ಅದ್ದೂರಿಯಾಗಿ ಜರುಗಿದ ಶಿವಾನಂದ ಶಿವಯೋಗಿಗಳ ಪಲ್ಲಕ್ಕಿ ಮಹೋತ್ಸವ

ಜೇವರ್ಗಿ : ಸೆ.3:ತಾಲ್ಲೂಕಿನ ಸೊನ್ನ ಗ್ರಾಮದ ಸಿದ್ದಲಿಂಗೇಶ್ವರ ವಿರಕ್ತಮಠದ ಶತಾಯುಷಿ ಲಿಂ.ಪೂಜ್ಯ ಶಿವಾನಂದ ಶಿವಯೋಗಿಗಳ ಪುಣ್ಯಸ್ಮರಣೋತ್ಸವದ ಅಂಗವಾಗಿ ಪಲ್ಲಕ್ಕಿ ಮಹೋತ್ಸವ ಸೊನ್ನ ಮಠದ ಪೂಜ್ಯ ಶಿವಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಅದ್ದೂರಿಯಾಗಿ ಜರುಗಿತು.
ಪುಣ್ಯ ಸ್ಮರಣೋತ್ಸವದ ಅಂಗವಾಗಿ ಶ್ರೀಮಠದಲ್ಲಿ ನಿರಂತರವಾಗಿ ಐದು ದಿನಗಳ ಕಾಲ ಶಿವಾನಂದ ಶಿವಯೋಗಿಗಳ ಜೀವನ ಚರಿತ್ರೆಯ ಕುರಿತು ಸುರಪುರ ತಾಲ್ಲೂಕಿನ ಕೊಡೇಕಲ ಗಂಗಾಧರ ಶಾಸ್ತ್ರಿಗಳು ಪ್ರವಚನ ನಡೆಸಿಕೊಟ್ಟರು.ಹಾಗೂ ಹನ್ನೊಂದು ದಿನಗಳ ಕಾಲ ನಿರಂತರವಾಗಿ ಶಿವಯೋಗಿಗಳ ಗದ್ದುಗೆಗೆ ಮಹಾ ರುದ್ರಾಭಿಷೇಕ ನಡೆಯಿತು.
ಇಂದು ಬೆಳಿಗ್ಗೆ ಶಿವಾನಂದ ಶಿವಯೋಗಿಗಳ ಕರ್ತೃ ಗದ್ದಿಗೆಗೆ ವಿಶೇಷ ರುದ್ರಾಭಿಶೇಕ ಪೂಜೆಯೊಂದಿಗೆ ಮಹಾಮಂಗಳಾರುತಿ ಸೇವೆ ಮಾಡಿ ಶಿವಯೋಗಿಗಳ ಭಾವಚಿತ್ರ ಮೆರವಣಿಗೆ ಬಾಜಾ ಬಜೇಂತ್ರಿ ಹಾಗೂ ಭಜನೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ಗ್ರಾಮದ ಭಕ್ತರಾದ ಶಿವಾನಂದ ಮಾಕಾ.ವಿಜಯಕುಮಾರ ಬಿರಾದಾರ.ಶಿವಾನಂದ ಮುಧೋಳ.ಶರಣು ಮಣುರ.ಶಿವಲಿಂಗ ಹಳ್ಳಿ.ಶಿವಲಿಂಗಪ್ಪ ಮುಧೋಳ.ಮಲ್ಲಿಕಾರ್ಜುನ ಬಿರಾದಾರ.ಪ್ರಕಾಶ ಮಾಕಾ.ಬಸವರಾಜ ಜೇವರ್ಗಿ.ಮಹೇಶ ಮಹಾಜನಶೆಟ್ಟಿ. ರಮೇಶ ಕೋಳಕೂರ.ಈರಣ್ಣ ಮಾಕಾ.ಶಿವಲಿಂಗ ರೋಣದ.ಪ್ರಕಾಶ ಮಾಕಾ.ರೇವಣಸಿದ್ಧ ಅಕ್ಕಿ ಬಸವರಾಜ ಕೊಬ್ರಿಶೆಟ್ಟಿ.ಭೀಮಯ್ಯ ಗುತ್ತೇದಾರ.ಬಸವರಾಜ ಸಲಗರ.ಗುರು ಧನ್ನೂರ.ಸಂತೋಷ ನಂದರಗಿಮಠ.ಸಿದ್ದು ಆಂದೋಲಾ.ಯಲ್ಲಪ್ಪ ನಾಯಿಕೋಡಿ.ಸೇರಿದಂತೆ ಸೊನ್ನ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು