ಅದಿರು ಸಾಗಣೆ ಲಾರಿಗಳ ಅರ್ಭಟ- ಸಾರ್ವಜನಿಕರ ಓಡಾಟಕ್ಕೆ ಕಂಟಕ


ಸಂಡೂರು:ಮೇ: 29:  ತಾಲೂಕಿನ ಯಶವಂತನಗರದಿಂದ ಅಂಕಮನಾಳ್ ಗ್ರಾಮಕ್ಕೆ ಹೋಗುವ ರೈಲ್ವೆ ಕ್ರಾಸಿಂಗ್ ಬಳಿ ಅದಿರು ಲಾರಿಗಳ ಅಬ್ಬರದಲ್ಲಿ ಸರ್ಕಾರಿ ಬಸ್ಸು ರಸ್ತೆ ಬಿಟ್ಟು ಮರಕ್ಕೆ ಡಿಕ್ಕಿ ಹೊಡೆಯುವಂತಹ ದುಸ್ಥಿತಿ ಉಂಟಾಗಿದೆ.
ತಾಲೂಕಿನಾದ್ಯಂತ ಕಳೆದ 3 ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ಪರಿಣಾಮ ಯಶವಂತನಗರದಿಂದ ಅಂಕಮನಾಳ್, ಮಲ್ಲಾಪುರ ಗ್ರಾಮಗಳಿಗೆ ಹೋಗುವ 3-4 ಕಿ.ಮೀ. ರಸ್ತೆಯಲ್ಲಿ ವಿಪರೀತ ಕೆಸರಿನಿಂದ ಸಾರ್ವಜನಿಕರು ದ್ವಿಚಕ್ರ ಸವಾರರು, ಹಾಗೂ ಸರ್ಕಾರಿ ಬಸ್ಸುಗಳ ಸಂಚಾರ ದುಸ್ತರವಾಗಿದೆ, ಕಾರಣ ನಿತ್ಯ ನೂರಾರು ಲಾರಿಗಳು ಓಡಾಟವಾಗುತ್ತಿದ್ದು ರಸ್ತೆ ಪೂರ್ಣ ಹದೆಗೆಟ್ಟು ಕೆಸರಿನ ಗದ್ದೆಯಾಗಿದ್ದು ಪರಿಣಾಮ ಸರ್ಕಾರಿ ಬಸ್ಸು ರಸ್ತೆಯಿಂದ ಚರಂಡಿಯ ಭಾಗಕ್ಕೆ ಹೋಗಿ ಮರಕ್ಕೆ ಅಪ್ಪಳಿಸಿದ್ದು ಯಾವುದೇ ಅಪಾಯ ಉಂಟಾಗಿಲ್ಲ. ಈ ರಸ್ತೆಯಲ್ಲಿ ಪಾದಚಾರಿಗಳು ಸ್ವಲ್ಪ ಎಚ್ಚರ ತಪ್ಪಿದರೂ ಸಾಕು ಅಪಾಯಕಟ್ಟಿಟ್ಟ ಬುತ್ತಿ, ಕಾರಣ ಈ ರಸ್ತೆಯಲ್ಲಿ ರೈಲ್ವೆ ಅಥವಾ ಸ್ಟಾಕ್ ಯಾರ್ಡಗೆ ಅದಿರು ಹೊತ್ತು ತರುವಾಗ ಗಣಿಯಲ್ಲಿನ ಮಣ್ಣು ವಾಹನದ ಗಾಲಿಗೆ ಹತ್ತಿಕೊಂಡು ಅದು ರಸ್ತೆಯ ಮೇಲೆ ಸಂಚರಿಸುವಾಗ ರಸ್ತೆಯ ಮೇಲಿನ ನೀರಿನೊಂದಿಗೆ ಬೆರೆತು ಟಾರ್ ರಸ್ತೆ ಕೆಸರು ಮಯವಾಗಿದ್ದು, ಮಳೆ ಬಂದಾಗ ಜಿಗುಟಾಗಿರುವ ಈ ಮಣ್ಣಿನ ಮೇಲೆ ಸಂಚರಿಸುವಾಗ ಸ್ವಲ್ಪ ಗಮನ ಬೇರೆಡೆಗೆ ತೆರಳಿದರೂ, ವಾಹನಗಳಾಗಲಿ, ಪಾದಾಚಾರಿಗಳಾಗಲಿ ಜಾರಿ ಬೀಳುವುದು ಖಚಿತ, ಅಲ್ಲದೆ ಈ ಹಿಂದೆ ಅಂಕನಾಳ್ ನಿಂದ ಬಂದ ಯುವಕನೊಬ್ಬ ಸ್ವಲ್ಪ ವೇಗದಲ್ಲಿ ಬಂದು ಜಾರಿಕೆಯಿಂದ ರೈಲ್ವೆ ಕಂಬಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆಯೂ ನಡೆದಿದೆ.
