ಅದ್ಬುತ್ ಕಲೆ ಪ್ರದರ್ಶಿಸಿದ ಚಿಲ್ಲರಮಂಜು(ರಾಘವೇಂದ್ರ) ರಾಗಿಣಿ

ತಾಳಿಕೋಟೆ:ಜೂ.27: ಸ್ಮಾರ್ಟಲೈಟ್ ಕಲಾ ತಂಡ ವಿಜಯಪುರ ಗಿಚ್ಚಗಿಲಿಗಿಲಿ ಖ್ಯಾತಿಯ ಚಿಲ್ಲರಮಂಜು ಹಾಗೂ ರಾಘವೇಂದ್ರ(ರಾಗಿಣಿ) ಅವರಿಂದ ಹಾಸ್ಯಭರೀತ ರಸಮಂಜರಿ ಕಾರ್ಯಕ್ರಮವು ರವಿವಾರರಂದು ಯಶಸ್ವಿಯಾಗಿ ಜರುಗಿತು.
ಗ್ರಾಮದೇವತೆಯ ಜಾತ್ರೋತ್ಸವ ಅಂಗವಾಗಿ ಪಟ್ಟಣದ ರಾಜವಾಡೆಯಲ್ಲಿ ರಾತ್ರಿ ಪ್ರಾರಂಭಗೊಂಡ ರಸಮಂಜರಿ ಕಾರ್ಯಕ್ರಮವನ್ನು ಖ್ಯಾತ ಗಾಯಕರಾದ ವೀರೇಶ ವಾಲಿ ಅವರು ರಾಜ್ಯದ ಅಭಿಮಾನದೊಂದಿಗೆ ಈ ಕನ್ನಡ ಮಣ್ಣನ್ನು ಮರೆಯಬೇಡಾ ಓ ಅಭಿಮಾನಿ ಎಂಬ ಕನ್ನಡ ನಾಡಿನ ಹೆಮ್ಮೆಯ ಗೀತೆಯನ್ನು ಹಾಡಿ ಚಾಲನೆ ನೀಡಿದರು.
ಭಯಲು ಸೀಮೆಯ ಅದ್ಭುತ್ ಕಲಾವಿದರಾದ ಮಹಾಂತೇಶ ಅವರು ಒಳಿತು ಮಾಡು ಮನಸಾ ಎಂಬ ಗೀತೆ ಹಾಡಿದ ಅವರು ಒಬ್ಬ ಕಲಾವಿದ ಒಂದು ಮನೆಯಲ್ಲಿ ಜನ್ಮತಾಳಬೇಕಾದರೆ ಪುಣ್ಯಮಾಡಿರಬೇಕೆಂದರು. ನಂತರ ಕಲಾವಿದ ವೀರೇಶ ವಾಲಿ ಹಾಗೂ ಸಂಗಡಿಗರು ಪ್ರೀತಿ ಮಾಡಬಾರದು ಮಾಡಿದರೆ ಜಗತಕ್ಕೆ ಹೆದರಬಾರದು ಎಂಬ ಗೀತೆ ತಾಳಹಾಕಿದ ಯುವಕರು ಹಾಸ್ಯಭರೀತರಾದರು.
ನೈಂಟಿ ಬಿಡಿ ಮನೆಗೆ ನಡಿ ಎಂಬ ಕನ್ನಡ ಚಲನ ಚಿತ್ರ ನಟಿ ಕನ್ನಡ ನಾಡಿನ ಜೀವನದಿ ಕಾವೇರಿ ಎಂಬ ಗೀತೆ ನೃತ್ಯಗೈದು ಜನಮನ ರಂಜಿಸಲಾಯಿತು.
ನಿಮ್ಮೂರಿಗೆ ಮುಂಬೈಯಿ ಹಿರೋಯಿನಿ ಬಂದರೆ ಹೇಗೆ ಎಂಬ ಮುಂಬೈ ಹುಡಗಿಯ ಚಾಲಕತನ ಹಾಗೂ ಉತ್ತರ ಕರ್ನಾಟಕ ಭಾಷೆಯೊಂದಿಗೆ ವಾಗ್ವಾದ, ಇಂಗ್ಲೀಷ ಕನ್ನಡ ಭಾಷೆಯಲ್ಲಿ ನಟಿಸಿ ಕೊನೆಗೆ ಚಿಲ್ಲರ ಮಂಜು(ರಾಘವೇಂದ್ರ) ರಾಗಿಣಿ ಅವರು ಏಕ, ದೋ, ತೀನ್, ಚಾರ್, ಎಂಬ ಹಿಂದಿ ಚಿತ್ರದ ಗೀತೆಯನ್ನು ಹಾಡುವದರೊಂದಿಗೆ ಜನಮೆಚ್ಚುಗೆಯ ನೃತ್ಯ ಮಾಡಿ ಈ ಇಬ್ಬರು ಮೆಚ್ಚುಗೆಗೆ ಪಾತ್ರರಾದ ಇವರು ಈ ಹಿಂದೆ ಕಾರ್ಯಕ್ರಮ ನೀಡಲು ಬಂದಾಗ ಉತ್ತರ ಕರ್ನಾಟಕದಲ್ಲಿ ತಾವೂ 25 ದಿನಗಳ ವರೆಗೆ ಇದ್ದು ಈ ಭಾಗದ ಸಂಸ್ಕøತಿ ಜನತೆಯ ಪ್ರೀತಿ ಪ್ರೇಮ ಹಾಗೂ ವಾತ್ಸಲ್ಯದ ಮಾತುಗಳ ಕುರಿತು ಬಣ್ಣಿಸಿದ ರಾಘವೇಂದ್ರ ರಾಗಿಣಿ ಚಿಲ್ಲರ ಮಂಜು ಇವರಿಗೆ ಸತಪತಿಯಂತೆ ಕೂಡಿಸಿ ಸನ್ಮಾನಿಸಿ ಗೌರವಿಸಲಾಯಿತು.
ವಿಜಯಪುರ ಜ್ಯೂನಿಯರ್ ವಿಷ್ಣುವರ್ಧನ್ ಎಂದು ಹೆಸರಾದ ರವಿ ಕೋರಿ ಅವರು ಮಾತನಾಡುತ್ತಾ ಗ್ರಾಮದೇವತಾ ಆಶಿರ್ವಾದ ಇದ್ದರೆ ಬೇಕಾದುದ್ದನ್ನು ಸಾದಿಸಬಹುದೆಂದು ಹೇಳಿದ ಅವರು ವಿಷ್ಣುವರ್ಧನ್ ಅವರ ನಟನೆಯಲ್ಲಿ ರವಿ ಕೋರಿ, ನಾಗವಲ್ಲಿ ನಟನೆಯಲ್ಲಿ ನೀತು ಅವರು ಆತ್ಮಮಿತ್ರ ಚಲನಚಿತ್ರದಲ್ಲಿಯ ಡೈಲಾಗ್ ಹಾಗೂ ಅದ್ಭುತ್ ಹಾಡುಗಳನ್ನು ಹಾಡಿ ಇಡೀ ಜನಸ್ತೋಮದೊಂದಿಗೆ ಮೆಚ್ಚುಗೆಗೆ ಪಾತ್ರರಾದರು.
ಇದು ಅಲ್ಲದೇ ಈಶ್ವರ, ಶಿವಾಜಿ, ಪುಷ್ಪಾವತಿ ಎಂಬ ಗೀತೆ ಹಾಡಿದರಲ್ಲದೇ ರವಿ ಕೋರಿ ನೀತಾ ಮೈದುರಿಗಿ ಅವರು ಯಾವ ಮಿನಿ ತಂಡದ ಯಾಮಿಯಾ ಯಾರಮ್ಮಾ ಎಂಬ ಹಾಡದೊಂದಿಗೆ ನೃತ್ಯಗೈದು ಮನರಂಜಿಸಿದರು.
ಖ್ಯಾತ ಗಾಯಕ ವೀರೇಶ ವಾಲಿ ಅವರು ಮಾತನಾಡಿ ನಾನು ಹುಟ್ಟಿದ್ದು ನಾಲತವಾಡ ಆದರೆ ಬಧುಕು ಕೊಟ್ಟಿದ್ದು ತಾಳಿಕೋಟೆಯಾಗಿದೆ ರಸಮಂಜರಿ ಕಾರ್ಯಕ್ರಮದಲ್ಲಿ ಮಿಂಚಿದ ಚಿಲ್ಲರ ಮಂಜು ಹಾಗೂ ರಾಘವೇಂದ್ರ ರಾಗಿಣಿ ಕುರಿತು ಹಾಗೂ ಕನಸಲೂ ನೀನೆ ಮನಸಲು ನೀನೆ ಎಂಬ ಗೀತೆ ಹಾಗೂ ಚುಟು ಚುಟು ಅಂತೈತಿ ಎಂಬ ಎರಡೂ ಗೀತೆ ಹಾಡಿದ ಡಾ.ನಜೀರ ಕೋಳ್ಯಾಳ ಅವರು ನೃತ್ಯಕ್ಕೆ ಅವಕಾಶ ಕಲ್ಪಿಸಿದ್ದರ ಕುರಿತು ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಕಲಾವಿದರ ಕಲೆಯ ಬಗ್ಗೆ ಮುಕ್ತಕಂಠದಿಂದ ಹೊಗಳಿದರಲ್ಲದೇ ಈ ಹೊಗಳಿಕೆ ವಿಕ್ಷಕರಿಂದಲೂ ಕೇಳಿ ಸಂತಸ ಪಟ್ಟರು.