ಅದ್ದೂರಿ ಕೃಷ್ಣ ಜನ್ಮಾಷ್ಟಮಿ ಆಚರಣೆ

(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರ,ಸೆ8: ಗಂಧದ ನಾಡು ಖಾನಾಪೂರ ತಾಲೂಕಿನ ಕೊನೆಯ ಗ್ರಾಮ ಸಮೀಪದ ಗಂದಿಗವಾಡ ಪೇಟೆ ಓಣಿಯ ಶ್ರೀ ಗಣಪತಿ ದೇವಸ್ಥಾನದ ಆವರಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಅದರ ನಿಮಿತ್ಯವಾಗಿ ಗ್ರಾಮದ ಸುಮಗಂಲೆಯರು ಜೊತೆಗೂಡಿ ಕೃಷ್ಣನನ್ನು ತೊಟ್ಟಿಲು ಹಾಕಿ ಜೋಗುಳ ಹಾಡಿದರು.
ನಂತರ ಮೊಸರು ಗಡಿಗೆ ಒಡೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಿಗೆ ಗಜಾನನ ಉತ್ಸವ ಕಮಿಟಿ ಹಾಗೂ ಗ್ರಾ,ಪಂ, ಅಧ್ಯಕ್ಷ ದೇಸಾಯಿ ಗಾಳಿ ಜೊತೆಗೂಡಿ ಬಹುಮಾನ ವಿತರಿಸಿದರು. ಗಣ್ಯರನ್ನು ಸತ್ಕರಿಸಲಾಯಿತು. ಮಕ್ಕಳು ರಾಧೆ-ಕೃಷ್ಣನ ವೇಷಧರಿಸಿ ಕಂಗೋಳಿಸಿದರು.
ಈ ವೇಳೆ ಮಾಜಿ ತಾ.ಪಂ ಸದಸ್ಯನಿ ಚೈತ್ರಾ ಕಮತಗಿ, ಗ್ರಾ.ಪಂ. ಉಪಾಧ್ಯಕ್ಷಣಿ ಲಕ್ಷ್ಮೀ ಕಮತಗಿ, ಮುಖಂಡರುಗಳಾದ ಸಾವಿತ್ರಿ ಅಂಗಡಿ, ರಮ್ಯಾ ವರ್ಣೇಕರ, ಯಶೋದಾ ಅಂಗಡಿ, ಭಾರತಿ ಮೀರಜಕರ, ಸುಜಾತಾ ಹೋಂಡೇಕರ, ತಾ.ಪಂ. ಮಾಜಿ ಸದಸ್ಯ ಮಾರುತಿ ಕಮತಗಿ,, ಗ್ರಾ.ಪಂ. ಸರ್ವ ಸದಸ್ಯ, ಶ್ರೀಗಜಾನನ ಉತ್ಸವ ಕಮೀಟಿ, ಗ್ರಾಮಸ್ಥರು, ಮುಖಂಡರು, ಜನಪ್ರತಿನಿಧಿಗಳು, ಸೇರಿದಂತೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಬಾಲರಾಜ ಭಜಂತ್ರಿ, ಸಿಬ್ಬಂದಿ, ಸೇರಿದಂತೆ ಸಾರ್ವಜನಿಕರಿದ್ದರು.