ಅದ್ಧೂರಿಯಾಗಿ ಜರುಗಿದ ಪ್ರಜಾಪ್ರಭುತ್ವ ದಿನಾಚರಣೆ

ಸಂವಿಧಾನ ಪೀಠಿಕೆ ಸಾಮೂಹಿಕ ಪಠಣ..
ಮಾನ್ವಿ,ಸೆ.೧೫- ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕ ಆಡಳಿತ ವಿಶೇಷವಾಗಿ ಶಾಲೆ ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹ ಯೋಗದೊಂದಿಗೆ ಇಂದು ಸಂವಿಧಾನ ಪೀಠಿಕೆ ಒದುವ ದಿನಾಚರಣೆಯನ್ನು ಬಹಳ ಅದ್ದೂರಿಯಾಗಿ ಜರುಗಿತು, ಪಟ್ಟಣದ ತಾಲೂಕ ಕ್ರೀಡಾಂಗಣ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಶಾಸಕ ಜಿ ಹಂಪಯ್ಯ ನಾಯಕ ಇವರು ಡಾ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಓದಿದರು ನಂತರ ಶಾಸಕರು ಆಶಯ ನುಡಿಯನ್ನಾಡುವುದರ ಮೂಲಕ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು..
ನಂತರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಮನಿ ಮಾತಾನಾಡಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರಜಾಪ್ರಭುತ್ವ ಎಂದರೇ “ರಕ್ತಪಾತವಿಲ್ಲದೇ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳನ್ನು ತರುವಂತಹ ವ್ಯವಸ್ಥೆಯೇ ಪ್ರಜಾಪ್ರಭುತ್ವ’ ಎನ್ನುವ ಮೂಲ?ಮಂತ್ರದೊಂದಿಗೆ ನಮ್ಮ ಸಂವಿಧಾನವನ್ನು ರಚಿಸಲಾಗಿದ್ದು ಅಂತಾರಾಷ್ಟ್ರೀಯ ಪ್ರಜಾ?ಪ್ರಭುತ್ವ ದಿನದಂದು ಸಂವಿಧಾನದ ಪೀಠಿಕೆ?ಯನ್ನು ಸಾಮೂಹಿಕವಾಗಿ ವಾಚನ ಮಾಡುವ ವಿಶೇಷ ಕಾರ್ಯಕ್ರಮದ ಮಹತ್ವದ ದಿನದ ಸಂದರ್ಭದಲ್ಲಿ ಸಂವಿಧಾನ ಪೀಠಿಕೆ, ಭ್ರಾತೃತ್ವ, ಸಾಮರಸ್ಯ ಹಾಗೂ ಸಮಾನತೆಯ ಕುರಿತು ಅರಿತುಕೊಳ್ಳುವುದು ಅತಿ ಮುಖ್ಯ ಇದನ್ನು ಚಾಚೂತಪ್ಪದೇ ಅನುಸರಿಸಿದಾಗ ಮಾತ್ರ ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿ ಹೊರ?ಹೊಮ್ಮಲಿದ್ದು ಅಂತಾರಾಷ್ಟ್ರೀಯ ಪ್ರಜಾ?ಪ್ರಭುತ್ವದ ದಿನದಂದು ಸಂವಿಧಾನದ ಆಶಯ ಮತ್ತು ಮೂಲ ತತ್ವಗಳನ್ನು ಅರಿತು?ಕೊಳ್ಳುವ ಪ್ರಯತ್ನಕ್ಕೆ ಎಲ್ಲರೂ ಕೈ ಜೋಡಿಸೋಣ ಎಂದು ಸಾಮೂಹಿಕವಾಗಿ ರಾಷ್ಟ್ರಗೀತೆಯನ್ನು ಹಾಡಿದರು.
ಶಿಕ್ಷಣ ಇಲಾಖೆಯ ಯೂನಸ್ ನಿರೂಪಣೆ ಮಾಡಿದರು, ಮಹೇಶ ವಂದಿಸಿದರು.
ಈ ಸಂದರ್ಭದಲ್ಲಿ ದಂಡಧಿಕಾರಿ ರಾಜು ಪೀರಂಗಿ, ತಾಲೂಕ ಪಂಚಾಯತಿ ಅಧಿಕಾರಿ ಸೈಯಾದ್ ಪಾಟೀಲ, ಪುರಸಭೆ ಅಧಿಕಾರಿ ಗಂಗಾಧರ, ಸಮಾಜ ಕಲ್ಯಾಣ ಅಧಿಕಾರಿ ವಿಜಯಕುಮಾರ್, ಪಿ ಐ ವೀರಭದ್ರಯ್ಯ ಸ್ವಾಮಿ ಹಿರೇಮಠ, ವೈಧ್ಯಾಧಿಕಾರಿ ಡಾ ಶರಣಬಸವ ಮೂಸ್ಟೂರು, ಸಿ ಡಿ ಪಿ ಓ ಮಕ್ಸುದ್ ಅಹಮದ್, ಪಿ ಡ್ಲೂ ಡಿ ರಾಜಕುಮಾರ, ಅಕ್ಷರ ದಾಸೋಹ ಅಧಿಕಾರಿ ಸುರೇಶ, ಮಹಾಲಿಂಗಪ್ಪ, ರಾಮಲಿಂಗ ಹಾಗೂ ಮುಖಂಡರಾದ ಎ ಬಾಲಸ್ವಾಮಿ ಕೊಡ್ಲಿ, ಶಿವರಾಜ ನಾಯಕ ಸಾಹುಕಾರ, ನರಸಪ್ಪ ಜೂಕೂರು, ಪ್ರಭುರಾಜ ಕೊಡ್ಲಿ, ಕೆ ನಾಗಲಿಂಗಸ್ವಾಮಿ, ಹನುಮಂತ ಸೀಕಲ್, ಹನುಮಂತ ಕೋಟೆ, ಸೇರಿದಂತೆ ಪುರಸಭೆ ಸದಸ್ಯರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ವಸತಿ ನಿಲಯದ, ಪುರಸಭೆ, ಪೋಲಿಸ್ ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.