ಅದ್ದೂರಿಯಾಗಿ ಜರುಗಿದ ನೀಲಕಂಠ ಕಾಳೇಶ್ವರ ರಥೋತ್ಸವ

ಕಾಳಗಿ.ಎ.20. ಪಟ್ಟಣದ ನೀಲಕಂಠ ಕಾಳೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಅಪಾರ ಭಕ್ತ ಜನಸಾಗರ ಜಯಘೋಷಗಳ ಮಧ್ಯೆ ಭವ್ಯ ರಥೋತ್ಸವ ಜರಗಿತು.

ವಿವಿಧ ಹೂಗಳಿಂದ ಅಲಂಕಾರಗೊಂಡಿದ್ದ ರಥವನ್ನು ಎಳೆಯಲು ಚಾಲನೆ ನೀಡುತ್ತಿದ್ದಂತೆ ಭಕ್ತ ಸಮುದಾಯದಿಂದ ಹರ್ಷೋದ್ದಾರ ಮುಗಲಿ ಮುಟ್ಟಿತು. ರಥೋತ್ಸವ ಮಾರ್ಗದೂದ್ದಕ್ಕೂ ಭಕ್ತರು ಚಪ್ಪಾಳೆ, ಶಿಳ್ಳೆಗಳ ಮೂಲಕ ಸಂಭ್ರಮಿಸಿದರು. ಮಾರ್ಗದ ಎರಡು ಬದಿಯಲ್ಲಿ ನಿಂತಿದ ಭಕ್ತರು ರಥಕ್ಕೆ ಉತ್ತುತ್ತಿ ಬಾಳೆಹಣ್ಣು ಅರ್ಪಿಸಿ ಭಕ್ತಿ ಮೆರೆದರು. ರಥ ಸ್ಥಳ ಬಿಡುತ್ತಲೆ ನೆರೆದ ಸಾವಿರಾರು ಭಕ್ತರು ಶ್ರೀ ನಿಲಕಂಠ ಕಾಳೇಶ್ವರ ಮಹಾರಾಜ ಕಿ ಜೈ ಎನ್ನುವ ಘೋಷಣೆಗಳು ಮೊಳಗಿತು.

ಜಾತ್ರೆಯ ನಿಮಿತ್ತ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಆರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಸಂಭ್ರಮದಿಂದ ಜರಗಿದವು. ಭಕ್ತರು ಕಡಬು ಹೋಳಿಗೆ ಹುಗ್ಗಿ ಹಾಗೂ ವಿವಿಧ ಬಗೆಯ ನೈವಿದ್ಯ ಮಾಡಿ ಸಮರ್ಪಿಸಿದರು.

ಜಾತ್ರೆ ಅಂಗವಾಗಿ ದೇವಸ್ಥಾನಕ್ಕೆ ವಿದ್ಯುತ್ ಅಲಂಕಾರ ಮಾಡಲಾಗಿತ್ತು. ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿ ಶ್ರೀ ನೀಲಕಂಠ ಕಾಳೇಶ್ವರ ದರ್ಶನ ಪಡೆದುಕೊಂಡರು.

ಸಿಪಿಐ ವಿನಾಯಕ ನೇತೃತ್ವದಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್ ಜರಗಿತು.