ಅದೆಗೆಟ್ಟು ಗಡಿ ಗ್ರಾಮಗಳು/ರೈತರ ಜಮೀನುಗಳಿಗೆ ಸಂಪರ್ಕ ರಸ್ತೆ ಜನಪ್ರತಿನಿಧಿಗಳು ನಿರ್ಲಕ್ಷ್ಯ

ಎಮ್ಮಿಗನೂರು, ಅ.31: ಸ್ಥಳೀಯ ಇಟಗಿ ರಸ್ತೆಯ ಸೇರಿದಂತೆ ವರಗೈ ಹನುಮಪ್ಪ, ಇತರೆ ಕ್ಯಾಂಪುಗಳಿಗೆ ಕಳೇದ 4 ದಶಕಗಳು ಕಳೇದರು ದಿವ್ಯ ನಿರ್ಲಕ್ಷ್ಯಗೆ ಕೈ ಕನ್ನಡಿ ಸಾಕ್ಷಿಯಾಗಿ ರೈತರು ಹೊಲಕ್ಕೆ ನಿತ್ಯಚಟುವಕೆ ಮಾಡಲು ಹೈರಾಣವಾಗಿದೆ ಸಂಗತಿಯಾಗಿದೆ
ಇಲ್ಲಿನ ಹೊಲಗಳಿಗೆ ರಸ್ತೆ ಸಂಪೂರ್ಣ ಅದೆಗೆಟ್ಟು ಕೆಸರು ಗದ್ದೆಯಾಗಿದೆ ರಸ್ತೆ ಪಕ್ಕದಲ್ಲಿ ಗಿಡ ಗಂಟೆಗಳು ಬೆಳೆದಿದ್ದು ವಾಹನ ಸವಾರರು, ಪಾದಚಾರಿಗಳು, ರೈತರು ಮತ್ತು ರಸ್ತೆ ಪಕ್ಕದ ಮನೆಯವರು ನರಕ ಯಾತನೆಯಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಈ ರಸ್ತೆಯಲ್ಲಿ ರೈತರ ನೂರಾರು ಜಮೀನುಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ ರಸ್ತೆ ಹದೆಗೆಟ್ಟುರುವುದರಿಂದ ರೈತರು ಬೆಳೆದ ಬೆಳೆ ಕಟಾವು ಮಾಡಿ ಸಾಗಾಟ ಮಾಡಲು ಪರದಾಡುವಂತಾಗಿದೆ. ಹೊಲಗಳಿಗೆ ಸೈಕಲ್ ಹಾಗೂ ಬೈಕಾಗಳಲ್ಲಿ ರಸ್ತೆಯಲ್ಲಿ ಹೋಗಿಬರಲಾಗದೆ ರೈತರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಇತ್ತಿಚೆಗೆ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮದಿಂದ ತಾಲೂಕಿನ ಇಟಗಿ – ಸಣಾಪುರ ಹೋಗುವ ರಸ್ತೆಯಲ್ಲಿ ಸಂಚರಿಸುವುದು ಕಷ್ಟವಾಗಿದೆ. ರಸ್ತೆಯು ಸಂಪೂರ್ಣ ಮಳೆ ನೀರು ತುಂಬಿಕೊಂಡಿದ್ದು ಗುಂಡಿಗಳು ಕಾಣಿಸದಂತಗಿದೆ ಈ ರಸ್ತೆಯಲ್ಲಿ ಮಕ್ಕಳು, ಮಹಿಳೆಯರು, ವಯಸ್ಸಾದವರು ಹಾಗೂ ದ್ವಿಚಕ್ರ ವಾಹನ ಸವಾರರು ಸರ್ಕಸ್ ಮಾಡಿಕೊಂಡು ಎದ್ದು ಬಿದ್ದು ಓಡಾಡುತ್ತಿದ್ದ ಸ್ಥಳೀಯ ನಿವಾಸಿಗಳು ಜನಪ್ರತಿ ನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ವತ್ತುವರಿ: ಈ ಮದ್ಯದಲ್ಲಿ ಕೆಲಭಾಗದಲ್ಲಿ ರಸ್ತೆ ಒತ್ತುವರಿಯಾಗಿದ್ದು ಬೆಳದ ಮಾಸುಲ ಸಾಗಿಸಲು ಸಮಸ್ಯೆಯಾಗಿದೆ
