ಅದ್ದೂರಿ ರುಕ್ಮಿಣಿ ಪಾಂಡುರಂಗಸ್ವಾಮಿ ಮೆರವಣಿಗೆ

ಕೊರಟಗೆರೆ, ಜು. ೧೫- ಪಟ್ಟಣದ ಪಾಂಡುರಂಗ ಸ್ವಾಮಿ ದೇವಲಯದಲ್ಲಿ ಶ್ರೀ ವಿಠಲರುಖುಮಾಯಿ ಔದಾರ್ಯ ಸಂಸ್ಥೆ, ತಾಲ್ಲೂಕು ಭಾವಸಾರ ಕ್ಷತ್ರಿಯ ಸಂಘದ ವತಿಯಿಂದ ರುಕ್ಮಿಣಿ ಪಾಂಡುರಂಗ ಸ್ವಾಮಿಗೆ ಹೊನ್ನಿನ ಕಂಠಿಹಾರ ಧಾರಣೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ರಾಜ ಬೀದಿಗಳಲ್ಲಿ ಅದ್ದೂರಿ ಉತ್ಸವ ನಡೆಯಿತು.
ಪಟ್ಟಣದ ಪಾಂಡುರಂಗ ಸ್ವಾಮಿ ದೇವಾಲಯದಲ್ಲಿ ಆಷಾಡ ಏಕಾದಶಿ ಪ್ರಯುಕ್ತ ರುಕ್ಮಿಣಿ ಪಾಂಡುರಂಗಸ್ವಾಮಿ ಹೋಮ ಶ್ರೀ ಮಹಾಗನಪತಿ ಹೋಮ, ಶ್ರಿದತ್ತಾತ್ರೇ ಯ ಸ್ವಾಮಿ, ಶ್ರೀ ಶಿರಡಿಸಾಯಿ ಬಾಬ ಸ್ವಾಮಿಗೆ ಪಂಚಾಮೃತ ಅಭಿಷೇಕ ಹಾಗೂ ನೂತನ ಹೊನ್ನಿನ ಕಂಠಿಹಾರ ಧಾರಣೆ ಯೊಂದಿಗೆ ರುಕ್ಮಿಣಿ ಪಾಂಡುರಂಗಸ್ವಾಮಿಯ ಕಲ್ಯಾಣೋತ್ಸವ ಶಯನೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಮಹಾಮಂಗಳಾರತಿ ನಂತರ ಪ್ರಸಾದ ವಿತರಿಸಲಾಯಿತು.
ಸಂಜೆ ಪಟ್ಟಣದ ರಾಜ ಬೀದಿಗಳಲ್ಲಿ ಸಮಾಜದ ಮಹಿಳೆಯರು ಮತ್ತು ಪುರುಷರ ಭಜನಾ ಕಾರ್ಯಕ್ರಮದೊಂದಿಗೆ ಹೂವಿನ ಅಲಂಕಾರದೊಂದಿಗೆ ಪಲ್ಲಕ್ಕಿಯಲ್ಲಿ ಪಾಂಡುರಂಗಸ್ವಾಮಿಯ ಅದ್ದೂರಿ ಮೆರವಣಿಗೆ ನಡೆಯಿತು.
ಶ್ರೀ ವಿಠಲರುಖುಮಾಯಿ ಔದಾರ್ಯ ಸಂಸ್ಥೆ ಅಧ್ಯಕ್ಷ ಎಸ್.ರಘುರಾವ್ ರವರ ಅಧ್ಯಕ್ಷತೆಯಲ್ಲಿ ಭಾವಸಾರ ಸಮಾಜದ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಮತ್ತು ನೋಟ್ ಪುಸ್ತಕಗಳ ವಿತರಣೆ ಹಾಗೂ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಭಾವಸಾರ ಕ್ಷತ್ರಿಯ ಸಮಾಜದ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಶ್ರೀನಿವಾಸ್‌ರಾವ್‌ಪಿಸ್ಸೆ ಮತ್ತು ಉಪಾಧ್ಯಕ್ಷ ರಮೇಶ್ ತಾಪ್ಸೆ ರವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ವಿಠಲರುಖುಮಾಯಿ ಔದಾರ್ಯ ಸಂಸ್ಥೆ ಕಾರ್ಯದರ್ಶಿ ಬಿ.ಎಂ.ರಮೇಶ್ ಬಾಂಬೋರೆ, ಖಜಾಂಚಿ ಎಸ್.ಎಂ. ವೇಣುಗೋಪಾಲ್ ಉತ್ತರ್‌ಕರ್, ನಿರ್ದೇಶಕರುಗಳಾದ ಎಸ್.ಪಿ. ಲಕ್ಷ್ಮೀನಾರಾಯಣರಾವ್ ಉತ್ತರ್‌ಕರ್, ವಿ.ಎನ್. ರಾಮರಾವ್ ತೇಕಲ್ಕರ್, ಎ.ಎಸ್. ನಾಗೇಶ್‌ರಾವ್ ಅಂಬೇಕರ್, ಕೃಷ್ಣೋಜಿರಾವ್‌ದಾಯಿಪುಲ್ಲೆ, ಕೆ.ಎನ್. ಜಗದೀಶ್ ಪಿಸ್ಸೆ, ಎಸ್.ಎಂ. ನಾಗರಾಜು ಉತ್ತಕರ್, ಕೆ.ಟಿ. ಚಿರಂಜೀವಿ ಖೋಕಲೆ ಮತ್ತಿತರರು ಉಪಸ್ಥಿತರಿದ್ದರು.