ಅದ್ದೂರಿಯಾಗಿ ನಡೆದ ಹನುಮ ಶೋಭಾಯಾತ್ರೆ

ಸಂಜೆವಾಣಿ ವಾರ್ತೆ
ತಿ.ನರಸೀಪುರ: ಜು.09:- ವೀರಾಂಜನೇಯ ಜಾಗೃತಿ ಧರ್ಮ ಬಳಗದ ವತಿಯಿಂದ ಹನುಮ ಜಯಂತಿಯ ಶೋಭಾಯಾತ್ರೆ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು.ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಕಾರ್ಯಕ್ರದಲ್ಲಿ ಭಾಗವಹಿಸಿ ಕುಣಿದು ಭಕ್ತಿಭಾವ ಮೆರೆದರು.
ಪಟ್ಟಣದ ಗುಂಜಾ ನರಸಿಂಹಸ್ವಾಮಿ ದೇವಾಲಯದಲ್ಲಿ ವಾಟಾಳು ಪೀಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಹನುಮಂತನ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು.ನರಸಿಂಹಸ್ವಾಮಿ ದೇವಾಲಯದಿಂದ ಆರಂಭಗೊಂಡ ಯಾತ್ರೆಯು ತೇರಿನ ಬೀದಿ,ಭಗವಾನ್ ವೃತ್ತ ,ತಾಲೂಕು ಕಚೇರಿ ರಸ್ತೆ ,ವಿದ್ಯೋದಯ ವೃತ್ತ ,ಖಾಸಗಿ ಬಸ್ ನಿಲ್ದಾಣ ಮಾರ್ಗವಾಗಿ ಸಾಗಿ ಭಗವಾನ್ ವೃತ್ತದಲ್ಲಿ ಅಂತ್ಯಗೊಂಡಿತು.ಯಾತ್ರೆಯಲ್ಲಿ ರಾಮ-ಸೀತೆ -ಲಕ್ಷ್ಮಣ, ಹನುಮ ಮತ್ತು ಭಾರತಾಂಬೆಯ ಮೂರ್ತಿಗಳನ್ನು ಮೆರೆವಣಿಗೆ ನಡೆಸಲಾಯಿತು. ಸಹಸ್ರಾರು ಯುವಕರು ಮತ್ತು ಯುವತಿಯರು ಯಾತ್ರೆಯಲ್ಲಿ ಭಾಗವಹಿಸಿ ಕುಣಿದು ಕುಪ್ಪಳಿಸಿದರು. ನಾದಸ್ವರ, ಡೊಳ್ಳುಕುಣಿತ, ವೀರಗಾಸೆ ಮತ್ತು ವಿವಿಧ ಕಲಾ ತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಾತ್ರೆಗೆ ಮೆರಗು ತಂದವು.
ಪೆÇಲೀಸ್ ಬಿಗಿ ಬಂದೋಬಸ್ತ್:
ಕಾರ್ಯಕ್ರಮಕ್ಕೆ ಪೆÇಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಸ್ವತಃ ಮೈಸೂರಿನ ಪೆÇಲೀಸ್ ವರಿಷ್ಠಾಧಿಕಾರಿ ಸೀಮಾ ಲಾತ್ಕರ್ ಕಾರ್ಯಕ್ರಮ ನಡೆಯುವ ಸ್ಥಳವನ್ನು ಖುದ್ದು ಪರಿಶೀಲಿಸಿ ಅಗತ್ಯ ಪೆÇಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿದ್ದರು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಗಾವಹಿಸಲು ಹೆಚ್ಚುವರಿ ಪೆÇಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಪಟ್ಟಣದ ಎಲ್ಲ ಮದ್ಯದ ಅಂಗಡಿಗಳನ್ನು ಮುಚ್ಚಿಸಲಾಗಿತ್ತು.