ಅದೋನಿ ಸಾಹೇಬ್ ಉರುಸು ಮಹೋತ್ಸವ ನಾಳೆ

ತೆಕ್ಕಲಕೋಟೆ ಜ 15 : ಪಟ್ಟಣದ ನಿಟ್ಟೂರು ರಸ್ತೆಯ ಆದೋನಿ ಸಾಹೇಬ್ ಎಂದೆ ಪ್ರಖ್ಯಾತರಾದ ಹಜರತ್ ಖ್ವಾಜ ಸೈಯದ್ ಷಾ ಮಹಮ್ಮದ್ ಅಬ್ದುಲ್ ರಜಾಕ್ ಪೀರ್ ಹಸೇನಿ ವಲ್ ಹುಸೇನಿ ಜಾಫರಿ ಚಿಸ್ತವುಲ್ ಖಾದ್ರಿ ಇವರ ಉರುಸು ಮಹೋತ್ಸವ ಸೋಮವಾರ ನಡೆಯಲಿದೆ.
ಉರುಸಿನ ದಿನ ರಾತ್ರಿ ಮೈಸೂರಿನ ಸಿಮ್ರಾನ್ ತಾಜ್ ಹಾಗೂ ಪುಣೆಯ ಮೋಸಿನ್ ಚಿಸ್ತಿ ಇವರ ಖವ್ವಾಲಿ ಕಾರ್ಯಕ್ರಮ ಜರುಗಲಿದೆ.

‘ಸತ್ಯ ಸಂಗತಿ’: ಸಂತರು ಹಜರತ್ ಅಲಿ ರವರ ಮನೆತನದ 31ನೇ ವಂಶಾವಳಿಯಾಗಿದ್ದು ಹಿಂದುಸ್ತಾನದಲ್ಲಿನ 42 ದರ್ಗಾಗಳ ಗುರುಪೀಠ ಅಧಿಪತಿಗಳಾದ ಹಾಗೂ ಜಗದ್ಗುರುಗಳಾದ ಶರಣರು ದಿನಾಂಕ 8.12.2004 ರಂದು ಅಲ್ಲಾಹನಲ್ಲಿ ಐಕ್ಯರಾದರು ಇವರು ತಾವು ಐಕ್ಯರಾಗುವ ವೇಳೆ ನಾನು ತೀರಿದ ಮೇಲೆ 40 ದಿನದ ಒಳಗೆ ಸಮಾಧಿಯನ್ನು ತೆಗೆದು ನೋಡಿರಿ ಎಂದು ತಮ್ಮ ಆತ್ಮೀಯ ಶಿಷ್ಯ ಬಳಗಕ್ಕೆ ಹೇಳಿದ್ದರು. ಅದೇ ರೀತಿ 36ನೇ ದಿನಕ್ಕೆ ಅಂದರೆ 15-01- 2005 ರಂದು ಸರ್ವ ಶಿಷ್ಯ ಬಳಗ ಹಾಗೂ ಊರಿನ ಪ್ರಮುಖರೆಲ್ಲರೂ ಮತ್ತು ಗುರುಗಳ ಮಕ್ಕಳಾದ ಸೈಯದ್ ಶಾ ಮಹಬೂಬ್ ಹುಸೇನಿ, ಸೈಯದ್ ಶಾ ದಾದಾಪೀರ್ ಹುಸೇನಿ . ಸೈಯದ್ ಚಾಂದ್ ಪೀರ್ ಹುಸೇನಿ ರವರ ಜೊತೆಗೂಡಿ ಶರಣರ ಸಮಾಧಿಯ ಹತ್ತಿರ ಹೋಗಿ ಸಮಾಧಿಯನ್ನು ತೆಗೆದು ನೋಡಲಾಗಿ ಗುರುಗಳ ಶರೀರವು ಮೊದಲು ಯಾವ ರೀತಿ ಇತ್ತೋ ಅದೇ ರೀತಿಯಾಗಿ ಶ್ರೀಗಂಧ ಸುವಾಸನೆಯಿಂದ ಘಮಘಮಿಸುತ್ತಿತ್ತು. ಸರ್ವ ಭಕ್ತಾದಿಗಳು ಶರಣರ ದರ್ಶನ ಪಡೆದು ಆಶ್ಚರ್ಯ ಚಕಿತರಾದರು.

ಜನವರಿ 15 ಭಾನುವಾರ ಗಂಧ ಜನವರಿ 16 ಸೋಮವಾರ ಉರುಸು ಹಾಗೂ 17 ಮಂಗಳವಾರ ಜಿಯಾರತ್ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.