ಅದ್ಧೂರಿಯಾಗಿ ನಡೆದ ಎಮ್ಮಿ ಪ್ರಶಸ್ತಿ ಪ್ರದಾನ ಸಮಾರಂಭ

ಲಾಸ್ ಏಂಜಲೀಸ್, ಸೆ. ೧೩- ಪ್ರಸಕ್ತ ವರ್ಷದ ೭೪ ನೇ ಎಮ್ಮಿ ಪ್ರಶಸ್ತಿ ಪ್ರಧಾನ ಸಮಾರಂಭ ಲಾಸ್ ಏಂಜಲೀಸ್ನ ಮೈಕ್ರೋಸಾಫ್ಟ್ ಥಿಯೇಟರ್‍ಸ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ.
ಮೈಕ್ ವೈಟ್ (ಸಕ್ಸ್ ಸೇಶನ್), ಝೆಂಡಾಯಾ (ಯುಫೋರಿಯಾ) ಮತ್ತು ಜೆನ್ನಿಫರ್ ಕೂಲಿಡ್ಜ್ (ವೈಟ್ ಲೋಟಸ್) ಪ್ರಶಸ್ತಿ ಗೆಲ್ಲುವ ಮೂಲಕ ಎಚ್ ಬಿಒದಿಂದ ದೊಡ್ಡ ಗೆಲುವುಗಳನ್ನು ದಾಖಲಿಸಿದೆ.
ಪ್ರಶಸ್ತಿ ಸಮಾರಂಭವು ಲಿಯಾಂಗೇಟ್ ಪ್ಲೇನಲ್ಲಿ ಲೈವ್ ಸ್ಟ್ರೀಮ್ ಆಗಲಿದೆ. ಎಮ್ಮಿಗಳು ೨೦೨೨ ರ ನಾಮನಿರ್ದೇಶನಗಳ ಪಟ್ಟಿಯನ್ನು ಜುಲೈ ೧೨ ರಂದು ಪ್ರಕಟಿಸಲಾಯಿತು.. ಎಮ್ಮಿಗಳ ೭೪ ನೇ ಆವೃತ್ತಿಯನ್ನು ನಟ ಕೆನನ್ ಥಾಂಪ್ಸನ್ ಹೋಸ್ಟ್ ಮಾಡಿದ್ದಾರೆ
ಸಕ್ಸ್ ಸೇಶನ್ ಅತ್ಯುತ್ತಮ ನಾಟಕ ಸರಣಿ ಪ್ರಶಸ್ತಿ ಗೆದ್ದಿದೆ. ಟೆಡ್ ಲಾಸ್ಸೊ ಅತ್ಯುತ್ತಮ ಹಾಸ್ಯ ಸರಣಿಯನ್ನು ಗೆದ್ದಿದ್ದಾರೆ.
ಎಚ್ ಬಿಒ ದ ವೈಟ್ ಲೋಟಸ್ ಅತ್ಯುತ್ತಮ ಸೀಮಿತ ಸರಣಿಯನ್ನು ಗೆದ್ದಿದೆ. ಸ್ಕ್ವಿಡ್ ಗೇಮ್ಗಾಗಿ ನಾಟಕ ಸರಣಿಯಲ್ಲಿ ಲೀ ಜಂಗ್-ಜೇ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ. ಜೆಸ್ಸಿ ಆರ್ಮ್ಸ್ಟ್ರಾಂಗ್ ಆಲ್ ದಿ ಬೆಲ್ಸ್ ಸೇ ಸಕ್ಸ್ ಸೇಶನ್ ಸಂಚಿಕೆಗಾಗಿ ಅತ್ಯುತ್ತಮ ನಾಟಕ ಸರಣಿಗಾಗಿ ಬರಹಗಾರ ಪ್ರಶಸ್ತಿ ಗೆದ್ದಿದ್ದಾರೆ.
ಟೆಡ್ ಲಾಸ್ಸೋ ಸಂಚಿಕೆ ನೋ ವೆಡ್ಡಿಂಗ್ಸ್ ಅಂಡ್ ಎ ಫ್ಯೂನರಲ್ಗಾಗಿ ಹಾಸ್ಯ ಸರಣಿಯ ನಿರ್ದೇಶನ ಪ್ರಶಸ್ತಿಯನ್ನು ಎಂಜೆ ಡೆಲಾನಿ ಗೆದ್ದಿದ್ದಾರೆ. ಝೆಂಡಯಾ ಯುಫೋರಿಯಾಕ್ಕಾಗಿ ನಾಟಕ ಸರಣಿಯಲ್ಲಿ ಪ್ರಮುಖ ನಟಿ ಪ್ರಶಸ್ತಿ ಗೆದ್ದಿದ್ದಾರೆ. ಸ್ಕ್ವಿಡ್ ಗೇಮ್ ಸಂಚಿಕೆ ರೆಡ್ ಲೈಟ್, ಗ್ರೀನ್ ಲೈಟ್ಗಾಗಿ ನಾಟಕ ಸರಣಿಯ ನಿರ್ದೇಶನಕ್ಕಾಗಿ ಹ್ವಾಂಗ್ ಡಾಂಗ್-ಹ್ಯುಕ್ ಗೆದ್ದಿದ್ದಾರೆ. ಟೆಡ್ ಲಾಸ್ಸೋಗಾಗಿ ಹಾಸ್ಯ ಸರಣಿಯಲ್ಲಿ ಜೇಸನ್ ಸುಡೆಕಿಸ್ ನಾಯಕ ನಟ ಪ್ರಶಸ್ತಿ ಗೆದ್ದಿದ್ದಾರೆ.