
ಚಿಕ್ಕಬಳ್ಳಾಪುರ.ಸೆ೨:ಅಧಿಕಾರ ಶಾಶ್ವತವಲ್ಲ ಅದು ಇರಲಿ ಬಿಡಲಿ ಜನರ ಸೇವೆಗೆ ನಾನು ಸದಾ ಮುಂದು ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ತಾಲ್ಲೂಕಿನ ಪೆರೇಸಂದ್ರ ಗ್ರಾಮ ವ್ಯಾಪ್ತಿಯ ಅರೂರು ಗ್ರಾಮ ಪಂಚಾಯತಿ ವತಿಯಿಂದ ಪೆರೇಸಂದ್ರದ ಮಂಜುನಾಥೇಶ್ವರ ಸಮುದಾಯ ಭವನದಲ್ಲಿ ಜನಪ್ರಿಯ ಶಾಶಕರಾದ ಪ್ರದೀಪ್ ಈಶ್ವರ್ ರವರಿಗೆ ಏರ್ಪಡಿಸಿದ್ದ ಅಭಿನಂದನ ಸಮಾರಂಭದಲ್ಲಿ ಮಾತನಾಡಿ ಕೇವಲ ಚುನಾವಣೆ ಹತ್ತಿರ ಬಂದಾಗ ಜನರ ಸೇವೆ ಮಾಡುವುದು ಸರಿಯಲ್ಲ,ಜನರನ್ನ ತಮ್ಮ ಕಡೆ ಸೆಳೆಯಲು ಚುನಾವಣೆ ಸಂಧರ್ಭದಲ್ಲಿ ಅವರ ಹತ್ತಿರ ಹೋಗಿ ಅವರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುವುದಿಲ್ಲ ನನಗೆ ಅಧಿಕಾರ ಸಿಕ್ಕಿದೆ ಜನರ ಸೇವೆಯೆ ನನ್ನ ಪ್ರಥಮ ಆದ್ಯತೆ ಅಧಿಕಾರ ಇರಲಿ ಬಿಡಲಿ ಮುಂದೆ ನಾನು ಗೆಲ್ಲಲಿ ಅಥವಾ ಸೋಲಲಿ ಜನರೊಂದಿಗೆ ಇರುತ್ತೇನೆ ಎಂದರು
ಶಾಸಕನಾದ ನಂತರ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದ ಮುಖಾಂತರ ಪ್ರತಿ ಹಳ್ಳಿಗೂ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ.ಈ ಕಾರ್ಯಕಮ ಎಂದಿಗೂ ನಿಲ್ಲಲ್ಲ ನನ್ನನ್ನು ಆಯ್ಕೆ ಮಾಡಿ ಈ ಕ್ಷೇತ್ರದ ಜನ ವಿಧಾನ ಸೌಧ ಗೆ ಕಳಿಸಿದ್ದಾರೆ ಅವರ ಪ್ರತಿ ಒಂದು ಸಮಸ್ಯೆ ಬಗೆಹರಿಸುವ ಜವಾಬ್ದಾರಿ ನನ್ನದು ಹಾಗಾಗಿ ನನ್ನ ಜನರ ಅನುಕೂಲಕ್ಕಾಗಿ ಏನೆಲ್ಲಾ ಮಾಡಬೇಕು ಹಂತ ಹಂತವಾಗಿ ಮಾಡಲಾಗುವುದು ಎಂದರು.
ಜೀವನದಲ್ಲಿ ಯಶಸ್ಸು ಕಾಣಲು ಮುಂದೆ ಬರಲು ಜನರ ಆಶೀರ್ವಾದ ಬಹಳ ಮುಖ್ಯ ಇರಷ್ಟು ದಿನ ಜನರಿಗೆ ಒಳ್ಳೆಯದನ್ನ ಮಾಡಬೇಕು ಅಧಿಕಾರ ಇದೆ ಅಂತ ಇನ್ನೂ ೨೦ ವರ್ಷ ನಾನೆ ನಿಮ್ಮ ಪ್ರತಿ ನಿಧಿ ಎಂದುಕೊಂಡರೆ ಅದು ಸುಳ್ಳು ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಜನರ ಆಶೀರ್ವಾದ ಬೇಕು ಅವರ ಆಶೀರ್ವಾದಬೇಕಾದರೆ ಅವರೊಂದಿಗೆ ಬೆರೆತು ಅವರ ಸಮಸ್ಯೆಗಳನ್ನು ಬಗೆಹರಿಸಿ ಅವರ ಸೇವೆ ಮಾಡಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಟ್ಟಣ್ಣ, ಶಾಸಕರ ಆಪ್ತ ಸಹಾಯಕ ನಾಗಭೂಷಣ್, ಶಂಕರ ಎನ್.ವಿ.ಎಂ.ವೆoಕಟೇಶ್,ರಮೇಶ್, ಮಂಡಿಕಲ್ ಕಾಂಗ್ರೆಸ್ ಮುಖಂಡ ಎಂ.ಪಿ. ಕುಪೇಂದ್ರ.., ಡಿ.ವಿ.ಆರ್.ರಾಜೇಶ್,ಬಿ.ಆರ್.ವಿಜಯಕುಮಾರ್, ಬಾಂಬೆ ನಾಗರಾಜ್,ರಾಮಾಂಜಿ, ಕ್ವಾಲಿಟಿ ನಾರಾಯಣಸ್ವಾಮಿ ಮತ್ತಿತರರು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾಕ್ಟರುಗಳು,ಪೋಲಿಸ್ ಸಿಬ್ಬಂದಿ,ಮತ್ತು ಇಂಜಿನಿಯರ್‌ಗಳನ್ನು ಶಾಸಕರು ಆತ್ಮೀಯವಾಗಿ ಸನ್ಮಾನಿಸಿದರು.