ಕೆ.ಆರ್.ಪುರ,ಏ.೪- ಶ್ರೀರಾಮನವಮಿ ಉತ್ಸವ ಸಮಿತಿ ಹಮ್ಮಿಕೊಂಡಿದ್ದ ಶ್ರೀರಾಮನವಮಿಯ ಶೋಭಾಯಾತ್ರೆ ಕೆಆರ್‌ಪುರದಲ್ಲಿ ಅದ್ಧೂರಿಯಾಗಿ ನಡೆಯಿತು. ಕೌದೇನಹಳ್ಳಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭಗೊಂಡ ಶ್ರೀರಾಮನವಮಿ ಶೋಭಾಯತ್ರೆ ಯರ್ರನಪಾಳ್ಯದ ಶ್ರೀರಾಮ ದೇವಸ್ಥಾನದಲ್ಲಿ ಕೊನೆಗೊಂಡಿತು, ಶೋಭಾಯಾತ್ರೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು, ಶ್ರೀರಾಮ ನಾಮಸ್ಮರಣೆ ಘೋಷಣೆಗಳು ಮೊಳಗಿದವು,ತಮಟೆ ವಾದ್ಯ, ಕಂಸಾಳೆ,ವೀರಗಾಸೆ ಶ್ರೀರಾಮ, ಹನುಮಂತನ ವೇಷಭೂಷಣಗಳನ್ನು ತೊಟ್ಟು ಶೋಭಾಯಾತ್ರೆಗೆ ಮತ್ತಷ್ಟು ಮೆರೆಗು ನೀಡಿತು.
ಶೋಭಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ನಾಡಿನ ಒಳತಿಗಾಗಿ ಹಾಗೂ ಕೆಆರ್ ಪುರ ಕ್ಷೇತ್ರದ ಒಳತಿಗಾಗಿ ಶ್ರೀರಾಮನ ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು ಧಾರ್ಮಿಕ ಕಾರ್ಯಕ್ರಮಗಳನ್ನು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬೆರೆಸಬೇಡಿ, ಪ್ರತಿಯೊಬ್ಬರೂ ಭಕ್ತಿಯಿಂದ ಪಾಲ್ಗೊಳ್ಳಿ , ವೈಮನಸ್ಸುಗಳನ್ನು ಬಿಟ್ಟು ದೇವರಲ್ಲಿ ಪ್ರಾರ್ಥಿಸಿ ಎಂದು ತಿಳಿಸಿದರು.
ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗಲು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಎಂದು ಹೇಳಿದರು.
ರಾಮಮೂರ್ತಿನಗರದ ಕೌದೇನಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭವಾದ ಶೋಭಾ ಯಾತ್ರೆ ಕಲ್ಕೆರೆ ಮುಖ್ಯರಸ್ತೆಯ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನ, ಶ್ರೀ ಅಂಕಮ್ಮ ದೇವಸ್ಥಾನ, ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ, ರೇಣುಕಾ ಯಲ್ಲಮ್ಮ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಯರ?ರಯ್ಯನಪಾಳ್ಯದ ಕೋದಂಡರಾಮ ದೇವಸ್ಥಾನದ ಬಳಿಯಾತ್ರೆ ಅಂತಿಮವಾಯಿತು. ಶೋಭಾ ಯಾತ್ರೆಯಲ್ಲಿ ಕ್ಷೇತ್ರಾಧ್ಯಕ್ಷ ಶಿವರಾಜ್, ಪಾಲಿಕೆ ಮಾಜಿ ಸದಸ್ಯರಾದ ಜಯಪ್ರಕಾಶ್, ಕಲ್ಕೆರೆ ಶ್ರೀನಿವಾಸ್, ಅಂತೋಣಿಸ್ವಾಮಿ, ಶ್ರೀಕಾಂತ್, ಮುಖಂಡರಾದ ಬಾಕ್ಸರ್ ನಾಗರಾಜ್, ಎಂಎಲ್‌ಡಿಸಿ ಮುನಿರಾಜು, ಇಟಾಚಿ ಮಂಜು, ಬಾಬುಸೆಲ್ವಂ, ಕೇಶವ, ಕೆಆರ್‌ಪುರ ಶಿವಪ್ಪ, ಮತ್ತಿತರರಿದ್ದರು.