ಅದಿಯೋಗಿ ಪ್ರತಿಮೆ ಪ್ರತಿಷ್ಠಾಪನೆಗೆ ಹೈಕೋರ್ಟ್ ಅಸ್ತು

ಬೆಂಗಳೂರು.ಜ೧೩:ಚಿಕ್ಕಬಳ್ಳಾಪುರ ನಗರದ ಸಮೀಪವಿರುವ ಆವಲಗುರ್ಕಿಯಲ್ಲಿ ಆದಿ ಯೋಗಿ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಹೈಕೋರ್ಟ್ ಅವಕಾಶ ನೀಡಿದೆ.
ಆದಿಯೋಗಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ನಡೆಸಲು ಹೈಕೋರ್ಟ್ ಅನುಮತಿ ನೀಡಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ಉಪರಾಷ್ಟ್ರಪತಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇಂದು ನ್ಯಾಯಾಲಯದ ಕಲಾಪ ಪ್ರಾರಂಭವಾಗುತ್ತಿದ್ದಂತೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಅಶೋಕ್ ರಸ್, ಕಿಣಗಿ ಅವರಿದ್ದ ಪೀಠಕ್ಕೆ ಈಶಾ ಪ್ರತಿಷ್ಠಾನ ಮನವಿ ಮಾಡಿ ಕಾರ್ಯಕ್ರಮಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದ್ದರು.
ಇದನ್ನು ಪರಿಗಣಿಸಿದ ನ್ಯಾಯಲಯ ಆದಿಯೋಗಿ ಪ್ರತಿಷ್ಠಾಪನಾ ಕಾರ್ಯಕ್ರಮ ಪೂರ್ವನಿಗದಿಯಾಗಿದ್ದು, ಇದಕ್ಕೆ ಅಡ್ಡಿ ಮಾಡವುದು ಸರಿಯಲ್ಲ. ಮರಗಳನ್ನು ಕಡಿಯದಂತೆ ನಿರ್ಬಂಧ ಹೇರಿದ್ದು, ಯಥಾಸ್ಥಿತಿ ಮುಂದುವರೆಸಲು ಸೂಚನೆ ನೀಡಿದೆ.