ಅಕ್ಕಪಕ್ಕದಲ್ಲಿ ಕುಟುಂಬಗಳು ವಾಸಿಸುತ್ತಿದ್ದು ಹೊರ ಬರಲು ಭಯಪಡುವ ಸ್ಥಿತಿ ಇದೆ. ಕೆಸರಿನಿಂದ ಆವೃತವಾಗಿರುವ ರಸ್ತೆ ಕೆಟ್ಟ ವಾಸನೆ ಬರುತ್ತಿದೆ ಹಾಗೂ ಅನೇಕ ಜನರು ಕಾಲು ಜಾರಿ ಬಿದ್ದು ನೋವು ಮಾಡಿಕೊಂಡಿರುವ ಉದಾಹರಣೆಗಳಿವೆ. ರಸ್ತೆಯುದ್ದಕ್ಕೂ ಸಮತಟ್ಟು ಗುಂಡಿಗಳ ಸಮ್ರಾಜ್ಯವಾಗಿದೆ
ಪ್ರತಿ ಮಳೆ ಪ್ರಾರಂಭವಾಗಿತಿದ್ದಂತೆ ಈ ರಸ್ತೆ ಕೆಸರು ಗದ್ದೆಯಾಗಿರುತ್ತದೆ. ಇದರಿಂದ ಪ್ರತಿ ವರ್ಷ ತೊಂದರೆಯಾಗುತ್ತಿದ್ದು ಕೂಡಲೇ ಸಂಬಂಧ ಪಟ್ಟ ಅಧಿಕಾರಗಳು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಶಾಶ್ವತವಾದ ಪರಿಹಾರ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸದ್ದಾರೆ. ರಸ್ತೆ ನಿರ್ಮಾಣ ಮಾಡಿ ಶಾಶ್ವತ ಪರಿಹಾರ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ರೈತರು ಎಚ್ಚರಿಸಿದ್ದಾರೆ.
ಈ ರಸ್ತೆಯಲ್ಲಿ ಗುಂಡಿಗಳು ಗೊತ್ತಾಗದೆ ವಾಹನ ಸವಾರರು ಬಿದ್ದು ಗಾಯಗೊಂಡ ಘಟನೆಗಳು ಸಾಕಷ್ಟು ನಡೆದಿವೆ. ರಸ್ತೆಯ ಪಕ್ಕದ ಮನೆಗಳಿಗೆ ಸೊಳ್ಳೆಗಳು ಹೆಚ್ಚಾಗಿ ಸ್ಥಳೀಯರಿಗೆ ಸಾಂಕ್ರಾಮಿಕ ರೋಗದ ಬೀತಿ ಎದುರಾಗಿದೆ. ಎನ್.ಶೀರನಹಳ್ಳಿಯು ಗಡಿಗ್ರಾಮ ಆಗಿರುವುದರಿಂದ ಆನೇಕ ಗ್ರಾಮಗಳು ಕಡೆಗಣನೆಗೆ ಒಳಗಾಗಿವೆ.
-ಗ್ರಾಮದ ಓರ್ವ ಮಹಿಳೆ
ರಸ್ತೆ ಅಭಿವೃದ್ಧಿ ಪಡಿಸುವಂತೆ ಜನಪ್ರತಿ ನಿಧಿಗಳಿಗೆ ಅನೇಕ ಬಾರಿ ಮನವಿ ಪತ್ರ ಸಲ್ಲಿಸಿದರು ರಸ್ತೆ ಅಭಿವೃದ್ಧಿ ಬಗ್ಗೆ ಮುಂದಾಗುತ್ತಿಲ್ಲ. ರಾತ್ರೆ ವೇಳೆ ವಯಸ್ಸಾದವರು ಮಕ್ಕಳು ಹಾಗೂ ಮಹಿಳೆಯರು ಮನೆಯಿಂದ ಹೊರಬರುವುದು ಕಷ್ಟವಾಗಿದ್ದು. ಗೋಳು ಕೇಳುವವರೇ ಇಲ್ಲದಂತಾಗಿದೆ ಇತ್ತ ಕಡೆ ತಲೆ ಹಾಕಿಲ್ಲ ಎಂದು ಹೇಳಿದರು.

  • ಗ್ರಾಮದ ರೈತ ಜಡೇಪ್ಪ ಎಮ್ಮಿಗನೂರು
    ಶ್ರೀಘ್ರದಲ್ಲಿ ಗಡಿಗ್ರಾಮದ ಈ ಇಟಿಗಿ ರಸ್ತೆ ಕಮಾಗಾರಿ ಕೈಗೆತ್ತಿ ಕೊಳ್ಳಲಾಗುವುದು ಎಂದು ಭರವಸೆ ನೀಡಿದರು
  • ಜೆ.ಎನ್. ಗಣೇಶ ಕಂಪ್ಲಿ ಕ್ಷೇತ್ರದ ಶಾಸಕ