ಅಧಿಕಾರಗಳ ಮೇಲೆ ಮಾಜಿ ಶಾಸಕ ದರ್ಪ

ಲಿಂಗಸುಗೂರು,ಜ.೦೯- ತಾಲೂಕಿನ ಜೆಡಿಎಸ್ ಪಕ್ಷದಿಂದ ನಿನ್ನೆ ಹೊಮ್ಮಿಕೊಳ್ಳಲಾದ ಪಂಚರತ್ನ ಯೋಜನೆ ಯಾತ್ರೆ ಅಂಗವಾಗಿ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ಮಾಕಾಪುರ ರವರು, ಮಾಜಿ ಶಾಸಕ ಮಾನಪ್ಪ ಡಿ. ವಜ್ಜಲ್‌ರವರಿಗೆ ನೇರವಾಗಿ ಸವಾಲು ಹಾಕಿದ್ದಾರೆ.
ಅದು ಏನೆಂದರೆ ಬಿಜೆಪಿ ಪಕ್ಷದಿಂದ ನಿಮಗೆ ಟಿಕೆಟ್ ಯಾವಾಗ? ಎಂದು ಪ್ರಶ್ನೆ ಹಾಕುವ ಮುಖಾಂತರ ಮಾಜಿ ಶಾಸಕ ಮಾನಪ್ಪ ವಜ್ಜಲ್ ಇವರ ವಿರುದ್ಧ ಹರಿಹಾಯ್ದಿದ್ದಾರೆ.
ಮಾಜಿ ಶಾಸಕರೆ ನೀವು ಕ್ಷೇತ್ರಕ್ಕೆ ಮಾಡಿದ ಪಾಪದ ದ್ರೋಹದ ಫಲವಾಗಿ ಇಂದಿಗೂ ಕೂಡ ನಿಮಗೆ ನಿಮ್ಮ ಪಕ್ಷದಿಂದ ಟಿಕೆಟ್ ಘೋಷಣೆ ಮಾಡದೆ ಇದ್ದುದು ನೋಡಿದರೆ ನಿಮ್ಮ ಸಾಮರ್ಥ್ಯ ಏನು ಎಂಬುದು ರಾಜ್ಯ ನಾಯಕರು ಮುಖಂಡರಿಗೆ ಗೊತ್ತಾಗಿದೆ. ಅದಕ್ಕಾಗಿ ಮಾಜಿ ಶಾಸಕ ಮಾನಪ್ಪ ವಜ್ಜಲ್ ಇವರು ಅಧಿಕಾರಿಗಳ ಮೇಲೆ ದರ್ಪ ಅಹಂಕಾರವನ್ನು ತೋರಿಸಿ ಕ್ಷೇತ್ರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ಮಾಕಾಪುರ ಮಾಜಿ ಶಾಸಕರಿಗೆ ಬಹಿರಂಗ ಸಭೆಯಲ್ಲಿ ತರಾಟೆ ತೆಗೆದುಕೊಂಡರು.
ನಾರಾಯಣಪುರ ಬಲದಂಡೆ ಕಾಲುವೆಯ ಆಧುನೀಕರಣ ಹೆಸರಿನಲ್ಲಿ ಕೋಟ್ಯಾಂತರ ಅನುದಾನ ಲೂಟಿ ಮಾಡಿ ಕ್ಷೇತ್ರದ ಜನರಿಗೆ ಮಂಕುಬೂದಿ ಎರಚುವ ಕೆಲಸ ಮಾಡಿ ಸರ್ಕಾರಕ್ಕೆ ವಂಚನೆ ಮಾಡಿರುವ ಘಟನೆ ಈಗಾಗಲೇ ರಾಜ್ಯಾದ್ಯಂತ ನಿಮ್ಮ ಎನ್.ಡಿ. ವಡ್ಡರ ಕಂಪನಿ ವಿರುದ್ಧ ತನಿಖೆ ಪ್ರಾರಂಭಿಸಿ ಸರ್ಕಾರಿ ಅನುದಾನ ದುರ್ಬಳಕೆ ಮಾಡಿಕೊಂಡಿರುವುದು ಜಗಜ್ಜಾಹೀರಾಗಿದೆ ಆಧುನೀಕರಣ ಹೆಸರಿನಲ್ಲಿ ೧೪೦೦ಕೋಟಿ ರೂಪಾಯಿಯನ್ನು ನಿಮ್ಮ ಎನ್.ಡಿ. ವಡ್ಡರ ಕಂಪನಿ ನಾಟಕ ಕಂಪನಿಯಿಂದ ಲೂಟಿ ಮಾಡುವ ಮೂಲಕ ನಿಮ್ಮ ಸಹೋದರರ ನೆರವಿನಿಂದ ಕ್ಷೇತ್ರದ ಜನರಿಗೆ ವಂಚಿಸಿದ್ದಾರೆ ನಿಮ್ಮ ನಾಟಕ ಕಂಪನಿಯಿಂದ ಜನರು ಬೇಸತ್ತು ಹೋಗಿರುವುದು ಈಗಾಗಲೇ ಕ್ಷೇತ್ರದಲ್ಲಿ ಮನೆ ಮನೆಯಲ್ಲಿ ಮಾತನಾಡುತ್ತಿದ್ದಾರೆ.
