಂತರವಾಗಿ ಪ್ರತಿ ಚುನಾವಣೆಯಲ್ಲಿಯೂ ಸಾಬೀತಾಗುತ್ತಾ ಬಂದಿದೆ ಎಂದು ಮಾಜಿ ಶಾಸಕ ಜಿ.ಚಂದ್ರಣ್ಣ ತಿಳಿಸಿದರು.
ಅವರು ಪಟ್ಟಣದ ಗಾಂಧೀಚೌಕದಲ್ಲಿ ಬಿಜೆಪಿ ಕಾರ್ಯಕರ್ತರು ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಉಪ ಚುನಾವಣೆಯಲ್ಲಿ ಹಾಗೂ ವಿಧಾನ ಪರಿಷತ್ ಮತ್ತು ದೇಶದಾದ್ಯಂತ ನಡೆದ ಮತ್ತಿತರೆ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ವಿಜೇತರಾದ ಹಿನ್ನೆಲೆ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮ ಆಚರಣೆ ಮಾಡಿದ ಸಂದರ್ಭದಲ್ಲಿ ಮಾತನಾಡುತ್ತಿದ್ದರು.
ತಾಲೂಕು ಅಧ್ಯಕ್ಷ ಸುಂದರೇಶ್ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಮಾಡುತ್ತಿರುವ ಉತ್ತಮ ಕೆಲಸಗಳಿಗೆ ಇಂದು ಆರ್.ಆರ್.ನಗರ ಹಾಗೂ ಶಿರಾ ಕ್ಷೇತ್ರಗಳು ಎರಡು ಬಿಜೆಪಿ ಪರವಾಗಿದೆ. ರಾಜ್ಯದಲ್ಲಿ ಜಾತಿ ರಾಜಕಾರಣ ನಡೆಯುವುದಿಲ್ಲ ಎನ್ನುವುದಕ್ಕೆ ಈ ಎರಡು ಕ್ಷೇತ್ರಗಳ ಚುನಾವಣೆ ಸಾಕ್ಷೀಯಾಗಿದೆ ಎಂದರು.
ಟೌನ್ ಬಿಜೆಪಿ ಅಧ್ಯಕ್ಷ ಚ.ವಿಜಯಬಾಬು ಮಾತನಾಡಿ, ರಾಜ್ಯದ ಜನತೆ ಬಿಜೆಪಿ ಮೇಲಿಟ್ಟಿರುವ ವಿಶ್ವಾಸವನ್ನು ರಾಜ್ಯದ ಎರಡೂ ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸುವ ಮೂಲಕ ತೋರಿಸಿಕೊಟ್ಟಿದ್ದು, ಮುಂದಿನ ಪುರಸಭಾ ಚುನಾವಣೆಗಳಲ್ಲಿ ಎಲ್ಲಾ ಸವಾಲುಗಳನ್ನು ಎದುರಿಸಿ, ಗೆಲ್ಲಲು ಸಿದ್ದರಾಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ರವಿಕುಮಾರ್, ಮುಖಂಡರಾದ ಕನಕರಾಜು, ಗೀರಿಶ್, ಮಾಜಿ ಟೌನ್ ಅಧ್ಯಕ್ಷರುಗಳಾದ ರಾಮಕೃಷ್ಣಹೆಗಡೆ, ರಾಮು ಭಗವನ್, ರಾಘವ, ಪ್ರಭು, ಸಾಗರ್, ಸುಜಯ್, ಚೇತನ್, ಮರಿಸೋಣೆಗೌಡ, ನಾಗಯ್ಯ, ಆನಂದ್, ನಟರಾಜು, ಸುಜನ್, ಗಾಯಿತ್ರಿದಿಕ್ಷೀತ್ ಇತರರು ಇದ್ದರು.