ಅದ್ಯತೆ ಆಧರಿಸಿ ಅಹವಾಲು ವಿಲೇವಾರಿಗೆ ಡಿಸಿ ಸೂಚನೆ

ಚಿಕ್ಕಬಳ್ಳಾಪುರ.ಜ.೮-ಅದಾಲತ್‌ನಲ್ಲಿ ಸ್ವೀಕೃತವಾದ ಸಾರ್ವಜನಿಕರ ಅಹವಾಲುಗಳನ್ನು ಆದ್ಯತೆ ಮೆರೆಗೆ ವಿಲೇವಾರಿ ಮಾಡುವ ಮೂಲಕ ಸರಕಾರದ ಯೋಜನೆಗಳು ಎಲ್ಲರಿಗೂ ತಲುಪು ವಂತ ಕೆಲಸವನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ಮಾಡಬೇಕು ಎಂದು ಮಾನ್ಯ ಜಿಲ್ಲಾಧಿಕಾರಿ ಆರ್.ಲತಾ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಮಂಡಿ ಕಲ್ಲು ಹೋಬಳಿಯಲ್ಲಿ ಚಾಲನೆ ನೀಡಲಾಗಿದ್ದ “ಜಿಲ್ಲಾಡಳಿತದ ನಡೆ ಗ್ರಾಮಗಳಕಡೆ” ಎಂಬ ಶೀರ್ಷಿP ಯಡಿ ವಿವಿಧ ಇಲಾಖೆಗಳ ಸೇವೆ ಗಳನ್ನು ಪ್ರತಿಯೊಬ್ಬ ನಾಗರಿಕನಿಗೂ ಒದಗಿಸಲು ಹೋಬಳಿ ಮಟ್ಟದ ಅದಾಲತ್ ಕಾರ್ಯಕ್ರಮದಲ್ಲಿ ಸ್ವೀಕೃತವಾದ ಸಾರ್ವಜನಿಕರ ಅಹವಾಲುಗಳನ್ನು ಹಾಗೂ ಇದರ ಬಗ್ಗೆ ಅಧಿಕಾರಿಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರ ಚಿಂತನೆಯೆಂತೆ ಸಾರ್ವಜನಿಕರಿ ಗಾಗಿ ಸರ್ಕಾರ ಜಾರಿಗೊಳಿಸಿರುವ ವಿವಿಧಯೋಜನೆಗಳನ್ನು ಪಡೆದು ಕೊಳ್ಳಲು ನಾಗರಿಕರು ವಿವಿಧ ಇಲಾಖೆಗಳಿಗೆ ಅಲೆದಾಡುವುದನ್ನು ತಪ್ಪಿಸಲು ಮೊದಲ ಬಾರಿಗೆ ಜಿಲ್ಲೆ ಯಲ್ಲಿ ಜಿಲ್ಲಾಡಳಿತದ ನಡೆ ಗ್ರಾಮ ಗಳ ಕಡೆ ಎಂಬ ಶೀರ್ಷಿಕೆಯಡಿ ವಿವಿಧ ಇಲಾಖೆಗಳ ಸೇವೆಗಳನ್ನು ಒದಗಿಸಲು ಮಂಡಿಕಲ್‌ನಲ್ಲಿ ಹೋಬಳಿಮಟ್ಟದಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿವಿಧ ಇಲಾಖೆಗಳಿಗೆ ಸಂಬಂಧಿಸಿ ದಂತೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿರುವ ಹಾಗೂ ಅವುಗಳನ್ನು ಪರಿಣಾಮಕಾರಿಯಾಗಿ ಆದ್ಯತೆ ಮೆರೆಗೆ ವಿಲೇವಾರಿ ಮಾಡಬೇಕು ಎಂದು ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
೨೦೨೦ರ ನವೆಂಬರ್ ೨೮ ರಂದು ಮಂಡಿಕಲ್‌ನಲ್ಲಿ ಹೋಬಳಿ ಮಟ್ಟದ ಅದಾಲತ್‌ನ್ನು ಆರಂಭಿಸ ಲಾಯಿತು. ಆದರೆ, ನವೆಂಬರ್ ೩೦ಕ್ಕೆ ಗ್ರಾಮಪಂಚಾಯಿತಿ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿ ಆಯಿತು. ಹಾಗಾಗಿ ಮತ್ತೆ ಅದಾಲತ್ ಆಯೋಜಿಸಲು ಸಾಧ್ಯವಾಗಿಲ್ಲ. ಕಳೆದ ಡಿಸೆಂಬರ್ ೩೧ಕ್ಕೆ ನೀತಿ ಸಂಹಿತೆ ಮುಕ್ತಾಯ ಗೊಂಡಿದ್ದು, ಇದೀಗ ಮತ್ತೆ ಅದಾಲತ್‌ಗೆ ಚಾಲನೆ ದೊರೆತಿದೆ. ಮುಂದಿನ ಜನವರಿ ೨೫ ರವರೆಗೆ ಅದಾಲತ್ ನಡೆಯಲಿದೆ. ಸಾರ್ವ ಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು ಎಂದು ಇದೇ ವೇಳೆ ತಿಳಿಸಿದರು.
