ಅಧಿಕಾರದ ಆಸೆಗಾಗಿ ನನ್ನ ಚಾರಿತ್ರ್ಯವಧೆ ;  ಸವಿತಾಬಾಯಿ ಮಲ್ಲೇಶ್ ನಾಯ್ಕ್ ಅಸಮಾಧಾನ

ದಾವಣಗೆರೆ.ಏ.೫;  ಅಧಿಕಾರದ ಆಸೆಗಾಗಿ ನನ್ನ ಚಾರಿತ್ರ್ಯವಧೆ ಮಾಡಲಾಗಿದ್ದು, ಜನಸೇವೆಗಾಗಿ ಬಂದಿರುವ ನಾನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ನೂರಕ್ಕೆ ನೂರು ಖಚಿತ ಎಂದು ಮಾಯಕೊಂಡ ಕ್ಷೇತ್ರದ ಆಕಾಂಕ್ಷಿ ಸವಿತಾ ಬಾಯಿ ಮಲ್ಲೇಶ್ ನಾಯ್ಕ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮುಂದಿನ ನಡೆ ಏನೆಂದು ನನ್ನ ಕ್ಷೇತ್ರದ ಜನರು ಹೇಳಿದ್ದು, ಅದರಂತೆ ನಾನು ಕ್ಷೇತ್ರದ ಜನರ ಸೇವೆಗಾಗಿ ಖಂಡಿತ ಸ್ಪರ್ಧಿಸುತ್ತೇನೆ ಎಂದು ಆತ್ಮವಿಶ್ವಾಸದಿಂದ ನುಡಿದರು.ನಾನು ಅಧಿಕಾರಕ್ಕಾಗಿ ಈ ಕ್ಷೇತ್ರ ಆಯ್ಕೆ ಮಾಡಿಕೊಂಡಿಲ್ಲ. ಜನಸೇವೆಗಾಗಿ ಆಯ್ಕೆ ಮಾಡಿದ್ದು. ನೀವು  ಮನೆ ಮಗಳಾಗಿ,  ಕ್ಷೇತ್ರದ ಮಗಳಾಗಿ ಕೆಲಸ ಮಾಡಿದ್ದೀರಾ. ಹಾಗಾಗಿ ಚುನಾವಣೆಗೆ ನಿಲ್ಲಿ. ನಾವು ಬೆಂಬಲಿಸುತ್ತೇವೆ ಎಂದು ನಮ್ಮ ಕ್ಷೇತ್ರದ ಜನರು ಹೇಳುತ್ತಿದ್ದಾರೆ. ನಾನು ಪಾರ್ಟಿ ಟಿಕೇಟ್ ಗಾಗಿ ಕೆಲಸ ಮಾಡಿದ್ದಲ್ಲ. ಜನಸೇವೆ ಗಾಡಿ ಬಂದಿರುವ ನಾನು ಜನರ ಅಪೇಕ್ಷೆಯಂತೆ ಚುನಾವಣೆ ಎದುರಿಸುತ್ತೇನೆ ಎಂದರು.ನನ್ನ ತೇಜೋವಧೆಯಿಂದ ಕುಟುಂಬ ತುಂಬಾ ಹೊಂದಿದೆ. ಇದೆಲ್ಲಾ ಬೇಕಿತ್ತಾ ಎಂದು ಜಗಳವಾಗಿದೆ. ನಮ್ಮಲ್ಲಿ ಹೆಣ್ಣನ್ನು ದೇವರಿಗೆ ಹೋಲಿಸುತ್ತಾರೆ. ಕೇವಲ ಒಂದು ಟಿಕೇಟ್ ಗಾಗಿ ಹೆಣ್ಣನ್ನು ಅಶ್ಲೀಲವಾಗಿ ಚಿತ್ರಿಸುವುದು ಸರಿಯಲ್ಲ ಎಂದು ಭಾವುಕರಾಗಿ ಕಣ್ಣೀರು ಹಾಕಿದರು.ಸಾವಿರ ಜನ ಸಾವಿರ  ಕುತಂತ್ರ ಮಾಡಿದರೂ ಸರಿಯೇ ನಾನು ಸ್ಪರ್ಧಿಸುವುದನ್ನು ತಡೆಯಲು ಸಾಧ್ಯವಿಲ್ಲ.ಕ್ಷೇತ್ರದ ಜನರಿಗಾಗಿ ಬಂದಿದ್ದೇನೆ. ಸೇವೆ ಮಾಡೇ ಮಾಡುತ್ತೇನೆ. ನನಗೆ ಜೀವ ಬೆಂಬಲವಿದೆ ಎಂದರು.ನನಗೆ ಇತರೆ ಪಕ್ಷಗಳು ತಮ್ಮ ಪಕ್ಷದಿಂದ ನಿಲ್ಲುವಂತೆ ಕರೃದಿದ್ದಾರೆ. ನಾನು ಪಕ್ಷೇತರಳಾಗಿ ನಿಲ್ಲಲು ಯೋಚಿಸಿದ್ದೇನೆ. ಆದರೆ ನಮ್ಮ ಕ್ಷೇತ್ರದ ಜನರು ಹೇಗೆ ತೀರ್ಮಾನ ತೆಗೆದುಕೊಳ್ಳುತ್ತಾರೆಯೋ ಅದರಂತೆ ನಡೆದುಕೊಳ್ಳುತ್ತೇನೆ ಎಂದರು.ಸುದ್ದಿಗೋಷ್ಠಿಯಲ್ಲಿ ಅವರ ತಾಯಿ ಚಂದ್ರಿ ಬಾಯಿ, ಪತಿ  ನಿತಿನ್, ಸುನೀಲ್, ತೇಜಸ್ ಉಪಸ್ಥಿತರಿದ್ದರು.