ಅದ್ದೂರಿ ಶ್ರೀ ಕೃಷ್ಣಜನ್ಮಾಷ್ಟಮಿ ಆಚರಣೆ

(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರು,ಸೆ 8: ಪಟ್ಟಣದ ಸೋಮವಾರ ಪೇಠೆಯಲ್ಲಿ ಇರುವ ಹರಿ ಮಂದಿರದಲ್ಲಿ ನಾಮದೇವ ಸಿಂಪಿ ಸಮಾಜದ ಬಾಂಧವರಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಶ್ರೀ ಕೃಷ್ಣಜನ್ಮಾಷ್ಟಮಿ ನಿಮಿತ್ತ ಶ್ರೀ ಕೃಷ್ಣನ ಮೂರ್ತಿಯನ್ನು ತೊಟ್ಟಿಲಿನಲ್ಲಿ ಹಾಕಿ ಮಹಿಳಿಯರು ತೊಟ್ಟಿಲು ತೂಗಿ ಲಾಲಿ ಹಾಡು ಹಾಡಿದರು. ನಂತರ ಕಿತ್ತೂರು ಗೋಂದಳಿ ಸಮಾಜದ ಸಂತರಿಂದ ಭಜನೆ ಮತ್ತು ಕೀರ್ತನ ಕಾರ್ಯಕ್ರಮ ಜರುಗಿದವು.
ಮಕ್ಕಳಿಗಾಗಿ ವೇಶ ಭೂಷಣ ಹಾಗೂ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿ ಆಯ್ಕೆಯಾದ ಮಕ್ಕಳಿಗೆ ಸ್ಪರ್ಧೆಗಳ ಆಯೋಜಕರಾದ ಉತ್ತಮ ಮಾಳೋದೆ ಅವರು ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಿದರು. ಬೆಳಗಾವಿ ಜ್ಞಾನೇಶ್ವರ ಭಜನಾ ಮಂಡಳದ ಸಂತರು ಹಾಗೂ ಪಟ್ಟಣದ ನಾಮದೇವ ಸಿಂಪಿ ಸಮಾಜದ ಬಾಂಧವರು ಸೇರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲಕ್ಕಿ ಹೊತ್ತು ನಗರ ಪ್ರದಕ್ಷಣೆ ಹಾಕಿದರು.
ಈ ವೇಳೆ ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಸುನೀಲ ಪತಂಗೆ, ಉಪಾಧ್ಯಕ್ಷ ಕುಮಾರ ಪರದೇಶಿ, ಗಜಾನನ ಮಾಳೋದೆ, ಸುನೀಲ ಹಂಬರ ಸೇರಿದಂತೆ ಸಮಾಜದ ಬಾಂಧವರು ಹಾಗೂ ಪಟ್ಟಣದ ನಾಗರಿಕರು ಇದ್ದರು.