ಅಧಿಕಮಾಸ: ಶ್ರೀಗಳ ಮೌನಾನುಷ್ಠಾನ

ಚಿಂಚೋಳಿ,ಜು.18- ತಾಲೂಕಿನ ಹಲಕೋಡ ಶ್ರೀ ಸಿದ್ದೇಶ್ವರ ದೇವಾಲಯದಲ್ಲಿ ಅಧಿಕ ಮಾಸದ ನಿರ್ಮಿತ ರಟಕಲನ ವೀರಕ್ತಮಠದ ಶ್ರೀ ಮ.ನಿ.ಪ್ರ. ಸಿದ್ದಾರಾಮ ಸ್ವಾಮಿಗಳು ಇಂದಿನಿಂದ ಒಂದು ತಿಂಗಳ ಕಾಲ ಮೌನ ಅನುಷ್ಠಾನ ಕೈಗೊಂಡರು.
ಈ ಕಾರ್ಯಕ್ರಮದಲ್ಲಿ ರಟಕಲ ಶ್ರೀಗಳಿಗೆ ಹಲಕೋಡ ಶ್ರೀ ಸಿದ್ದೇಶ್ವರ ದೇವಸ್ಥಾನದ ಕಮಿಟಿ ಸದಸ್ಯರಾದ ನಾಗರಾಜ ಪಾಟೀಲ ಹಲಕೋಡ, ಅವರು ಸನ್ಮಾನಿಸಲಾಯಿತು.