ಅದ್ದೂರಿ ಅಂಜಿನಯ್ಯ ಸ್ವಾಮಿ ಜಾತ್ರಾ ಮಹೋತ್ಸವ

ರಾಯಚೂರು, ಏ.೦೭-ತಾಲ್ಲೂಕಿನ ಗಂಜಹಳ್ಳಿ ಗ್ರಾಮದಲ್ಲಿ ಈಶ್ವರ ಅಂಜಿನಯ್ಯ ಸ್ವಾಮಿ ಜಾತ್ರಾ ಮಹೋತ್ಸವವು ಗುರುವಾರ ಅದ್ದೂರಿಯಾಗಿ ಜರುಗಿತು. ಬೆಳಿಗ್ಗೆಯಿಂದ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಗಂಗಸ್ನಾನ ನೆರವೇರಿಸಿ ಅಂಜಿನಯ್ಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿಕೊಂಡು ಡೊಳ್ಳು ಸೇವೆ ಮೂಲಕ ಊರಿನ ಪ್ರಮುಖ ಬೀದಿಗಳಲ್ಲಿ ದೇವರ ಮೆರವಣಿಗೆ ಮಾಡಲಾಯಿತು.
ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಸ್ಥಾನಕ್ಕೆ ಕರೆ ತಂದು, ಪೂಜೆಗೆ ಕೂರಿಸಲಾಯಿತು. ಪಲ್ಲಕ್ಕಿಯನ್ನು ಗೌಡರ ವಂಶಸ್ಥರ ಮನೆಗೆ ಕೊಂಡೊಯ್ದು ಹಸೆಗೆ ಬೇಕಾದ ಸಲಕರಣೆಗಳೊಂದಿಗೆ ಮೆರವಣಿಗೆ ಮಾಡಿಕೊಂಡು ದೇವಸ್ಥಾನಕ್ಕೆ ಕರೆತರಲಾಯಿತು. ದೇವಸ್ಥಾನದಲ್ಲಿ ಉತ್ಸವ ಮೂರ್ತಿಗಳನ್ನು ಕೂರಿಸಿ, ಕಂಕಣ ಧಾರಣೆ ಮಾಡಿ
ಬಗೆಬಗೆಯ ಹೂವಿನ ಅಲಂಕಾರ ಮಾಡಿ ಜಾತ್ರಾ ಮಹೋತ್ಸವದಲ್ಲಿ ಡೊಳ್ಳು ಕುಣಿತ, ಯುವಕರ ನೃತ್ಯವು ನೆರೆದಿದ್ದವರನ್ನು ಮನಸೂರೆಗೊಂಡಿತು.ಸುತ್ತಮುತ್ತಲಿನ ಊರಿನ ಅಪಾರ ಭಕ್ತರ ಜನ ಸಮೂಹ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.ಆನಂತರ ಅಗಸೆಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಡೆಯಿತು.ರಥ ಯಶಸ್ವಿಯಾಗಿ ಮರಳಿ ಸ್ವಸ್ಥಳಕ್ಕೆ ಬಂದು ನಿಂತಾಗ ಭಕ್ತಾದಿಗಳು ಚಪ್ಪಾಳೆ ತಟ್ಟಿ ಭಕ್ತಿ ಬಾವ ಮರೆದರು. ಬಳಿಕ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಕಾಯಿ ಒಡೆಸಿ, ನೈವೇದ್ಯ ನೆರವೇರಿಸಿ ಕೃತಾರ್ಥರಾದರು.
ಇಂದು ಜಾತ್ರಾ ಮಹೋತ್ಸವ ಅಂಗವಾಗಿ ಜೋಡೆತ್ತು ಸ್ಪರ್ಧೆ
ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ, ಆರೋಗ್ಯಕರ ರಾಸುಗಳನ್ನು ಸಾಕಲು ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಜೋಡಿ ಎತ್ತಿನ ಗಿರ್ಕಿ ಸ್ಪರ್ಧೆ ಆಯೋಜಿಸಲಾಗಿದೆ. ಜೋಡಿ ಎತ್ತಿನ ಗಿರ್ಕಿ ಸ್ಪರ್ಧೆಯಲ್ಲಿ ಗೆದ್ದ ವಿಜೇತರಿಗೆ ಪ್ರಥಮ ಬಹುಮಾನವಾಗಿ ೮ ತೊಲೆ ಬೆಳ್ಳಿ, ದ್ವಿತೀಯ ಬಹುಮಾನ ೬ ತೊಲೆ, ತೃತೀಯ ಬಹುಮಾನ ೫ ತೊಲೆ, ೪ನೇ ಬಹುಮಾನ ೪ ತೊಲೆ ಮತ್ತು ೫ನೇ ಬಹುಮಾನ ೧ತೊಲೆ ಬಹುಮಾನ ವಿತರಿಸಲಾಯಿತು. ಇಂದು ಸಂಜೆ ಕೈ ಕಲ್ಲು ಎತ್ತುವ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರಥಮ ಬಹುಮಾನ ೫ ಸಾವಿರ, ದ್ವಿತೀಯ ಬಹುಮಾನ ೩ ಸಾವಿರ ತೃತೀಯ ಬಹುಮಾನ ೨ ಸಾವಿರ ನೀಡಲಾಗುವುದು ಎಂದು ದೇವಸ್ಥಾನ ಸಮತಿ ಮಾಹಿತಿ ನೀಡಿದೆ.