ಅದ್ದೂರಿ ಸಂಕ್ರಾಂತಿ ಆಚರಣೆ ಸೂಚನೆ

ಮುಳಬಾಗಿಲು.ಜ.೧೦-ಜನವರಿ ೧೪ ರಂದು ಸಂಕ್ರಾತಿ ಹಬ್ಬವನ್ನು ನಗರದಲ್ಲಿ ಪ್ರತಿವರ್ಷದಂತೆ ಅದ್ದೂರಿಯಾಗಿ ಆಚರಿಸಿಕೊಂಡು ಬರಲು ಸಚಿವ ಹೆಚ್.ನಾಗೇಶ್ ಸೂಚಿಸಿದರು.
ತಾಲೂಕು ಕಚೇರಿಯಲ್ಲಿ ನಡೆದ ಪೂರ್ವಭಾವಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಳಬಾಗಿಲಿನಲ್ಲಿ ಹಲವಾರು ವರ್ಷಗಳಿಂದ ಪೂರ್ವಿಕರು ಸಂಕ್ರಾಂತಿ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದು ಅದನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಈಗಿನ ಯುವ ಪೀಳಿಗೆಗೆ ಹಬ್ಬದ ಮಹತ್ವದ ಬಗ್ಗೆ ಹೆಚ್ಚಿನ ಆಸಕ್ತಿ ಉಂಟು ಮಾಡಲು ಹಲವಾರು ಮುಖಂಡರು ಶ್ರಮಿಸುತ್ತಿರುವುದು ಸ್ವಾಗತರ್ಹವಾಗಿದೆ ಇದಕ್ಕೆ ಎಲ್ಲಾ ರೀತಿಯ ನೆರವು ಸಹಕಾರವನ್ನು ನೀಡಿ ಹಬ್ಬದ ರಾಸುಗಳ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ತಿಳಿಸಿದರು.
ತಹಸೀಲ್ದಾರ್ ಕೆ.ಎನ್. ರಾಜಶೇಖರ್, ಸಿಪಿಐ ಎಂ.ಗೋಪಾಲ್ ನಾಯಕ್, ನಗರಠಾಣೆಯ ಪಿಎಸ್‌ಐ ಎಂ.ಶ್ರೀನಿವಾಸ್, ಟಿಎಪಿಸಿಎಂಎಸ್ ಅಧ್ಯಕ್ಷ ಆಲಂಗೂರು ಶಿವಣ್ಣ, ತಾ.ಪಂ ಇಓ ಸಿ. ಶ್ರೀನಿವಾಸ್, ಪೌರಾಯುಕ್ತ ಜಿ. ಶ್ರೀನಿವಾಸಮೂರ್ತಿ, ಕನ್ನಡ ಪರ ಹೋರಾಟಗಾರ ಶಂಕರ್ ಕೇಸರಿ, ನಗರಸಭಾ ಸದಸ್ಯ ಎಂ.ಪ್ರಸಾದ್, ವಿಹೆಚ್‌ಪಿ ತಾಲೂಕು ಅಧ್ಯಕ್ಷ ಎನ್. ಪ್ರಭಾಕರ್, ಜಯ ಕರ್ನಾಟಕ ಅಧ್ಯಕ್ಷ ನಂದಕಿಶೋರ್, ಭೂಮಂಜಾರಾತಿ ಸದಸ್ಯ ಆರ್. ಪೆದ್ದಪ್ಪಯ್ಯ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ವಿವಿಧ ಸಂಘಟನೆಗಳ ಮುಖಂಡರು ಇದ್ದರು.