ಭಾನುವಾರ, ಸೋಮುವಾರ ಹಾಗೂ ಮಂಗಳವಾರದಂದು ರಸ್ತೆ ಸಾರಿಗೆಯ ಬಸ್ ಕೆಸರಿನಿಂದ ತುಂಬಿದ ಮಾರ್ಗದಲ್ಲಿ ಬರುವಾಗ ಪಕ್ಕದ ತಗ್ಗಿಗೆ ಜಾರಿ ನಿಂತಿದೆ, ಅದೃಷ್ಟವಶಾತ್ ಬಸ್ಸಿನಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ. ಈ ಮಾರ್ಗದಲ್ಲಿ ಜನತೆ ಅನುಭವಿಸುತ್ತಿರುವ ತೊಂದರೆ ಕುರಿತು ಅಂಕಮನಾಳ್ ಗ್ರಾಮದ ನಿವಾಸಿಗಳು, ಕಾಳಿಂಗೇರಿ ಗ್ರಾ.ಪಂ. ಅಧ್ಯಕ್ಷ ಎನ್. ಕಾರ್ತಿಕ್ ಮಾತನಾಡಿ ಅಂಕಮನಾಳ್ ಮತ್ತು ಯಶವಂತನಗರ ಮಾರ್ಗಮಧ್ಯದಲ್ಲಿ ಅದಿರು ಸಾಗಾಣೆ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವ ಕಾರಣ ಬೇಸಿಗೆಯಲ್ಲಿ ವಿಪರೀತ ಧೂಲು, ಮಳೆಗಾಲದಲ್ಲಿ ಕೆಸರಿನ ರಾಡಿ ಹರಡಿರುತ್ತದೆ. ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗಿದ್ದು ಈ ಬಗ್ಗೆ ಉನ್ನತಾಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲವೆನ್ನುತ್ತಾರೆ.
ಈ ಮಾರ್ಗದಲ್ಲಿ ಸಂಚಿರುವ ಬೈಕ್, ಅಟೋಗಳು ಸ್ಕಿಡ್ ಅಗಿ ಬಿದ್ದಿವೆ, ಹಲವಾರು ಜನರು ಗಾಯಗೊಂಡು ಅಸ್ಪತ್ರೆ ಸೇರಿ ಚಿಕಿತ್ಸೆ ಪಡೆದಿದ್ದಾರೆ. ಭಾನುವಾರ ಈ ಮಾರ್ಗದಲ್ಲಿ ಸಾಗುತ್ತಿದ್ದ ಸಾರಿಗೆ ಬಸ್ಸು ಜಾರಿ ತಗ್ಗಿಗೆ ನಿಂತಿದೆ, ಅದರೆ ಸಾವು ಸಂಬಂಧಿಸಿಲ್ಲ, ಗಣಿ ಕಂಪನಿಯವರಿಗೆ ತಿಳಿಸಿದರು, ಆದಿಕಾರಿಗಳಿಗೆ ತಿಳಿಸಿದರೂ ಸಹ ಯಾವುದೇ ರೀತಿಯ ಕ್ರಮವಾಗಿಲ್ಲ, ಅದ್ದರಿಂದ ಅಪಾಯವಾಗುವುದಕ್ಕಿಂತ ಮೊದಲೇ ಅಧಿಕಾರಿಗಳು ತಕ್ಷಣ ಈ ರೀತಿಯ ಅವ್ಯವಸ್ಥೆಗೆ  ಪರಿಹಾಋ ಕಲ್ಪಿಸಬೇಕಾಗಿದೆ.
ತಾಲೂಕಿನ ಅಂಕಮನಾಳ್, ಹೀರಾಳು, ನಾಗೇನಹಳ್ಳಿ, ಚೋರನೂರು, ಡಿ.ಮಲ್ಲಾಪುರ ಮುಂತಾದ ಗ್ರಾಮಗಳಿಗೆ ಇದೇ ಮುಖ್ಯರಸ್ತೆಯಾಗಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ಅದಿರು ಲಾರಿಗಳ ಸಂಚಾರ ಮತ್ತು ರಸ್ತೆಯ ಮೇಲೆ ಬೀಳುವ ಕೆಸರಿನ ರಾಡಿಯನ್ನು ತಡೆಯಬೇಕು, ಅಲ್ಲದೆ ಕೋಟ್ಯಾಂತರ ಅದಾಯ ಪಡೆಯುವ ಗಣಿಕಂಪನಿಗಳು ಸಹ ಸಾರ್ವಜನಿಕರ ಹಿತವನ್ನು ಗಮನಿಸಬೇಕು, ಅಲ್ಲದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಇಲಾಖೆಯವರು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಸಭೆ ನಡೆಸಿ ಸೂಕ್ತ ಪರಿಹಾರ ಕಂಡುಕೊಂಡಾಗ ಮಾತ್ರ ಸಮಸ್ಯೆಬಗೆಹರಿಯುತ್ತದೆ ಎಂದು ಹೆಸರು ಹೇಳದ ಅಧಿಕಾರಿಗಳು ತಿಳಿಸುತ್ತಾರೆ