ಅದ್ದೂರಿಯಾಗಿ ಜರುಗಿದ ರಥೋತ್ಸವ. ಹಾಲಿ- ಮಾಜಿ ಶಾಸಕರು ಭಾಗಿ

ಸಿರವಾರ.ಫೆ೨೮- ತಾಲೂಕಿನ ನವಲಕಲ್ ಬೃಹನ್ಮಠದ ಲಿಂ.ಶ್ರೀ. ಷ.ಬ್ರ.ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ೨೬ನೇ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ಸೋಮವಾರ ಅದ್ದೂರಿಯಾಗಿ ಮಠಧ್ಯಾಕ್ಷರಾದ ಅಭಿನವಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವದಲ್ಲಿ ಜರುಗಿತು. ಸಂಜೆ ಗ್ರಾಮದ ವಿವಿಧ ವಾರ್ಡಗಳಲ್ಲಿ ಪಲ್ಲಕಿ ಸೇವೆ ಜರುಗಿತು. ಡೊಳ್ಳು, ಬಾಜ,ಭಜನೆ ಸಕಲ ವಾದ್ಯಗಳ ಮೂಲಕ, ಕುಂಭ, ಕಳಸದೊಂದಿಗೆ ಭಕ್ತರ ಜಯ ಘೋಷದೊಂದಿಗೆ ರಥೋತ್ಸವ ಜರಗಿದರೆ. ರಥಕ್ಕೆ ಉತ್ತುತ್ತಿ, ಬಾಳೆ ಹಣ್ಣು ಎಸೆದು ಭಕ್ತಿ ಸಲ್ಲಿಸಿದರು.
ಸಂದರ್ಭದಲ್ಲಿ ವಿವಿಧ ಮಠದ ಪೂಜ್ಯರು, ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಮಾಜಿ ಶಾಸಕರಾದ ಜಿ.ಹಂಪಯ್ಯನಾಯಕ, ಬಸವನಗೌಡ ಬ್ಯಾಗವಾಟ್, ರಾಜಾ ಆದರ್ಶ ನಾಯಕ,ಜೆ.ದೇವರಾಜಗೌಡ,ರಮೇಶದರ್ಶನಕರ್, ದಾನನಗೌಡ,ಶಿವಶರಣಗೌಡ, ಶಿವಶರಣ ಸಾಹುಕಾರ ಅರಕೇರಿ, ಖಲಿಲ್ ಖುರೆಸಿ, ಚನ್ನಬಸಯ್ಯ ಸ್ವಾಮಿ, ಪರಮೇಶನಾಯ್ಕ್ ಮುರ್ಕಿಗುಡ್ಡ,ಪಾಷಸಾಬ್, ಸೇರಿದಂತೆ ಸಹಸ್ರಾರು ಭಕ್ತರು ಭಾಗವಹಿಸಿದ್ದರು.