ಅದ್ಧೂರಿಯಾಗಿ ನೆರವೇರಿದ ಅನ್ನದಾನೇಶ್ವರ ರಥೋತ್ಸವ

ನರೇಗಲ್ಲ,ಏ30 : ಸಮೀಪದ ಅಬ್ಬಿಗೇರಿ ಗ್ರಾಮದ ಶ್ರೀ ಅನ್ನದಾನೇಶ್ವರ ಮಠ ಜಾತ್ರಾ ಮಹೋತ್ಸವದ ನಿಮಿತ್ತ ಶನಿವಾರ ಸಂಜೆ ಸಾವಿರಾರು ಭಕ್ತ ಸಾಗರದ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿದ ರಥೋತ್ಸವಕ್ಕೆ ಹಾಲಕೆರೆ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
ರಥೋತ್ಸವದಲ್ಲಿ ಡೊಳ್ಳು ಕುಣಿತ, ಭಜನೆ, ಮಹಿಳೆಯರು ಆರತಿ ಹಿಡಿದು ತೇರಿನೊಂದಿಗೆ ಹೆಜ್ಜೆ ಹಾಕಿದರೆ, ಯುವಕರು ಮತ್ತು ಯುವತಿಯರ ಶ್ರೀ ಅನ್ನದಾನೇಶ್ವರ ಮಹಾರಾಜ್ ಕೀ ಜೈ, ಹಾಲಕೆರೆ ಡಾ.ಅಭಿನವ ಅನ್ನದಾನ ಮಹಾರಾಜ್ ಕೀ ಜೈ, ಹರ ಹರ ಮಹಾದೇವ ಎನ್ನುವ ಘೋಷಣೆ ಮುಗಿಲು ಮುಟ್ಟುವಂತೆ ಇತ್ತು.ಯರೇಬೇಲೇರಿ, ಕುರುಡಗಿ, ನಾಗರಾಳ, ನರೇಗಲ್ಲ, ಗದಗ, ಹಾವೇರಿ, ಧಾರವಾಡ, ಕೊಪ್ಪಳ, ಯಲಬುರ್ಗಾ, ರೋಣ, ಹಾಲಕೆರೆ, ಮಾರನಬಸರಿ, ಜಕ್ಕಲಿ ಸೇರಿದಂತೆ ಸುತ್ತಮುತ್ತಲಿನ ನೂರು ಗ್ರಾಮಗಳಿಂದ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.