ಅದ್ಭುತ ಪರಾಕ್ರಮದ ದಿವ್ಯ ಪ್ರತಿರೂಪವೇ ವೀರ ಹನುಮಾನ: ಹಾರಕೂಡ ಶ್ರೀಗಳು

Oplus_131072

ಬಸವಕಲ್ಯಾಣ:ಏ.25: ಅನುದಿನವೂ ಆಂಜನೇಯನ ಸ್ತುತಿಸಿದರೆ ಚಿರಂತನ ಜೀವನೋತ್ಸವ ಲಭಿಸುತ್ತದೆ ಎಂದು ಹಾರಕೂಡದ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು ನುಡಿದವರು.
ತಾಲೂಕಿನ ಹಂದ್ರಾಳ ಕೆ. ಗ್ರಾಮದ ಜೈ ಹನುಮಾನ ದೇವಸ್ಥಾನ ಗೋಪೂರ ಉದ್ಘಾಟನೆ ಹಾಗೂ ಕಳಸಾರೋಹಣ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಈ ದೇಶದ ಪ್ರತಿ ಗ್ರಾಮದ ನಿತ್ಯೋತ್ಸವದ ಸಿರಿ ಎಂದರೆ ಹನುಮಾನ ಮಂದಿರ, ಈ ದೇಶದ ಶಕ್ತಿಯ ಚೇತನವಾಗಿ, ಭಕ್ತಿಯ ಆಗರವಾಗಿ, ಸ್ವಾಮಿ ನಿಷ್ಠೆಯ ದ್ಯುತಕವಾಗಿ, ರಾಮಾಯಣದ ದೊಡ್ಡ ಆದರ್ಶವಾಗಿ ಹನುಮಂತ ಇಂದಿಗೂ ಜನಮಾನಸದಲ್ಲಿ ದೈವಿ ಸ್ವರೂಪವಾಗಿ ಉಳಿದಿರುವ ಶ್ರೇಷ್ಠ ವ್ಯಕ್ತಿತ್ವವೇ ಸರಿ.
ಹಂದ್ರಾಳ ಕೆ. ಪುಟ್ಟ ಹಳ್ಳಿಯಾಗಿದ್ದರೂ ಇಲ್ಲಿ ಭಕ್ತಿ ಮತ್ತು ಸೌಹಾರ್ದತೆಯ ಹಂದರ ಯಾವತ್ತೂ ಹಸಿರಾಗಿರುವುದು ವಿಶೇಷವಾಗಿದೆ.
ರಾಮ ಭಕ್ತ ಹನುಮಾನ ಚೈತನ್ಯ ಎಲ್ಲರಲ್ಲಿ ನಿತ್ಯ ನಿರಂತರ ಸ್ಪೂರ್ತಿ ನೀಡುವಂತಾಗಲಿ ಎಂದು ಶುಭ ಹಾರೈಸಿದರು.
ಹುಲಸೂರಿನ ಪೂಜ್ಯ ಶಿವಾನಂದ ಮಹಾಸ್ವಾಮಿಗಳು, ಸದಲಾಪೂರದ ಪೂಜ್ಯ ಸಿದ್ದಲಿಂಗ ಶಿವಾಚಾರ್ಯರು ಮಾತನಾಡಿದರು.
ಕಲ್ಲೂರಿನ ಮೃತ್ಯುಂಜಯ ಶಿವಯೋಗಿ ಶಿವಾಚಾರ್ಯರು, ಪೂಜ್ಯ ಮಹೇಶ ಮುತ್ಯಾ, ನೀಲಕಂಠ ಪಾಟೀಲ, ರೇವಣಯ್ಯ ಸ್ವಾಮಿ, ಸದಾನಂದ ನಿಡಗುಂದೆ, ನಾಗರೆಡ್ಡಿ ಉಪಾರ, ಮಹಾದೇವರಡ್ಡಿ ಯಲ್ಲಾರೆಡ್ಡಿ, ಮಡೋಳಿ ಸುತಾರ ಉಪಸ್ಥಿತರಿದ್ದರು.
ನರಸಾರೆಡ್ಡಿಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನ ಗೀತೆ ನಡೆಸಿಕೊಟ್ಟರು.
ಸದಾನಂದ ನಿಡಗುಂದೆ ವಂದಿಸಿದರು.
ಇದಕ್ಕೂ ಮೊದಲು ಗ್ರಾಮದ ಅಂಬೇಡ್ಕರ್ ವೃತ್ತದಿಂದ ಹನುಮಾನ ಮಂದಿರದವರೆಗೆ ಹಾರಕೂಡ ಶ್ರೀಗಳ ಅದ್ದೂರಿ ಮೆರವಣಿಗೆ ಜರುಗಿತು.
ಚಿತ್ರ : ಹಂದ್ರಾಳ ಜೈ ಹನುಮಾನ ದೇವಸ್ಥಾನದ ಕಳಸಾರೋಹಣವನ್ನು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ತಮ್ಮ ಅಮೃತ ಹಸ್ತದಿಂದ ನೆರವೇರಿಸಿದರು.
ಪೂಜ್ಯ ಮಹೇಶ ಮುತ್ಯಾ, ನೀಲಕಂಠ ಪಾಟೀಲ, ರೇವಣಯ್ಯ ಸ್ವಾಮಿ, ಸದಾನಂದ ನಿಡಗುಂದೆ, ನಾಗರೆಡ್ಡಿ ಉಪಾರ, ಮಹಾದೇವರಡ್ಡಿ ಯಲ್ಲಾರೆಡ್ಡಿ, ಮಡೋಳಿ ಸುತಾರ ಉಪಸ್ಥಿತರಿದ್ದರು.