ನಿಮ್ಮ ನೆಲೆ ಯಾವುದು ಮಾಜಿ ಶಾಸಕರೆ?
ಸ್ವಲ್ಪ ಕ್ಷೇತ್ರದ ಜನರಿಗೆ ತಿಳಿಸಿ ಗ್ರಾಮೀಣ ಪ್ರದೇಶಗಳಲ್ಲಿ ನಿಮ್ಮ ಗೆಜ್ಜಲಗಟ್ಟ ಎಂದು ಬೊಬ್ಬೆ ಹೊಡೆಯುವ ಮುಖಾಂತರ ಜನರನ್ನು ಮರಳು ಮಾಡುವುದು ನಿಮ್ಮ ಕೆಲಸವಾಗಿದೆ ಮತ್ತು ನಿಮ್ಮ ಸಹೋದರರ ಊರು ಹುಣಸಗಿ ತಾಲೂಕಿನ ಕರಿಯಪ್ಪ ರವರ ಊರು ಚನ್ನೂರ ನಾಗಪ್ಪನ ಊರು ವಜ್ಜಲ್ ನಿಮ್ಮ ಮಗನಾದ ಈಶ್ವರನ ಊರು ಕರಡಕಲ್ ಹಾಗಾದರೆ, ನಿಮ್ಮ ಸ್ವಂತ ಊರು ಯಾವುದು? ಎನ್ನುವುದು ಸಾರ್ವಜನಿಕರು ಪ್ರಶ್ನೆ ಹಾಕುತ್ತಿದ್ದಾರೆ. ಮಾಜಿ ಶಾಸಕರೆ ನಿಮಗೆ ನೆನಪಿರಲಿ ನೀವು ಕೂಡ ವಲಸೆ ಬಂದ ರಾಜಕಾರಣಿ ಎಂಬುದು ಮರೆಯಬಾರದು ಎಂದು ಟೀಕಿಸಿದರು.
ಹಾಲಿ ಶಾಸಕ ಡಿ.ಎಸ್. ಹೂಲಗೇರಿ ಇವರಿಗೆ ಅಧಿಕಾರ ದರ್ಪದಿಂದ ಮದವೇರಿದ ಶಾಸಕರಾಗಿದ್ದಾರೆ. ಜನರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗದೆ ಇರುವುದು ಖೇದಕರ ವಿಷಯವಾಗಿದೆ. ಇಂತಹ ಶಾಸಕ ಇರುವುದರಿಂದಲೇ ನಮ್ಮ ಕ್ಷೇತ್ರದಲ್ಲಿ ಅರಾಜಕತೆ ಸೃಷ್ಟಿ ಮಾಡಿದೆ. ಹಾಲಿ ಮಾಜಿ ಶಾಸಕರಿಗೆ ಜೆಡಿಎಸ್ ಪಕ್ಷದಿಂದ ನೇರವಾಗಿ ಸವಾಲು ಹಾಕುತ್ತಿದ್ದೆವೆ. ಅದಕ್ಕೆ ನಿಮ್ಮ ಉತ್ತರ ಸಾರ್ವಜನಿಕರ ಸಮ್ಮುಖದಲ್ಲಿ ಅಭಿವೃದ್ಧಿ ವಿಷಯದಲ್ಲಿ ಚರ್ಚೆ ಮಾಡಲು ನೀವು ಸಿದ್ದರಿದ್ದಿರಾ? ಸವಾಲು ಹಾಕುತ್ತಿದ್ದೇವೆ ಅದಕ್ಕೆ ನಿಮ್ಮ ದಿನಾಂಕ ನಿಗದಿ ಪಡಿಸಿ ಎಂದು ಹಾಲಿ ಮಾಜಿ ಶಾಸಕರ ವಿರುದ್ಧ ವಾಗ್ದಾಳಿ ಬಸವರಾಜ ಮಾಕಾಪುರ ನಡೆಸಿದರು.