ಅದ್ಧೂರಿ ಹನುಮ ಜಯಂತಿ

ಕೆ.ಆರ್.ಪುರ,ಡಿ.೨೪- ಶ್ರೀರಾಮನ ಭಕ್ತ ಹನುಮನ ಜಯಂತಿ ವಿಜೃಂಭಣೆಯಿಂದ ಅಂಗವಾಗಿ ಕ್ಷೇತ್ರದ ಬಸವನಪುರ ಗ್ರಾಮದ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆಮಾಡಲಾಗಿದ್ದು,೧೦ ಸಾವಿರ ಲಡ್ಡುಗಳ ವಿತರಣೆ ಮಾಡಲಾಯಿತು.
ಮಾಜಿ ಸಚಿವ ಬೈರತಿ ಬಸವರಾಜ್ ಮತ್ತು ಬಸವನಪುರ ವಾರ್ಡ್ ನ ಮಾಜಿ ಪಾಲಿಕೆ ಸದಸ್ಯ ಜಯಪ್ರಕಾಶ್ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ಬಸವನಪುರ ಸುತ್ತಮುತ್ತಲಿನ ಬಡಾವಣೆಗಳ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಭಗವಂತನ ಕೃಪೆಗೆ ಪಾತ್ರರಾದರು.
ಹನುಮ ಜಯಂತಿಯ ಪ್ರಯುಕ್ತ ಶ್ರೀ ಅಭಯಾಂಜನೇಯ ಸ್ವಾಮಿ ದೇವಲಾಯಕ್ಕೆ ಬಗೆ ಬಗೆಯ ಹೂಗಳಿಂದ ಅಲಂಕರ ಮಾಡಿ ಸಿಂಗಾರ ಮಾಡಲಾಗಿತ್ತು.ಅಪಾರ ಭಕ್ತರು ಭಾಗವಹಿಸಿ ಹೋಮಗಳು, ಅಭಿಷೇಕ, ಪೂಜಾ ಕಾರ್ಯಗಳಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿ ಪ್ರಸಾದವನ್ನ ಸ್ವೀಕರಿಸಿ ದೇವರ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾದರು.
ದೇವಲಾಯಕ್ಕೆ ಬಂದ ಭಕ್ತಾದಿಗಳಿಗೆ ೧೫೦೦ ಕೆ.ಜಿ ಅನ್ನಸಂತರ್ಪಣೆ ಯನ್ನ ಬೆಳಗ್ಗೆ ೮ ರಿಂದ ರಾತ್ರಿ ೧೦ ರವರೆಗೆ ಅನ್ನದಾನ ಮಾಡಲಾಯಿತು. ಅನ್ನದನಕ್ಕೆ ನೂರಾರು ದಾನಿಗಳು ಸಹಾಯ ಮಾಡಿದ್ದು ವಿಷೇಶವಾಗಿತ್ತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬೈರತಿ ಬಸವರಾಜ್, ಮಾಜಿ ಪಾಲಿಕೆ ಸದಸ್ಯ ದೇವಸ್ಥಾನದ ಧರ್ಮದರ್ಶಿ ವೆಂಕಟೇಶ್,ಮುಕುಂದ,ಮುನಿರಾಜು,ಸುರೇಶ್, ಗೋವಿಂದ, ಹೇಮ,ವಿ ಮಂಜುನಾಥ್, ಗಂಗು ಮತ್ತಿತರರು ಇದ್ದರು.