ಅಧಿಕಾರವಿದ್ದಾಗ ಜನರ ಸೇವೆ ಮುಖ್ಯ – ಹರಿಜನ

ಗದಗ,ಆ-2: ಅಧಿಕಾರ ಶಾಶ್ವತ ಅಲ್ಲಾ ಅಧಿಕಾರದಲ್ಲಿ ಇರುವಾಗ ಜನರ ಸೇವೆ ಮಾಡುವುದು ಮುಖ್ಯ ಎಂದು ನ್ಯಾಯವಾದಿ ಮೈಲಾರಪ್ಪ ಹರಿಜನ ಹೇಳಿದರು.
ಗದಗ ಜಿಲ್ಲಾ ಲಕ್ಷ್ಮೇಶ್ವರ ತಾಲೂಕ ಆದರಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಸಾಂಕಧಾಳ ಗ್ರಾಮದ ಗ್ರಾಮ ಪಂಚಾಯತ ಸದಸ್ಯರ ಅವಧಿ ಮುಗಿದ ಕಾರಣ ಆ ಗ್ರಾಮದ ಮಹಿಳಾ ಸಂಘದ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಸೇರಿ ಹಳೆಯ ಗ್ರಾಮ ಪಂಚಾಯತ ಸದಸ್ಯರಾದ ಶಾರದಾ ನಾಗಪ್ಪ ಸೂರಣಗಿ ಹಾಗೂ ಹಾಲಪ್ಪ ಹರಿಜನ ಅವರಿಗೆ ಸನ್ಮಾನ ಮಾಡಲಾಯಿತು.
ಈ ಸಮಾರಂಭದಲ್ಲಿ ಮಾತನಾಡಿದ ಕಾಂಗ್ರೇಸ್ ಪಕ್ಷದ ಹಿರಿಯ ನಾಯಕರಾದ ಫಕ್ಕೀರಯ್ಯ ಹಿರೇಮಠ ಈ ಎರಡೂ ಸದಸ್ಯರು ತಮ್ಮ ಅಧಿಕಾರ ವಹಿಸಿಕೊಂಡ ಮೇಲೆ ಉತ್ತಮ ರೀತಿಯಲ್ಲಿ ಜನರ ಸೇವೆ ಮಾಡಿದ್ದಾರೆ. ಗ್ರಾಮದ ಎಲ್ಲಾ ಜನರಿಗೆ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಅದೇ ಗ್ರಾಮದ ನ್ಯಾಯವಾದಿ ಆದ ಮೈಲಾರಪ್ಪ ದುರಗಪ್ಪ ಹರಿಜನ ಅವರು ಮಾತನಾಡುತ್ತಾ ಅಧಿಕಾರ ಎಂಬುದು ಯಾವಾಗಲೂ ಮುಖ್ಯ ಅಲ್ಲಾ ಜನ ಪ್ರತಿನಿಧಿಗಳು ಯಾವಾಗಲೂ ಜನರ ಸೇವೆ ಮಾಡುವುದು ಮುಖ್ಯ ಎಂದು ಹೇಳಿದರು.ಅವರು ಯಾವಾಗಲೂ ಕಾನೂನಿನ ವ್ಯಾಪ್ತಿಯಲ್ಲಿ ಅಧಿಕಾರ ಚಲಾವಣೆ ಮಾಡಬೇಕು , ಅಲ್ಲದೆ ಯಾರು ಕಾನೂನಿಂದ ದೊಡ್ಡವರು ಅಲ್ಲಾ ಎಂದು ಹೇಳುತ್ತಾ ಕಾನೂನಿನ ಅಡಿಯಲ್ಲಿ ಎಲ್ಲಾರು ಆಡಳಿತ, ತಮ್ಮ ಕಾರ್ಯ ನಡೆಸುತ್ತಾ ಹೋಗಬೇಕು ಎಂದರು.ಗ್ರಾಮ ಮಟ್ಟದಲ್ಲಿ ಜನಪ್ರತಿನಿಧಿ ಆದವರು ಮುಂದೇ ತಾಲೂಕ , ಜಿಲ್ಲಾ ಮಟ್ಟದಲ್ಲಿ ಜನಪ್ರತಿನಿಧಿ ಆಗಲು ಶ್ರಮಿಸಿ ಎಂದು ಹೇಳಿದರು.
