ಅಧಿಕಮಾಸದ ವಿಷ್ಣುಸಹಸ್ರನಾಮ ಪಾರಾಯಣ ಸಮಾಪ್ತಿ

ಕಲಬುರಗಿ,ಆ 19: ಶ್ರೀ ಲಕ್ಷ್ಮಿನಾರಾಯಣ ಮತ್ತು ಶ್ರೀಹಂಸನಾಮಕ ಪಾರಾಯಣ ಸಂಘಗಳು ಅಧಿಕ ಮಾಸದ 33 ಮನೆಗಳಲ್ಲಿ ನಿರಂತರ ಪಾರಾಯಣ ಮಾಡಿ ಇಂದು ಕರುಣೇಶ್ವರ ನಗರದ ಜೈವೀರ ಹನುಮಾನ್ ಮಂದಿರದಲ್ಲಿ ಸಮರ್ಪಣೆ ಮಾಡಿದರು. ಪಾರಾಯಣ ಸಂಘದ ಸಂಚಾಲಕ ರವಿ ಲಾತೂರಕರ ಅವರು ಮಾತನಾಡಿ,ಇಂದು ಹನುಮಂತ ದೇವರ ಸಮ್ಮುಖದಲ್ಲಿ ಸಮರ್ಪಣೆ ಮಾಡಿದ್ದು ಅತ್ಯಂತ ಪುಣ್ಯಕಾರ್ಯ.ಮುಂಬರುವ ದಿನಗಳಲ್ಲಿ ಕರುಣೇಶ್ವರ ನಗರದಲ್ಲಿ ನೂತನ ಪಾರಾಯಣ ಸಂಘ ಪ್ರಾರಂಭ ಮಾಡಲಾಗುವುದು ಎಂದು ಹೇಳಿದರು. ಡಾ. ಕೃಷ್ಣ ಕಾಕಲ್ವರ್ ಪಾರಾಯಣ ಸಂಘದ ಅಧ್ಯಕ್ಷ ಪದ್ಮನಾಭಾಚಾರ್ಯ ಜೋಶಿ, ನರಸಿಂಹರಾವ ಕುಲಕರ್ಣಿ, ರಾಮಾಚಾರ್ಯ ನಗನೂರ, ಅನಿಲ ಕುಲಕರ್ಣಿ, ವಿನುತ ಜೋಶಿ, ಕಿಶನರಾವ ಮಟಮಾರಿ, ಜಗನ್ನಾಥಾಚಾರ್ಯ ಸಗರ, , ಗಿರೀಶ ಕುಲಕರ್ಣಿ, ಡಾ. ಶ್ರೀನಿವಾಸ ಜಾಗೀರದಾರ್, ಅಪ್ಪಾರಾವ ಟಕ್ಕಳಕಿ ವಿಜಯಕುಮಾರ ಕುಲಕರ್ಣಿ, ಶಶಿಧರ ಜೋಶಿ, ರಂಗರಾವ ಕುಲಕರ್ಣಿ, ರಾಮಚಂದ್ರ ಸೂಗೂರ, ಪ್ರವೀಣ ಓಂಕಾರ್, ಸತ್ಯಬೋಧ ಕಾಗಲ್ಕರ್, ರವೀಂದ್ರ ದೇಶಪಾಂಡೆ,ಅನಿರುದ್ಧ, ಆಶಿಶ್, ಸೇರಿದಂತೆ ಪಾರಾಯಣ ಸಂಘದ ಸದಸ್ಯರು ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಭಕ್ತರು ಉಪಸ್ಥಿತರಿದ್ದರು.