ಅದ್ದೂರಿಯಾಗಿ ಜರುಗಿದ ಶ್ರೀಚನ್ನಬಸವ ಶಿವಯೋಗಿಗಳ ಜಾತ್ರಾ ಮಹೋತ್ಸವ

ಚಿಂಚೋಳಿ,ಮಾ.20- ಸುಕ್ಷೇತ್ರ ಪಟ್ಟಣದ ಪೂಜ್ಯ ಲಿಂಗೈಕ ಸದ್ಗುರು ಹಾರಕೂಡ ಶ್ರೀ ಚನ್ನಬಸವ ಶಿವಯೋಗಿಗಳವರ 73ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಸಹಸ್ತಾರು ಭಕ್ತರು ಜೈಕಾರದ ಘೋಷದ ಮಧ್ಯೆ ಅದ್ದೂರಿಯಾಗಿ ರಥೋತ್ಸವ ಜರುಗಿತು.
ಶಿವನುಭವ ಚಿಂತನ ಕಾರ್ಯಕ್ರಮವನ್ನು ಜಹಿರಾಬಾದ್ ಮತ್ತು ದೇಗಿನಮಡಿ ಮಲ್ಲಯ್ಯನಗಿರಿ ಪೂಜ್ಯ ಶ್ರೀ ಡಾ.ಬಸವಲಿಂಗ ಅವಧೂತರು ಅವರು ಜ್ಯೋತಿ ಬೆಳಗಸು ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಕೇಂದ್ರ ಸಚಿವರಾದ ಭಗವಂತ್ ಖೂಬಾ ಅವರು ಮಾತನಾಡಿ ಹಾರಕೂಡ ಶ್ರೀ ಚನ್ನಬಸವ ಶಿವಯೋಗಿಗಳವರ 73ನೇ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು ಈ ಜಾತ್ರೆಯಲ್ಲಿ ತೆಲಂಗಾಣ ಮತ್ತು ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಯಿಂದ ಸಾವಿರಾರು ಭಕ್ತರು ಆಗಮಿಸುವುದರಿಂದ ಜಾತ್ರೆಯು ಅದ್ದೂರಿಯಾಗಿ ಜರುಗಿದ್ದು ಎಂದು ಹೇಳಿದರು ಕಾರ್ಯಕ್ರಮದಲ್ಲಿ ಪರಮ ಪೂಜೆ ಶ್ರೀ ಹಾರಕೂಡ ಡಾ. ಚನ್ನವೀರ ಶಿವಾಚಾರ್ಯರು, ಚಿಂಚೋಳಿ ಶಾಸಕರಾದ ಡಾ. ಅವಿನಾಶ ಜಾಧವ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಸುಭಾಸ್ ರಾಠೋಡ, ಬಾಬುರಾವ ಪಾಟೀಲ್ ಬಿಜೆಪಿ ಪಕ್ಷದ ಮುಖಂಡರಾದ ಡಾ ವಿಕ್ರಮ್ ಪಾಟೀಲ್, ವಿಜಯಕುಮಾರ್ ಚಿಂಗಟೆ,ಗೌತಮ್ ಪಾಟೀಲ್, ಅಜೀತ್ ಪಾಟೀಲ್, ಮುಖಂಡರಾದ ಸಂತೋಷ ಗಡಂತಿ, ಸುಭಾಷ ಸೀಳಿನ, ನಾಗರಾಜ ಕಲಬುರ್ಗಿ, ಜಗದೀಶಸಿಂಗ್ ಠಾಕೂರ್, ಶಂಕರ ಕೊಡ್ಲಾ, ಡಾ. ಕಿಶನರಾವ ಕಾಟಾಪೂರ್, ಶಿವಕುಮಾರ ದೇಶಮುಖ ಹಾಬಾಳ, ನಾಗರಾಜ್ ಮಲಕೂಡ್, ಮತ್ತು ಅನೇಕ ಸಾವಿರಾರು ಜನಸಂಖ್ಯೆಯಲ್ಲಿ ಭಕ್ತರು ಜಾತ್ರೆ ಮಹೋತ್ಸವದಲ್ಲಿ ಭಾಗಿಯಾಗಿದ್ದರು