ಅದೇ ಸಮಾರಂಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ದುರಗಪ್ಪ ಬಸಪ್ಪ ಹರಿಜನ ಮಾತನಾಡುತ್ತಾ ನಾನು ಚುನಾಯಿತನಾದ ಸಮಯದಲ್ಲಿ ನಾನು ಒಬ್ಬನೇ ಗ್ರಾಮ ಪಂಚಾಯಿತಿ ಸದಸ್ಯನಾಗಿ ಕೆಲಸ ಮಾಡಿದ್ದೆ . ಆ ಸಮಯದಲ್ಲಿ ನನಗೆ ಒತ್ತಡ ಹೆಚ್ಚು ಇದ್ದರೂ ಒಳ್ಳೆಯ ರೀತಿಯಲ್ಲಿ, ಅಚ್ಚು ಕಟ್ಟಾಗಿ ನಿಭಾಯಿಸಿಕೊಂಡು ತಮ್ಮ ಅಧಿಕಾರ ಪೂರ್ಣಗೊಳಿಸಿದೆ ಎಂದು ಹೇಳಿದರು.ನನ್ನ ಅಧಿಕಾರ ಮುಗಿದ ಮೇಲೆ ನಮ್ಮ ಊರಲ್ಲಿ ಇಬ್ಬರೂ ಪಂಚಾಯತಿ ಸದಸ್ಯರು ಆಗಬೇಕು ಎಂಬ ನಿಯಮ ಬಂತು ಎಂದು ಹೇಳಿದರು.ಅದು ನಮ್ಮ ಗ್ರಾಮಕ್ಕೆ ಹೆಮ್ಮೆಯ ವಿಷಯ ಎಂದರು.
ಈ ಸಮಾರಂಭದಲ್ಲಿ ನೀಲನಗೌಡ ಪಾಟೀಲ,ಹಾಲಶಂಕ್ರಪ್ಪ ಸೂರಣಗಿ, ಹಾಲನಗೌಡ ಬ ಪಾಟೀಲ, ನಾಗಪ್ಪ ಫ ಸೂರಣಗಿ, ವೀರುಪಾಕ್ಷಪ್ಪ ಬಾಲೇಹೋಸುರ,ಕೇಂಚಪ್ಪ ಪಟ್ಟೇದ, ಪರಮೇಶ್ವಪ್ಪ ಬಳ್ಳೋಳ್ಳಿ, ಮಹದೇವಪ್ಪ ಕಲಿವಾಳ,ಶಿವಪ್ಪ ಬಳ್ಳೋಳ್ಳಿ,ಹನಮಂತಗೌಡ ಪ ಪಾಟೀಲ, ಪಕ್ಕೀರೇಶ ಕಳಸದ, ನಿಂಗಪ್ಪ ಹಾ ಸೂರಣಗಿ , ಮಾದೇಗೌಡ ಫ ಪಾಟೀಲ, ರಾಮನಗೌಡ ಬ ಪಾಟೀಲ, ಬಸವರಾಜ ಪ ಕಟಗಿ, ಯಲ್ಲನಗೌಡ ಪಾಟೀಲ , ರವಿ ಸೂರಣಗಿ, ಇನ್ನೂ ಹಲವಾರು ಹಿರಿಯರೂ, ಯುವಕರು, ಹಾಗು ಗ್ರಾಮದ ಮಹಿಳೆಯರು ಪಾಲ್ಗೊಂಡಿದ್ದರು.