ಅದ್ದೂರಿಯಾಗಿ ಜರುಗಿದ ಶ್ರೀ ಪಾಂಡುರಂಗ ದಿಂಡಿ ಮಹೋತ್ಸವ.


ಸಂಜೆವಾಣಿ ವಾರ್ತೆ
ಹೊಸಪೇಟೆ ನ23: ಪಟ್ಟಣದ ಶ್ರೀ ವಿಜಯವಿಠ್ಠಲ ರುಖುಮಾಯಿ ದೇವಸ್ಥಾನದಲ್ಲಿ ಶ್ರೀ ಭಾವಸಾರ ಕ್ಷತ್ರೀಯ ಸಮಾಜದಿಂದ ದಿಂಡಿ  ಮಹೋತ್ಸವ ಅದ್ದೂರಿಯಾಗಿ ಜರುಗಿತು.
ದಿಂಡಿ ಮಹೋತ್ಸವದ ಪ್ರಯುಕ್ತ ಶ್ರಿವಿಜಯವಿಠ್ಠಲ ರುಖುಮಾಯಿ ಮೂರ್ತಿಗಳಿಗೆ ವಿವಿಧ ತರಕಾರಿಗಳಿಂದ ಅಲಂಕಾಲ ಮಾಡಲಾಯಿತು. ಶ್ರೀಪಾಂಡುರಂಗ ಸಂಗೀತ ಶಾಲೆಯಿಂದ ಗಾಯನ ಕಾರ್ಯಕ್ರಮ ಜರುಗಿತು. ಪಾಠ ಶಾಲೆಯ ಶಿಕ್ಷಕ ಜಿ.ಮಾರುತಿರಾವ್ ಜ್ಞಾನಮೋಟೆ ನೇತೃತ್ವದಲ್ಲಿ ಜಿ.ಜ್ಞಾನೇಶ, ಧನರಾಜ್, ಪಾಂಡುರಂಗ, ಎನ್. ನಾಗರಾಜ ಭಕ್ತಿ ಗೀತೆಗಳನ್ನು ಹಾಡಿದರು.
ನಗರ ಪ್ರದಕ್ಷಿಣೆ: ಏಕಾದಶಿ ಅಂಗವಾಗಿ ನಗರದ ಪ್ರಮುಖ ಬೀದಿಯಲ್ಲಿ ದಿಂಡಿ ಮೆರವಣಿಗೆ ನಡೆಯಿತು. ವಾರಕರಿಗಳು, ಸಮಾಜದ ಮುಖಂಡರು ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು. ಬಳಿಕ ದೇವಸ್ಥಾನದಲ್ಲಿ 2023ರ ಕ್ಯಾಲೆಂಡರ್  ಬಿಡುಗಡೆ ಕಾರ್ಯಕ್ರಮ ನಡೆಯಿತು. ಸಮಾಜದ ಮುಖಂಡರಾದ ಜಿ.ಪುಂಡಲೀಕರಾವ್, ಹ.ಬ.ಪ.ಕೃಷ್ಣಮುರ್ತಿರಾವ್ ಫಟಗೆ, ರಾಜು ಸುಲಾಖೆ, ಮಧುಕರರಾವ್ ಸುತ್ರಾವೆ, ಅರುಣಕುಮಾರ್ ಅಚ್ಚಲಕರ್, ಸೋಮನಾಥ್, ವಿನೋದಕುಮಾರ್, ರಾಘವೇಂದ್ರರಾವ್ ಖಮಿತ್ಕರ್, ನವಲೆ, ನಾರಾಯಣರಾವ್, ಹನುಮಂತರಾವ್, ಶ್ರಿನಿವಾಸ್ ರಾವ್ ಹಾಗೂ ಇತರರಿದ್ದರು. ಇಡೀ ರಾತ್ರಿ ಪ್ರವಚನ ಹಾಗೂ ಭಾರೂಡ್ ಜರುಗಿತು.