ಅದ್ದೂರಿ ೬೮ ನೇ ಕನ್ನಡ ರಾಜ್ಯೋತ್ಸವ


ಆನೇಕಲ್, ಡಿ. ೧೧: ಕನ್ನಡ ಕೇವಲ ಭಾಷೆಯಲ್ಲ, ಸಂಸ್ಕೃತಿ,ನಮ್ಮ ಬದುಕಿನ ಭಾವನೆಯಾಗಿದೆ ಎಂದು ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಿ.ಎನ್, ಜಗದೀಶ್ ರವರು ತಿಳಿಸಿದರು
ಬೊಮ್ಮಸಂದ್ರ ಪುರಸಭೆ ವ್ಯಾಪ್ತಿಯ ಆರ್,ಕೆ.ಲೇಕ್ ವ್ಯೂ ಬಡಾವಣೆಯಲ್ಲಿ ಜಯಕರ್ನಾಟಕ ಸಂಘಟನೆಯ ಆನೇಕಲ್ ತಾಲ್ಲೂಕು ಅಧ್ಯಕ್ಷ ಕಿರಣ್ ಪ್ರಬಾಕರ್ ರೆಡ್ಡಿ ರವರ ನೇತೃತ್ವದಲ್ಲಿ ಆಯೋಜಿಸಿದ್ದ ೬೮ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿದರು.ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಮೊದಲನೆ ಆದ್ಯತೆ ನೀಡಿ, ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ನಾವೆಲ್ಲರೂ ಒಟ್ಟಾಗಿ ಸೇರಿ ಮಾಡಬೇಕು ಎಂದರು. ಕನ್ನಡ ಭಾಷೆ ಕೇವಲ ಒಂದೆರಡು ದಿನದಿಂದ ನಿರ್ಮಾಣವಾದದ್ದು ಅಲ್ಲ. ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ ಎಂದರು. ಕನ್ನಡವನ್ನು ಉಳಿಸುವ ಮನೊಭಾವದೊಂದಿಗೆ ಕನ್ನಡದಲ್ಲಿರುವ ಜ್ಞಾನವನ್ನು ಅನ್ಯ ಬಾಷಿಕರಿಗೆ ತಿಳಿ ಹೇಳುವ ಅಗತ್ಯ ಇದೆ ಎಂದು ಹೇಳಿದರು.

ಜಯಕರ್ನಾಟಕ ಸಂಘಟನೆಯ ಜಿಲ್ಲಾ ಅಧ್ಯಕ್ಷ ಬಿ.ಎನ್.ಯೋಗಾನಂದ್ ಮಾತನಾಡಿ ಪ್ರಾಚೀನ ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಕನ್ನಡಿಗರು ಸ್ವಾಭಿಮಾನಿಗಳಾಗಬೇಕು. ಕನ್ನಡಿಗರು, ನಾಡು, ನುಡಿ, ಜಲ, ನೆಲ, ಸಂಸ್ಕೃತಿಯ ವಾರಸುದಾರರು. ಇದನ್ನು ಉಳಿಸಿ ಬೆಳೆಸಿ ಸಂರಕ್ಷಿಸಬೇಕಾದ ಕರ್ತವ್ಯ ಕನ್ನಡಿಗರದು ಎಂದರು.
ಜಯಕರ್ನಾಟಕ ಸಂಘಟನೆಯ ಆನೇಕಲ್ ತಾಲ್ಲೂಕು ಅಧ್ಯಕ್ಷ ಕಿರಣ್ ಪ್ರಬಾಕರ್ ರೆಡ್ಡಿ ಮಾತನಾಡಿ ಅಣ್ಣ ಮುತ್ತಪ್ಪ ರೈ ರವರ ಮಾರ್ಗದರ್ಶನದಲ್ಲಿ ಸ್ಥಾಪಿತವಾದ ಜಯಕರ್ನಾಟಕ ಸಂಘಟನೆಗೆ ತನ್ನದೇ ಆದ ಇತಿಹಾಸ ಹೊಂದಿದ್ದು ಲಕ್ಷಾಂತರ ಜನರಲ್ಲಿ ಕನ್ನಡಾಭಿಮಾನವನ್ನು ಬೆಳಸಿದೆ ಎಂದರು. ಆನೇಕಲ್ ತಾಲ್ಲೂಕಿನಾದ್ಯಂತ ಜಯಕರ್ನಾಟಕ ಸಂಘಟನೆ ನಿರಂತವಾಗಿ ಕನ್ನಡವನ್ನು ಉಳಿಸಿ ಬೆಳೆಸುವ ಕಾಯಕದಲ್ಲಿ ನಾವು ತೊಡಗಿದ್ದೇವೆ ಎಂದು ಹೇಳಿದರು. ಇದೇ ಸಂಧರ್ಭದಲ್ಲಿ ಸಾದಕರನ್ನು ಸನ್ಮಾನಿಸಲಾಯಿತು ಹಾಗೆಯೇ ಹಿರಿಯ ನಟಿ ಲೀಲಾವತಿ ರವರಿಗೆ ಬಾವ ಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಹೆಬ್ಬಗೋಡಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಐಯ್ಯನ್ ರೆಡ್ಡಿ, ರಾಜ್ಯ ಹಿರಿಯ ಉಪಾಧ್ಯಕ್ಷ ಮುನಿಸ್ವಾಮಿ, ರಾಜ್ಯ ಉಪಾಧ್ಯಕ್ಷ ಹರೀಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಜತ್, ರಾಜ್ಯ ಉಪಾಧ್ಯಕ್ಷ ಅಂಬರೀಷ್, ಮಹಿಳಾ ಪದಾಧಿಕಾರಿ ಶ್ರೀಮತಿ ನಿಷಾ, ಜಿಲ್ಲಾ ಕಾರ್ಯ ಅಧ್ಯಕ್ಷ ಸುಮಂತ್, ನಟರಾಜ್, ವಲಯ ಅಧ್ಯಕ್ಷ ಶ್ರೀನಿವಾಸ್, ಗಿರೀಶ್, ಗಂಗಾಧರ್. ಎಸ್.ಕೆ.ಪಬ್ಲಿಕ್ ಸ್ಕೂಲ್ ನ ಶಶಿಧರ್. ಮಾಜಿ ಪುರಸಭೆ ಸದಸ್ಯ ಮಂಜುಳ ನೀಲಕಂಠಪ್ಪ, ಕಿತ್ತಗಾನಹಳ್ಳಿ ಕೃಷ್ನಾರೆಡ್ಡಿ, ಶಿವಕುಮಾರ್ ಮತ್ತು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಪದಾಧಿಕಾರಿಗಳು ಬಾಗವಹಿಸಿದ್ದರು.