ಅದ್ದೂರಿಯಾಗಿ ನಡೆದ ಶಿಕ್ಷಕರ ದಿನಾಚರಣೆ

ನಂಜನಗೂಡು: ಸೆ.05:- ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಾರ್ವಜನಿಕ ಶಿಕ್ಷಣ ಇಲಾಖೆ ನಂಜನಗೂಡು ತಾಲೂಕು ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಮತ್ತು ಗುರು ವಂದನೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ನಡೆಸಿದರು.
ಪಟ್ಟಣದ ಖಾಸಗಿ ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಕಾಂಪೆÇೀಸ್ಟ್ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಎಸ್ ಮಹಾದೇವಯ್ಯ ಮತ್ತು ಶಿಕ್ಷಣಾಧಿಕಾರಿ ರಾಜು ಉದ್ಘಾಟಿಸಿದರು.
ಎಸ್ ಮಹದೇವಯ್ಯ ಮಾತನಾಡಿ ಕಳೆದುಕೊಳ್ಳದ ಆಸ್ತಿ ಎಂದರೆ ಶಿಕ್ಷಣ ಮನುಷ್ಯ ಆತ ಸಂಪಾದಿಸಿದ ಎಲ್ಲವನ್ನು ಕಳೆದುಕೊಳ್ಳಬಹುದು ಆದರೆ ಕಲಿತ ಶಿಕ್ಷಣವನ್ನು ಮಾರಲು ಮರೆಯಲು ಆಗುವುದಿಲ್ಲ ಎಂದರು.
ಡಾಕ್ಟರ್ ರಾಧಾಕೃಷ್ಣನ್ ಅವರ ಸಾಧನೆಗಳು ಅವರು ನಡೆದು ಬಂದ ದಾರಿಗಳನ್ನು ನೆನಪಿಸಿಕೊಂಡು ಪಾಲಿಸಿದರೆ ಉನ್ನತ ಮಟ್ಟಕ್ಕೆ ಬೆಳೆಯಬಹುದು
ಈ ಭಾಗದ ಶಾಸಕರಾದ ಹರ್ಷವರ್ಧನ್ ರವರು ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡಿದ್ದಾರೆ ಹೆಚ್ಚು ಅನುದಾನವನ್ನು ಶಿಕ್ಷಣಕ್ಕೆ ನೀಡಿದ್ದಾರೆ
ಶಿಕ್ಷಕರ ಬಗ್ಗೆ ಮಾತನಾಡಿ ಮಕ್ಕಳಿಗೆ ನಿಮ್ಮ ಸೇವೆ ಬಹಳ ಮುಖ್ಯ ಅಂದರೆ ಮಕ್ಕಳಲ್ಲಿ ಮೊದಲಿನಿಂದಲೇ ವಿದ್ಯಾಭ್ಯಾಸವನ್ನು ಸರಿಯಾಗಿ ಕಲಸಿದರೆ ದೇಶಕ್ಕೆ ಅವನ ಕೊಡುಗೆ ಅಪಾರವಾಗಿ ಸಿಗುತ್ತದೆ ಮಕ್ಕಳಲ್ಲಿ ಶಿಕ್ಷಣ ಉನ್ನತ ಮಟ್ಟಕ್ಕೆ ಬೆಳೆಯಬೇಕಾದರೆ ಶಿಕ್ಷಕರ ಪಾತ್ರ ಬಹಳ ಮುಖ್ಯವಾದದ್ದು ದೇಶಕ್ಕೆ ಉನ್ನತ ಮಟ್ಟದ ವ್ಯಕ್ತಿಗಳನ್ನು ನೀಡಿದ ಇಲಾಖೆ ಅಂದರೆ ಶಿಕ್ಷಣ ಇಲಾಖೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಹೆಚ್ಚೆಚ್ಚು ಕ್ಷೇತ್ರಗಳಿಗೆ ಅನುದಾನ ನೀಡಿ ಯಾರೂ ಕೂಡ ಶಿಕ್ಷಣದಿಂದ ವಂಚಿತರಾಗಬಾರದು ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಲೇಬೇಕು ಎಂದು ಸರ್ಕಾರಗಳು ಅನುದಾನಗಳನ್ನು ನೀಡುತ್ತಿವೆ ಎಂದರು.