ಮಂಡಿಕಲ್ಲು ಹೋಬಳಿ ಯಲ್ಲಿ ಮೊದಲ ಬಾರಿಗೆ ಆರಂಭಿಸ ಲಾದ ಹೋಬಳಿ ಮಟ್ಟದ ಅದಾಲ ತ್‌ನ್ನು ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ವಿಸ್ತರಿಸುವ ಚಿಂತನೆಯಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ತುಂಬಾ ಮುತುವರ್ಜಿ ವಹಿಸಿದ್ದು, ಇಲಾಖೆ ಅಧಿಕಾರಿಗಳೂ ಸಹಾ ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾದಿಕಾರಿಗಳಾದ ಪಿ.ಶಿವಶಂಕರ್ ಮಾತನಾಡಿ, ಗ್ರಾಮೀಣ ಪ್ರದೇಶದ ಸರ್ವೋತೋ ಮುಖ ಅಭಿವೃದ್ಧಿಗೆ ಜಿಲ್ಲಾ ಪಂಚಾಯತ್ ಪೂರಕವಾಗಿದ್ದು, ಇದರಡಿ ವಿವಿಧ ಅಭಿವೃದ್ಧಿ ಇಲಾಖೆಗಳು ಬರುತ್ತವೆ. ಗ್ರಾಮೀಣ ಭಾಗದಜನರಿಗೆ ಹೆಚ್ಚಿನ ಸೌಲಭ್ಯ ವನ್ನು ಒದಗಿಸುವಂತಹ ಇಲಾಖೆ ಗಳು ಜಿಲ್ಲಾ ಪಂಚಾಯತ್ ವ್ಯಾಪ್ತಿ ಯಲ್ಲಿ ಬರುತ್ತದೆ. ನರೇಗಾ ಯೋಜನೆ ಮನೆಯಿಲ್ಲದವರಿಗೆ ಮನೆ, ಉದ್ಯೋಗ ಇಲ್ಲದವರಿಗೆ ಈ ಯೋಜನೆಯಡಿ ವರ್ಷದಲ್ಲಿ ೧೦೦ ದಿನಗಳ ಉದ್ಯೋಗ ಸೇರಿ ದಂತೆ ಸಾರ್ವಜನಿಕರಿಗೆ ಮೂಲ ಭೂತ ಸೌಲಭ್ಯಗಳನ್ನು ನೀಡಬಹು ದಾಗಿದೆ. ಸರ್ಕಾರಿ ಶಾಲೆಗಳ ಶೌಚಾಲಯಗಳಿಗೆ ನೀರಿನ ವ್ಯವಸ್ಥೆ ಕಡ್ಡಾಯವಾಗಿ ಕಲ್ಪಿಸುವಂತೆ ಕ್ರಮ ವಹಿಸಲಾಗಿದ್ದು, ಜಾಬ್ ಕಾರ್ಡ್, ಇಂಗು ಗುಂಡಿ, ಕಲ್ಯಾಣಿಗಳ ಅಭಿವೃದ್ಧಿ ಸೇರಿದಂತೆ ಅದಾಲತ್ ಮುಖಾಂತರ ಪರಿಣಾಮಕಾರಿ ಯಾಗಿ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
ಆರೋಗ್ಯ ಇಲಾಖೆ ವತಿ ಯಿಂದ ಆರೋಗ್ಯ ಶಿಬಿರಗಳನ್ನು, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ. ಅದಾಲತ್ ಕಾರ್ಯಕ್ರಮದಲ್ಲಿ ೧೩೯೪ ಎಪಿ ಎಆರ್‌ಕೆ ಕಾರ್ಡ್ ಗಳನ್ನು ವಿತರಿಸಲಾಗಿದೆ ಎಂದು ಆರೋ ಗ್ಯಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಕಾರ್ಯಕ್ರಮವು ಪರಿಣಾಮ ಕಾರಿಯಾಗಿ ನಡೆಯಲು ತೆಗೆದು ಕೊಳ್ಳಬೇಕಾದ ಕ್ರಮಗಳ ಬಗ್ಗೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಮುಖ್ಯ ಯೋಜನಾಧಿಕಾರಿ ವಿ.ಧನು ರೇಣುಕಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನೋಮೇಶ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.