ಅದ್ದೂರಿಯಾಗಿ ಜರುಗಿದ ಹಾಲಸ್ವಾಮಿ ಮಠದ ರಥೋತ್ಸವ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಡಿ.25 ಪಟ್ಟಣದ ಹಳೆ ಊರಿನ ಹಾಲಸ್ವಾಮಿ ಮಠದ ರಥೋತ್ಸವ ಭಾನುವಾರ ಸಂಜೆ ವಿಜೃಂಭಣೆಯಿಂದ ಜರುಗಿತು.
ಮೂರು ದಿನಗಳಿಂದ ನಡೆಯುತ್ತಿರುವ ಜಾತ್ರೆಯಲ್ಲಿ ಮೊದಲ ದಿನ ಕಾರ್ತಿಕೋತ್ಸವ ಮತ್ತು ಮುಳುಗದ್ದಿಗೆ  ಪವಾಡ ಭಕ್ತರು ಕಣ್ಣು ತುಂಬಿಕೊಂಡರು. ಎರಡನೇ ದಿನ ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಸಭೆ ನಡೆಸಲಾಯಿತು. 7 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮೂರನೇ ದಿನ ಜರುಗಿದ ರಥೋತ್ಸವ ಕಾರ್ಯಕ್ರಮದಲ್ಲಿ ಬೆಳಗಿನಿಂದ  ಪೂಜೆ ಅಭಿಷೇಕ ನಡೆಸಲಾಯಿತು. ಭಕ್ತಾಧಿಗಳು ಮಠಕ್ಕೆ ಭೇಟಿ ನೀಡಿ ಹಾಲಸಿದ್ದೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದರು. ಸಂಜೆ ಜರಗಿದ ರಥೋತ್ಸಕ್ಕೆ  ಪದ್ಮಶ್ರೀ ಪುರಸ್ಕತೆ ರಾಣಿ ಮಾಚಯ್ಯ ಚಾಲನೆ ನೀಡಿದರು. ರಥೋತ್ಸವದ ಸಂದರ್ಭದಲ್ಲಿ ನಡೆದ ಹರಾಜು 55 ಸಾವಿರ ರೂಗೆ ಪಟಾಕ್ಷಿಯನ್ನು ಹುಚ್ಚಪ್ಪನವರು ನಿಂಗಪ್ಪ ಪಡೆದುಕೊಂಡರು.
ಭಕ್ತಾಧಿಗಳು ರಥಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ಮೂಲಸ್ಥಾನಕ್ಕೆ ಎಳೆದು ತಂದರು. ಮಹಿಳೆಯರು ಮಕ್ಕಳು ಸೇರಿದಂತೆ ಸಾವಿರಾರು ಜನ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

One attachment • Scanned by Gmail