ಅದ್ಧೂರಿಯಾಗಿ ನಡೆದ ಕಲ್ಯಾಣೋತ್ಸವ

ವಿಜಯಪುರ.ಮೇ.೨೧-ಲೋಕಕಲ್ಯಾಣಾರ್ಥವಾಗಿ ಮತ್ತು ಉತ್ತಮ ಮಳೆಗಾಗಿ ನೀಲಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲಾಯಿತು.
ವಿಜಯಪುರ ಪಟ್ಟಣದ ೧೩ನೇ ವಾರ್ಡ್ ನ ಶ್ರೀ ನೀಲಕಂಠೇಶ್ವರ ದೇವಾಲಯದಲ್ಲಿ ಲೋಕಕಲ್ಯಾಣಾರ್ಥವಾಗಿ ಶ್ರೀ ನೀಲಕಂಠೇಶ್ವರ ಸ್ವಾಮಿ ಗಿರಿಜಾ ಕಲ್ಯಾಣ ಮಹೋತ್ಸವವನ್ನು ಆಯೋಜಿಸಲಾಗಿದ್ದು ದೇವಾಲಯದಲ್ಲಿ ವಿಜೃಂಭಣೆಯಿಂದ ಗಿರಿಜಾ ಕಲ್ಯಾಣವನ್ನು ನಡೆಸಲಾಯಿತು. ಕಲ್ಯಾಣೋತ್ಸವ ಕಾರ್ಯಕ್ರಮವನ್ನು. ವೇಗ ಗುರು ವೇದಬ್ರಹ್ಮ ಸೋಲೂರು ಪುನೀತ್ ಕುಮಾರ್ ಶಾಸ್ತ್ರಿಗಳು ವಿಜೃಂಭಣೆಯಿಂದ ನೆರವೇರಿಸಿದ್ರು. ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಪ್ರಯುಕ್ತ ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವವನ್ನು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು. ಇದೇ ಸಂದರ್ಭದಲ್ಲಿ ಬೆಂಗಳೂರು ನಾಗರಬಾವಿಯ ಬಾಲಕೃಷ್ಣಪ್ಪ ಹಾಗೂ ಬಾಬು ಸುರೇಶ್ ಕುಮಾರ್ ಮತ್ತು ಎಸ್ ಗೋವಿಂದ್ ರಾವ್ ಪುನೀತ್ ಕುಮಾರ್ ದೇವಾಲಯದ ಸುಮಂತ್ ಕುಮಾರ್ ಪ್ರಧಾನ ಅರ್ಚಕರಾದ ಮುರುಳಿ ಶಮ೯. ನಾಗೇಶ್ ರಾಘವೇಂದ್ರ ರಾವ್ ತೇಜಸ್ ಶರ್ಮಾ ಸ್ವರೂಪ್ ಶರ್ಮ ಇನ್ನು ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.